• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಜೆಟ್ 2021: ರೈಲ್ವೆ ವಲಯದ ಅಭಿವೃದ್ಧಿಗೆ 110,055 ಕೋಟಿ ರೂ

|

ನವದೆಹಲಿ, ಫೆಬ್ರವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈಲ್ವೇ ವ್ಯವಸ್ಥೆಯ ಅಭಿವೃದ್ಧಿಗೆ ಹೊಸ ಘೋಷಣೆಗಳನ್ನು ಮಾಡಿದ್ದಾರೆ. 2021-22ನೇ ಸಾಲಿನ ರೈಲ್ವೆ ಯೋಜನೆಗಳಿಗೆ 1,10,055 ಕೋಟಿ ರೂ ಅನುದಾನ ಘೋಷಿಸಿದ್ದಾರೆ.

ಭಾರತೀಯ ರೈಲ್ವೆಯು 2030ರ ವೇಳೆಗೆ ರಾಷ್ಟ್ರೀಯ ರೈಲು ಯೋಜನೆಯನ್ನು ಹೊಂದಲಿದೆ. ಇದು ಭವಿಷ್ಯದ ರೈಲ್ವೆ ವ್ಯವಸ್ಥೆಯ ಉದ್ದೇಶ ಒಳಗೊಂಡಿರಲಿದೆ. ರೈಲ್ವೇಸ್ 2.17 ಲಕ್ಷ ಕೋಟಿ ರೂದಷ್ಟು ಮೊತ್ತದ ದಾಖಲೆಯ ಬಂಡವಾಳ ವೆಚ್ಚವನ್ನು ಹೊಂದಿದೆ. ರೈಲ್ವೆಗೆ 1.15 ಲಕ್ಷ ಕೋಟಿ ರೂ ನೀಡುತ್ತಿದ್ದು, ಅದರಲ್ಲಿ ಸಿಎಪಿಇಎಕ್ಸ್ (ಕ್ಯಾಪಿಟಲ್ ಎಕ್ಸ್‌ಪೆಂಡಿಚರ್) ಮೊತ್ತ 1.07 ಲಕ್ಷ ಕೋಟಿ ರೂ ಇರಲಿದೆ. ರೈಲ್ವೆಯು ಮುಂದೆ ಸರಕು ಸಾಗಣೆ ಕಾರಿಡಾರ್‌ಗೆ ಹೆಚ್ಚಿನ ಗಮನ ನೀಡಲಿದೆ.

ಸರ್ಕಾರವು ಭವಿಷ್ಯದಲ್ಲಿನ ಸರಕು ಕಾರಿಡಾರ್ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದು, 18,000 ಕೋಟಿ ರೂ ಮೊತ್ತದ ಸಾರ್ವಜನಿಕ ಸಾರಿಗೆಯ ಪಾಲನ್ನು ಪಡೆದುಕೊಳ್ಳುವತ್ತ ಕೆಲಸ ಮಾಡಲಿದ್ದೇವೆ. 2023ರ ಡಿಸೆಂಬರ್ ವೇಳೆಗೆ 100 ಬ್ರಾಡ್‌ಗೇಜ್ ರೈಲ್ವೇ ಹಳಿಗಳ ವಿದ್ಯುದೀಕರಣ ನಡೆಯಲಿದೆ.

ದೇಶದಾದ್ಯಂತ 702 ಕಿಮೀಯಷ್ಟು ಮೆಟ್ರೋ ರೈಲು ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದೆ. ಇನ್ನೂ 1016 ಕಿಮೀ ದೂರದ ಮಾರ್ಗಗಳ ಕಾಮಗಾರಿಗಳು ನಡೆಯುತ್ತಿವೆ. ಟೈರ್ 2 ನಗರಗಳು ಮತ್ತು ಟೈರ್ 1 ನಗರಗಳ ಸುತ್ತಮುತ್ತಲು ಮೆಟ್ರೋಲೈಟ್ ಮತ್ತು ಮೆಟ್ರೊನಿಯೊ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತದೆ ಎಂದು ನಿರ್ಮಲಾ ಪ್ರಕಟಿಸಿದ್ದಾರೆ.

ಟೈರ್ 2 ಮತ್ತು ಟೈರ್ 3 ನಗರಗಳಲ್ಲಿನ ಅನೇಕ ವಿಮಾನ ನಿಲ್ದಾಣಗಳು ಖಾಸಗೀಕರಣಗೊಳ್ಳಲಿವೆ. ರಸ್ತೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ 1.18 ಟ್ರಿಲಿಯನ್ ಕೋಟಿ ರೂ ಅನುದಾನ ನೀಡಲಾಗುತ್ತಿದ್ದು, ಇದರಲ್ಲಿ 1.08 ಟ್ರಿಲಿಯನ್ ಕೋಟಿ ರೂ ಮೊತ್ತವು ಬಂಡವಾಳ ವೆಚ್ಚವಾಗಿರಲಿದೆ. ಇದು ಈವರೆಗಿನ ವೆಚ್ಚದಲ್ಲಿಯೇ ಅತ್ಯಧಿಕವಾಗಲಿದೆ.

English summary
Union Budget 2021: Nirmala Sitharaman Announces Rs 110,055 Crore Allocated To Railways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X