ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Union Budget 2021: ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಆರೋಗ್ಯ ಕ್ಷೇತ್ರಕ್ಕೆ ಏನು ಸಿಗಬಹುದು?

|
Google Oneindia Kannada News

ಬೆಂಗಳೂರು, ಜನವರಿ 22: ಕಳೆದ ಆರ್ಥಿಕ ವರ್ಷದಲ್ಲಿ ಎಲ್ಲರ ನಿದ್ದೆಗೆಡಿಸಿದ್ದ ಕೊರೊನಾಕ್ಕೆ ಈ ಬಾರಿ ಬಜೆಟ್‌ನಲ್ಲಿ ಪ್ರಾಮುಖ್ಯತೆ ನೀಡುವುದು ಅನಿವಾರ್ಯವಾಗಿದೆ. ಕೊರೊನಾ ನಿಯಂತ್ರಣಕ್ಕೆ ಬಂದಿದ್ದರೂ, ಈಗ ರಾಜ್ಯದ ಜನತೆಗೆ ಲಸಿಕೆ ವಿತರಣೆ ಮಾಡುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ.

ಹೀಗಾಗಿ ಕೊರೊನಾ ಲಸಿಕಾ ವಿತರಣೆಗೆ ಈ ಬಾರಿಯ ಬಜೆಟ್‌ನಲ್ಲಿ ಸ್ಥೂಲವಾದ ನೀಲನಕ್ಷೆ ಹಾಗೂ ಅನುದಾನ ಹಂಚಿಕೆಯನ್ನು ಕಡ್ಡಾಯವಾಗಿ ನಿರೀಕ್ಷಿಸಬಹುದಾಗಿದೆ. ಕೊರೊನಾ ಲಸಿಕೆ ವಿತರಣೆ ಅಂದುಕೊಂಡಂತೆ ಸುಲಭದ ಕಾರ್ಯವಲ್ಲ, ರಾಜ್ಯದ ಆರೂವರೆ ಕೋಟಿ ಜನರಿಗೆ ತನ್ನ ಮಾರ್ಗಸೂಚಿಯಂತೆ ಎಲ್ಲಾ ರಾಜ್ಯಗಳು ಹಂತ ಹಂತವಾಗಿ, ಲಸಿಕೆ ವಿತರಿಸಬೇಕಿದೆ.

ಇದಕ್ಕೆ ಪೂರಕವಾಗಿ ರಾಜ್ಯಗಳಿಗೆ ಹೆಚ್ಚುವರಿ ಅನುದಾನವನ್ನು ಕೇಂದ್ರ ನೀಡಲೇಬೇಕಾಗುತ್ತದೆ, ಈಗಾಗಲೇ ರಾಜ್ಯದ ಪಾಲಿನ ಜಿಎಸ್‌ಟಿ ಹಣವನ್ನು ಹಿಂದಿರುಗಿಸಲು ಕೇಂದ್ರ ವಿಫಲವಾಗಿರುವಾಗ, ಹೆಚ್ಚುವರಿ ಅನುದಾನದ ಹೊರೆಯನ್ನು ಮತ್ತೆ ರಾಜ್ಯಗಳಿಗೆ ಹೊರಿಸದೆ ಕೇಂದ್ರ ನೆರವಿಗೆ ಬರಬೇಕಿದೆ. ಈ ಹಂತದಲ್ಲಿ ವಿತರಣಾ ವ್ಯವಸ್ಥೆ,ಶೇಖರಣೆ, ಜಾಗೃತಿ ಹಾಗೂ ಮುನ್ನೆಚ್ಚರಿಕೆ ಪ್ರಮುಖ ವಿಚಾರವಾಗಲಿದೆ.

ಇದು ಇವುಗಳಿಗೆ ಸರ್ಕಾರ ಸೂಕ್ತ ಮೂಲಭೂತ ಸೌಕರ್ಯದೊಂದಿಗೆ ಅನುದಾನ ಹಂಚಿಕೆ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ.

ಆರೂವರೆ ಕೋಟಿ ಜನತೆಗೆ ಲಸಿಕೆ ವಿತರಣೆ

ಆರೂವರೆ ಕೋಟಿ ಜನತೆಗೆ ಲಸಿಕೆ ವಿತರಣೆ

ರಾಜ್ಯದ ಪ್ರತಿಯೊಬ್ಬ ನಾಗರಿಕರಿಗೂ ಕೊರೊನಾ ಲಸಿಕೆ ವಿತರಣೆ ಮಾಡುವಾಗ ಈಗಿರುವಂತೆ ಜಿಲ್ಲೆಗೊಂದು ಲಸಿಕಾ ಕೇಂದ್ರ ಸ್ಥಾಪಿಸಲು ಸಾಧ್ಯವಿಲ್ಲ, ಪ್ರತಿ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಹಾಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಇದಕ್ಕೆ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ.ಹೀಗಾಗಿ ಪ್ರತಿ ತಾಲೂಕು ಹಂತದಲ್ಲೂ ಶೇಖರಣೆ ಹಾಗೂ ವಿತರಣೆಗೆ ವಿಶೇಷ ವ್ಯವಸ್ಥೆ ನಿರೀಕ್ಷಿಸಬಹುದಾಗಿದೆ.

ಲಸಿಕೆ ಕುರಿತು ಜಾಗೃತಿ ಕಾರ್ಯಕ್ರಮ

ಲಸಿಕೆ ಕುರಿತು ಜಾಗೃತಿ ಕಾರ್ಯಕ್ರಮ

ಕೊರೊನಾ ಲಸಿಕಾ ವಿತರಣಾ ಹಂತದಲ್ಲಿ ಜಾಗೃತಿ ಹಾಗೂ ಮುನ್ನೆಚ್ಚರಿಕೆ ಪ್ರಮುಖವಾಗಿದೆ. ಲಸಿಕೆ ಬಗ್ಗೆ ಅಪಪ್ರಚಾರವನ್ನು ನಿಯಂತ್ರಿಸಿ ಸಾರ್ವಜನಿಕರಲ್ಲಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲೇಬೇಕಾಗುತ್ತದೆ, ಇದರೊಂದಿಗೆ ಲಸಿಕೆಯ ಅಡ್ಡಪರಿಣಾಮ ಹಾಗೂ ಈ ಹಂತದಲ್ಲಿ ಹೊಸ ಕೊರೊನಾ ಪ್ರಕರಣಗಳ ನಿರ್ವಹಣೆ ಕೂಡ ಸರ್ಕಾರದ ಮೇಲಿದೆ ಇದಕ್ಕೆ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕಾಗಿದೆ, ಇಲ್ಲದಿದ್ದರೆ ಲಸಿಕೆ ವಿತರಣಾ ವ್ಯವಸ್ಥೆ ಹದಗೆಡಲಿದೆ.

ಗ್ರಾಮೀಣ ಪ್ರದೇಶದಲ್ಲಿ ವಿಶೇಷ ನಿಗಾ

ಗ್ರಾಮೀಣ ಪ್ರದೇಶದಲ್ಲಿ ವಿಶೇಷ ನಿಗಾ

ನಗರ ಪ್ರದೇಶಗಳಲ್ಲಿ ಲಸಿಕಾ ವಿತರಣೆ ಮಾಡಿದಂತೆ ಗ್ರಾಮೀಣ ಪ್ರದೇಶದಲ್ಲಿ ಸುಲಭವಿಲ್ಲ, ಮೊದಲನೆಯದಾಗಿ, ಗ್ರಾಮೀಣ ಪ್ರದೇಶದ ಜನರನ್ನು ಲಸಿಕೆ ಹಾಕಿಸಿಕೊಳ್ಳಲು ಒಪ್ಪಿಸಿಕೊಂಡು ಬರುವುದೇ ದೊಡ್ಡ ಸವಾಲಾಗಲಿದೆ.ಇನ್ನು ದೂರವಿರುವ ಪ್ರದೇಶಗಳಲ್ಲಿರುವ ಗ್ರಾಮೀಣ ಜನರಿಗೆ ಶೇಖರಿಸಿ, ಕೊಂಡೊಯ್ದು ನೀಡುವುದು ದೊಡ್ಡ ಸವಾಲಿನ ವಿಚಾರವಾಗಿದೆ. ಒಟ್ಟಾರೆ ವ್ಯವಸ್ಥೆಗೆ ಆರೋಗ್ಯಇಲಾಖೆಯು ತನ್ನ ಸಿಬ್ಬಂದಿಯನ್ನಲ್ಲದೆ, ಶಿಕ್ಷಣ , ಕಂದಾಯ ಹಾಗೂ ಇತರೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿಯನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಬಹುದು.

ಪ್ರತ್ಯೇಕ ಡೇಟಾಬೇಸ್‌

ಪ್ರತ್ಯೇಕ ಡೇಟಾಬೇಸ್‌

ಒಟ್ಟಾರೆ ಲಸಿಕಾ ವಿತರಣಾ ವ್ಯವಸ್ಥೆಯಲ್ಲಿ ನಾಗರಿಕರ ಮೇಲಿನ ನಿಗಾ ವ್ಯವಸ್ಥೆ ಕೂಡ ಪ್ರಮುಖವಾಗಿದೆ ಹೀಗಾಗಿ ಯಾರೂ ಲಸಿಕೆ ತೆಗೆದುಕೊಂಡಿದ್ದಾರೆ, ಯಾರು ತೆಗೆದುಕೊಂಡಿಲ್ಲ ಎನ್ನುವ ಡೇಟಾ ಬೇಸ್ ಮಾಡಲು ಕೂಡ ಸರ್ಕಾರ ಬಜೆಟ್‌ನಲ್ಲಿ ಅನುದಾನ ನೀಡಬೇಕಾಗಬಹುದು. ಹೀಗಾಗಿ ಈ ಬಾರಿ ಆರೋಗ್ಯ ಇಲಾಖೆಯ ಬಜೆಟ್‌ನಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಬಹುದು ಅದರಲ್ಲಿ ಕೊರೊನಾ ದೊಡ್ಡ ಮೊತ್ತವನ್ನು ಆವರಿಸಿಕೊಳ್ಳಬಹುದು.

ಇತರೆ ನಿರೀಕ್ಷೆಗಳು

ಇತರೆ ನಿರೀಕ್ಷೆಗಳು

*ರಾಜ್ಯಾದ್ಯಂತ ಮತ್ತಷ್ಟು ಜನೌಷಧಿ ಕೇಂದ್ರಗಳ ಸ್ಥಾಪನೆ
*ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಕುರಿತ ಗೊಂದಲ ನಿವಾರಣೆ
*ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಸ್ಥಾಪನೆ
*ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಆರಂಭ
*ರಾಜ್ಯಕ್ಕೆ ಏಮ್ಸ್ ಆಸ್ಪತ್ರೆ

English summary
Union Budget 2021: Union Budget is crucial thing for Karnataka's Health Sector, What People Can expect from Union Budget. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X