ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ?

|
Google Oneindia Kannada News

Recommended Video

Union Budget 2020 : ನಿರ್ಮಲಾ ಸಿತಾರಾಮನ್ ಕೊಟ್ಟ ಲೆಕ್ಕ ಕೇಳಿ ಪ್ರತಿಪಕ್ಷಗಳು ಶಾಕ್

ನವದೆಹಲಿ, ಫೆಬ್ರವರಿ 01: ಮೋದಿ 2.0 ಸರ್ಕಾರದ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜನ ಸಾಮಾನ್ಯರಿಗೆ ಏನು ನೀಡಿದ್ದಾರೆ. ಬಜೆಟ್ ನಿಂದ ನಮ್ಮ-ನಿಮ್ಮ ನಿತ್ಯ ಜೀವನದ ಮೇಲೆ ಆಗುವ ಪರಿಣಾಮಗಳೇನು? ನಾವು ದಿನ ನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಏರಿಕೆಯಾಗಲಿದೆ? ಯಾವ ವಸ್ತುಗಳ ಬೆಲೆ ಇಳಿಕೆಯಾಗಲಿದೆ? ಎಂಬುದರ ವಿವರ ಇಲ್ಲಿದೆ.

ಸರಕು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೊಂಡ ಬಳಿಕ ಏಕರೂಪದ ತೆರಿಗೆ ದೇಶದೆಲ್ಲೆಡೆ ಜಾರಿಗೊಂಡಿದೆ.ಈ ಮೂಲಕ ಗ್ರಾಹಕರ ಮೇಲೆ ಬೀಳುತ್ತಿದ್ದ ಹೆಚ್ಚುವರಿ ತೆರಿಗೆಗಳ ಮೇಲೆ ನಿಯಂತ್ರಣ ಹೊಂದಲಾಗಿದೆ. 40 ಲಕ್ಷ ಮಂದಿಯಿಂದ ಜಿಎಸ್ ಟಿ ಪಾವತಿಯಾಗಿದೆ. ಜಿಎಸ್ಟಿಯಿಂದಾಗಿ ತಿಂಗಳ ಬಜೆಟ್ ನಲ್ಲಿ ಸರಾಸರಿ 4% ಉಳಿತಾಯ ಸಾಧ್ಯವಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಭಾಷಣದಲ್ಲಿ ಹೇಳಿದರು.

ಆದಾಯ ತೆರಿಗೆ ಮಿತಿ ಹೆಚ್ಚಳವಿಲ್ಲ, ನಿರ್ಮಲಾ ಹೇಳಿದ ತೆರಿಗೆ ಲೆಕ್ಕವೇನು?ಆದಾಯ ತೆರಿಗೆ ಮಿತಿ ಹೆಚ್ಚಳವಿಲ್ಲ, ನಿರ್ಮಲಾ ಹೇಳಿದ ತೆರಿಗೆ ಲೆಕ್ಕವೇನು?

2020-21ನೇ ಸಾಲಿನ ಬಜೆಟ್ ನಲ್ಲಿ ನಿರೀಕ್ಷೆಯಂತೆ ಸಿಗರೇಟು, ತಂಬಾಕು ಪದಾರ್ಥ, ಮಾರ್ಬಲ್ ಸೇರಿದಂತೆ ಹಲವು ವಸ್ತುಗಳ ಮೇಲಿನ ತೆರಿಗೆ ಏರಿಸಲಾಗಿದೆ. ಆದರೆ, ಬೀಡಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಸೌರಫಲಕ, ಇಟ್ಟಿಗೆ, ಕಿವುಡು ಮೂಗರಿಗೆ ಬಳಸುವ ಸಾಧನಗಳು ಇತ್ಯಾದಿಗಳ ಮೇಲಿನ ಬೆಲೆ ಇಳಿಕೆಯಾಗಿದೆ.

ಯಾವುದು ಏರಿಕೆ?

ಯಾವುದು ಏರಿಕೆ?

* ಸಿಗರೇಟು, ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಏರಿಕೆ ಮಾಡಲಾಗಿದೆ.
* ಆಮದು ಪಾದರಕ್ಷೆ ಹಾಗೂ ಪೀಠೋಪಕರಣದ ಮೇಲೆ ಸೀಮಾಸುಂಕ ಏರಿಕೆ
* ಆಮದು ವೈದ್ಯಕೀಯ ಉಪಕರಣಗಳ ಮೇಲೆ ಆರೋಗ್ಯ ಸೆಸ್ ಏರಿಕೆ
* ಆಮದು ಗೋಡೆ ಫ್ಯಾನ್ಸ್ ಮೇಲೆ ಸೀಮಾಸುಂದ ಶೇ 7.5 ರಿಂದ ಶೇ 20ರಷ್ಟು ಏರಿಕೆ
* ಟೇಬಲ್ ವೇರ್, ಕಿಚನ್ ವೇರ್ (ಚೀನಾ ಸೆರಾಮಿಕ್ಸ್ ಅಥವಾ ಪೊರ್ಸಿಲಿನ್ ಪದಾರ್ಥ), ಉಕ್ಕು, ತಾಮ್ರ ಮೇಲಿನ ಸುಂಕ ಶೇ 20ಕ್ಕೇರಿಕೆ.
* ಕಾರಿನ ಬಿಡಿ ಭಾಗಗಳು, ಕ್ಯಾಟಲಿಸ್ಟ್ ಕನ್ವರ್ಟರ್, ಸುಗಂಧ ದ್ರವ್ಯ ಹಾಗೂ ಟಾಯ್ಲೆಟ್ ಸ್ಪ್ರೇ, ಡಿಯೋಡ್ರಂಟ್, ಶೇವಿಂಗ್ ಕ್ರೀಮ್ ಹಾಗೂ ಸಂಬಂಧಿಸಿದಂತ ಉತ್ಪನ್ನಗಳು

ಯಾವುದು ಇಳಿಕೆ

ಯಾವುದು ಇಳಿಕೆ

* ನ್ಯೂಸ್ ಪ್ರಿಂಟ್, ಹಗುರವಾದ ಕೋಟೆಡ್ ಕಾಗದ ಮೇಲೆ ಸುಂಕ ಶೇ 5ರಷ್ಟು ಇಳಿಕೆ
* ಜವಳಿ ಹಾಗೂ ಪ್ಲಾಸ್ಟಿಕ್ ಉತ್ಪನ್ನ ತಯಾರಿಕೆಯಲ್ಲಿ ಬಳಸುವ ಶುದ್ಧೀಕರಿಸಿದ ತೆರೆಫಾಥಾಲಿಕ್ ಆಮ್ಲದ ಮೇಲಿನ ಸುಂಕ ಕಡಿತ.
* ಕೃಷಿ-ಪಶು ಆಧಾರಿತ ಉತ್ಪನ್ನ, ತುನಾ ಬೈಟ್, ಸ್ಕಿಮ್ಡ್ ಹಾಲು, ಕೆಲವು ಆಲ್ಕೋಹಾಲ್ ಯುಳ್ಳ ಪೇಯಗಳು, ಸೋಯಾ ಫೈಬರ್, ಸೋಯಾ ಪ್ರೋಟಿನ್ ಮೇಲೆ ಸೀಮಾ ಸುಂಕ ತೆಗೆದು ಹಾಕಲಾಗಿದೆ.

ಬಜೆಟ್ 2020: ಗುಣಮಟ್ಟದ ಶಿಕ್ಷಣಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆಬಜೆಟ್ 2020: ಗುಣಮಟ್ಟದ ಶಿಕ್ಷಣಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ

ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ

ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ

ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ ಕಳೆದ ಬಜೆಟ್ ನಲ್ಲಿ ನೀಡಲಾಗಿತ್ತು. ಈ ಬಜೆಟ್ ನಲ್ಲೂ ಮುಂದುವರೆಸಲಾಗಿದೆ., ಇ ವಾಹನಗಳ ಜಿ ಎಸ್ ಟಿ ದರವನ್ನು ಶೇಕಡಾ 12ರ ಬದಲು ಶೇಕಡಾ 5ಕ್ಕೆ ಇಳಿಕೆ ಮಾಡಲಾಗಿದೆ. ಇ-ಸ್ಟಾರ್ಟ್ ಅಪ್ ಕಂಪನಿಗಳು ಏಂಜಲ್ ತೆರಿಗೆ ಪಾವತಿ ಮಾಡಬೇಕಾಗಿಲ್ಲ. ಸೌರಫಲಕ, ಇಟ್ಟಿಗೆ, ಕಿವುಡು ಮೂಗರಿಗೆ ಬಳಸುವ ಸಾಧನಗಳು ಇತ್ಯಾದಿಗಳ ಮೇಲಿನ ಬೆಲೆ ಇಳಿಕೆಯಾಗಿದೆ.

ನವೋದ್ಯಮಕ್ಕೆ ಮತ್ತೆ ಉತ್ತೇಜನ

ನವೋದ್ಯಮಕ್ಕೆ ಮತ್ತೆ ಉತ್ತೇಜನ

ನವೋದ್ಯಮಕ್ಕೆ ತೆರಿಗೆ ಪಾವತಿಯಲ್ಲಿ ವಿನಾಯಿತಿ ನೀಡುವ ಮೂಲಕ ಉತ್ತೇಜನ ಮುಂದುವರೆಸಲಾಗಿದೆ. ಗೃಹಸಾಲದ ಲಾಭಾಂಶದ ಮೇಲೆ ತೆರಿಗೆ ವಿನಾಯಿತಿ ಮುಂದುವರಿಕೆ, ಒಂದು ವರ್ಷದ ತನಕ ಲಾಭಾಂಶ ತೆರಿಗೆ ಕಟ್ಟುವಂತಿಲ್ಲ.
ದಾನ ದತ್ತಿ ಸಂಸ್ಥೆ ತೆರಿಗೆ ಪಾವತಿ ಸರಳೀಕರಣಗೊಳಿಸಲು ವಿಶಿಷ್ಟ ನೋಂದಣಿ ಸಂಖ್ಯೆ ನೀಡಲಾಗುತ್ತದೆ. ಜಿಎಸ್ಟಿ, ಡಿವಿಡೆಂಡ್ ವಿತರಣಾ ತೆರಿಗೆ ಇನ್ನಷ್ಟು ಸರಳಗೊಳಿಸಲಾಗಿದೆ.

English summary
Finance Minister Nirmala Sitharaman in which the Narendra Modi government announced changes on import duties of Gold and Electronic goods. Check out which things or goods becomes dearer and which becomes costlier after Budget 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X