ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಮಲಾ ಹೇಳಿದ ಬಜೆಟ್ 2020ರ ಮೂರು ಸ್ತಂಭಗಳು

|
Google Oneindia Kannada News

Recommended Video

Union budget 2020 : ದೇಶದ ಎಲ್ಲಾ ವರ್ಗಗಳಲ್ಲೂ ಅಭಿವೃದ್ಧಿಯ ಗುರಿ | Nirmala Sitaram | Oneindia kannada

ನವದೆಹಲಿ, ಫೆಬ್ರವರಿ 1: ಈ ಬಜೆಟ್ ಜನಸಾಮಾನ್ಯರನ್ನು ಕೇಂದ್ರೀಕರಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ಬಜೆಟ್ ಮಂಡನೆಯ ಆರಂಭದ ಮಾತುಗಳಲ್ಲಿ ತಿಳಿಸಿದರು.

2020ರ ಬಜೆಟ್ ಮೂರು ಸ್ತಂಭಗಳ ಮೇಲೆ ನಿಂತಿದೆ ಎಂದು ಅವರು ಹೇಳಿದರು. 1. ಮಹತ್ವಾಕಾಂಕ್ಷಿ ಭಾರತ, 2. ಆರ್ಥಿಕ ಅಭಿವೃದ್ಧಿ ಮತ್ತು 3. ಕಾಳಜಿಯುಕ್ತ ಸಮಾಜ.

Budget 2020 Live: ಬಜೆಟ್ ಭಾಷಣ ಆರಂಭಿಸಿದ ನಿರ್ಮಲಾ ಸೀತಾರಾಮನ್

ಮೊದಲ ಸ್ತಂಭವಾದ ಮಹತ್ವಾಕಾಂಕ್ಷಿ ಭಾರತವು ಸಮಾಜದ ಎಲ್ಲ ವರ್ಗಗಳನ್ನೂ ಒಳಗೊಂಡಿದ್ದು, ಜೀವನಮಟ್ಟದ ಸುಧಾರಣೆಯ ಗುರಿಯನ್ನು ಹೊಂದಿದೆ. ಆರ್ಥಿಕ ಅಭಿವೃದ್ಧಿಯು ದೇಶದ ಎಲ್ಲಾ ವಲಯಗಳ ಸಮಗ್ರ ಅಭಿವೃದ್ಧಿಯನ್ನು ಒಳಗೊಂಡಿದೆ.. ಹಾಗೂ ನಮ್ಮದು ಕಾಳಜಿಯುಕ್ತ ಸಮಾಜವಾಗಬೇಕು. ಸಮಾಜ ಮತ್ತು ಸಹಾನುಭೂತಿ ಒಳಗೊಳ್ಳಬೇಕು ಎಂದು ನಿರ್ಮಲಾ ಹೇಳಿದರು.

Union Budget 2020 Three Pillars Explained By Nirmala Sitharaman

ಮಹತ್ವಾಕಾಂಕ್ಷೆಯ ಭಾರತದ ಅಡಿಯಲ್ಲಿ ಮೂರು ವಲಯಗಳು ಬರುತ್ತವೆ. 1. ಕೃಷಿ, ನೀರಾವರಿ ಮತ್ತು ಗ್ರಾಮೀಣ ಅಭಿವೃದ್ಧಿ. 2. ಶುದ್ಧ ನೀರು ಮತ್ತು ನೈರ್ಮಲ್ಯ, 3. ಶಿಕ್ಷಣ ಎಂದು ಅವರು ತಿಳಿಸಿದರು.

English summary
Finance Minister Nirmala Sitharaman has explained the budget 2020 is based on three pillars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X