ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2020: ಗೃಹ ಸಾಲದ ಬಡ್ಡಿ ಮೇಲೆ ತೆರಿಗೆ ವಿನಾಯಿತಿ ಮತ್ತೊಂದು ವರ್ಷ ವಿಸ್ತರಣೆ

|
Google Oneindia Kannada News

ನವದೆಹಲಿ, ಫೆಬ್ರವರಿ 1: ಗೃಹ ಸಾಲದ ಬಡ್ಡಿಯ ಮೇಲೆ 3.5 ಲಕ್ಷ ರೂ.ವರೆಗೂ ನೀಡಲಾಗುತ್ತಿರುವ ತೆರಿಗೆ ವಿನಾಯಿತಿಯನ್ನು 2021ರ ಮಾರ್ಚ್ 31ರವರೆಗೂ ವಿಸ್ತರಿಸಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಕಳೆದ ಬಜೆಟ್‌ನಲ್ಲಿ ಗೃಹ ಸಾಲದ ಬಡ್ಡಿಯ ಮೇಲಿನ ತೆರಿಗೆ ವಿನಾಯಿತಿಯ ಮಿತಿಯನ್ನು 2 ಲಕ್ಷ ರೂ.ದಿಂದ 3.5 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಈ ಬಾರಿ ಗರಿಷ್ಠ ಮಿತಿಯನ್ನು ಹೆಚ್ಚಿಸದೆ ಇದ್ದರೂ, ಪ್ರಸ್ತುತ ಇರುವ ಸೌಲಭ್ಯವನ್ನು ವಿಸ್ತರಿಸಲಾಗಿದೆ.

ಬಜೆಟ್ ಭಾಷಣ: ತಮ್ಮ ದಾಖಲೆಯನ್ನು ತಾವೇ ಮುರಿದ ನಿರ್ಮಲಾ ಸೀತಾರಾಮನ್!ಬಜೆಟ್ ಭಾಷಣ: ತಮ್ಮ ದಾಖಲೆಯನ್ನು ತಾವೇ ಮುರಿದ ನಿರ್ಮಲಾ ಸೀತಾರಾಮನ್!

ಆದಾಯ ತೆರಿಗೆ ಕಾನೂನಿನ ಪ್ರಕಾರ ಜನರು ಗೃಹ ಸಾಲದ ಮೇಲಿನ ಬಡ್ಡಿ ಪಾವತಿಯನ್ನು ತಮ್ಮ ಒಟ್ಟು ಆದಾಯದಲ್ಲಿನ ಕಡಿತ ಎಂದು ಘೋಷಿಸಿಕೊಳ್ಳಲು ಅವಕಾಶವಿದೆ. ಪ್ರಸ್ತುತ ನಿಮಯದಡಿ 3.5 ಲಕ್ಷ ರೂವರೆಗೂ ಬಡ್ಡಿ ಮೇಲೆ ವಿನಾಯಿತಿ ಪಡೆಯಬಹುದು. ಇಷ್ಟು ಹಣ ಕಡಿತವಾದ ಬಳಿಕವಷ್ಟೇ ಆದಾಯ ತೆರಿಗೆ ಅನ್ವಯವಾಗುತ್ತದೆ. ಮೊದಲು ಇದನ್ನು 2019-20ರ ಅವಧಿಗೆ ಮಾತ್ರ ನೀಡಲಾಗಿತ್ತು. ಈಗ ಮತ್ತೊಂದು ವರ್ಷ ವಿಸ್ತರಿಸಲಾಗಿದೆ.

Union Budget 2020 Tax Benefit On Housing Loan Interest Extended For One Year

ಆದಾಯ ತೆರಿಗೆ ಮಿತಿ ಹೆಚ್ಚಳವಿಲ್ಲ, ನಿರ್ಮಲಾ ಹೇಳಿದ ತೆರಿಗೆ ಲೆಕ್ಕವೇನು?ಆದಾಯ ತೆರಿಗೆ ಮಿತಿ ಹೆಚ್ಚಳವಿಲ್ಲ, ನಿರ್ಮಲಾ ಹೇಳಿದ ತೆರಿಗೆ ಲೆಕ್ಕವೇನು?

2021ರ ಮಾರ್ಚ್ 31ರ ಒಳಗೆ 45 ಲಕ್ಷ ರೂ.ವರೆಗಿನ ಮೌಲ್ಯದ ಮನೆಗಾಗಿ ಗೃಹ ಸಾಲ ಪಡೆದುಕೊಂಡವರಿಗೆ ಇದರಿಂದ ಲಾಭವಾಗಲಿದೆ. ತಾವು ವಾಸವಿರುವ ಮನೆಗಳ ಗೃಹ ಸಾಲಕ್ಕೆ ಪಾವತಿಸಿದ ಬಡ್ಡಿಗೆ ಸಹ 2 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯಿತಿ ಇದ್ದು, ಅದರ ಮೇಲೆ ಸೆಕ್ಷನ್ 80EEA ಅಡಿ ಹೆಚ್ಚುವರಿವಾಗಿ 1.5 ಲಕ್ಷ ರೂ. ತೆರಿಗೆ ವಿನಾಯಿತಿ ನೀಡಲಾಗುತ್ತಿದೆ.

ಯಾವ ಇಲಾಖೆಗೆ ಎಷ್ಟು ಕೊಟ್ಟರು ನಿರ್ಮಲಾ ಸೀತಾರಾಮನ್ಯಾವ ಇಲಾಖೆಗೆ ಎಷ್ಟು ಕೊಟ್ಟರು ನಿರ್ಮಲಾ ಸೀತಾರಾಮನ್

ಸೆಕ್ಷನ್ 80ಸಿ ಅಡಿ ಅಸಲು ಮೊತ್ತದ 1.5 ಲಕ್ಷ ರೂ ಮಿತಿ ಮತ್ತು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24ರ ಅಡಿಯಲ್ಲಿನ 2 ಲಕ್ಷ ರೂ. ಬಡ್ಡಿಯ ಮೇಲಿನ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಲಿದೆ ಅಥವಾ ಮಿತಿಯನ್ನು ಕೈಬಿಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

English summary
Union Budget 2020: Finance Minister Nirmala Sitharaman announced that the tax benefit on housing loan interest upto Rs 3.5 lakh extended till March 31, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X