ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ಭಾಷಣ: ತಮ್ಮ ದಾಖಲೆಯನ್ನು ತಾವೇ ಮುರಿದ ನಿರ್ಮಲಾ ಸೀತಾರಾಮನ್!

|
Google Oneindia Kannada News

ನವದೆಹಲಿ, ಫೆಬ್ರವರಿ 1: ಬೆಳಿಗ್ಗೆ 11 ಗಂಟೆಗೆ ಬಜೆಟ್ ಭಾಷಣ ಆರಂಭಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಅದನ್ನು ಒಟ್ಟು 2 ಗಂಟೆ 41 ನಿಮಿಷಗಳ ಕಾಲ ಮುಂದುವರಿಸಿದರು. ಭಾಷಣದ ಇನ್ನೂ ಕೆಲವು ಅಂಶಗಳು ಬಾಕಿ ಇರುವಾಗಲೇ ಆಯಾಸಕ್ಕೊಳಗಾಗಿ ಬಜೆಟ್ ಮಂಡನೆ ಮೊಟಕುಗೊಳಿಸಿದರು.

ಇದು ದೇಶದ ಬಜೆಟ್ ಇತಿಹಾಸದಲ್ಲಿಯೇ ಅತ್ಯಂತ ಸುದೀರ್ಘಾವಧಿ ಭಾಷಣ. ಅಂದಹಾಗೆ, ಈ ಹಿಂದಿನ ದಾಖಲೆಯೂ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿಯೇ ಇದೆ. 2019ರ ಬಜೆಟ್ ಮಂಡನೆ ವೇಳೆ ತಾವೇ ನಿರ್ಮಿಸಿದ್ದ 2 ಗಂಟೆ 17 ನಿಮಿಷದ ಭಾಷಣದ ದಾಖಲೆಯನ್ನು ಶನಿವಾರ ಮುರಿದರು. 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಬಜೆಟ್ ಭಾಷಣ ಮಾಡಿದ್ದ ಆಗಿನ ಹಣಕಾಸು ಸಚಿವ ಜಸ್ವಂತ್ ಸಿಂಗ್, 2 ಗಂಟೆ 13 ನಿಮಿಷ ಭಾಷಣ ಮಾಡಿದ್ದರು.

ಇತಿಹಾಸದಲ್ಲೇ ಸುದೀರ್ಘ ಬಜೆಟ್ ಮಂಡನೆ, ಇದು ಹೊಗಳಿಕೆಯಲ್ಲ! ಇತಿಹಾಸದಲ್ಲೇ ಸುದೀರ್ಘ ಬಜೆಟ್ ಮಂಡನೆ, ಇದು ಹೊಗಳಿಕೆಯಲ್ಲ!

ಕಾಶ್ಮೀರಿ ಮತ್ತು ತಮಿಳು ಪದ್ಯಗಳನ್ನು ಬಜೆಟ್ ಭಾಷಣದ ಮಧ್ಯೆ ಉಲ್ಲೇಖಿಸಿದ ನಿರ್ಮಲಾ, ಒಟ್ಟಾರೆ ಬಜೆಟ್‌ನ ಪ್ರಮುಖ ಅಂಶಗಳನ್ನು ನಿಂತು ವಿವರಿಸುವಾಗ ದಣಿದಿದ್ದರು. ಹೀಗಾಗಿ ಎಲ್ಲ ಮಾಹಿತಿಗಳನ್ನು ನೀಡಲು ಅವರಿಗೆ ಸಾಧ್ಯವಾಗಲಿಲ್ಲ.

ಅತಿ ಹೆಚ್ಚು ಪದ ಬಳಸಿರುವುದು ಮನಮೋಹನ್ ಸಿಂಗ್

ಅತಿ ಹೆಚ್ಚು ಪದ ಬಳಸಿರುವುದು ಮನಮೋಹನ್ ಸಿಂಗ್

ಡಾ. ಮನಮೋಹನ್ ಸಿಂಗ್, 1991ರಲ್ಲಿ ನರಸಿಂಹರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಮಾಡಿದ್ದ ಸುದೀರ್ಘ ಬಜೆಟ್ ಭಾಷಣದಲ್ಲಿ 18,650 ಪದಗಳಿದ್ದವು. ಅತಿ ಹೆಚ್ಚು ಸಮಯದ ಭಾಷಣ ಮಾಡಿದ್ದರೂ, ನಿರ್ಮಲಾ ಅವರಿಗೆ ಮನಮೋಹನ್ ಸಿಂಗ್ ಅವರ ಅತ್ಯಧಿಕ ಪದಗಳ ಬಳಕೆಯ ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ. ನಿರ್ಮಲಾ ಭಾಷಣದಲ್ಲಿ 13,275 ಪದಗಳಿದ್ದವು. ಇನ್ನೂ ಎರಡು ಪುಟಗಳ ಭಾಷಣ ಬಾಕಿ ಇರುವಾಗಲೇ ಅವರು ಆಯಾಸಕ್ಕೊಳಗಾಗಿ ಮಾತು ನಿಲ್ಲಿಸಿದರು. 'ಇದು ಎಷ್ಟೊಂದು ಸುದೀರ್ಘ ಬಜೆಟ್. ನನಗೇ ಇಷ್ಟು ದೊಡ್ಡದಾಗಿದೆ ಎಂದು ಗೊತ್ತಿರಲಿಲ್ಲ' ಎಂದು ಮನಮೋಹನ್ ಸಿಂಗ್ ಹೇಳಿದ್ದರು.

ಭಾಷಣ ನಿಲ್ಲಿಸಲು ಸಲಹೆ ನೀಡಿದ ಮೋದಿ

ಭಾಷಣ ನಿಲ್ಲಿಸಲು ಸಲಹೆ ನೀಡಿದ ಮೋದಿ

ಊಟದ ಸಮಯ ಸಮೀಪಿಸಿದ್ದರಿಂದ ನಿರ್ಮಲಾ ಸುಸ್ತಾಗಿದ್ದರು. ಅವರಲ್ಲಿ ಬಳಲಿಕೆ ಕಾಣಿಸಿದಾಗ ಭಾಷಣ ಮೊಟಕುಗೊಳಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಲಹೆ ನೀಡಿದರು. ಆದರೆ ಇನ್ನು ಎರಡೇ ಪುಟಗಳು ಉಳಿದಿವೆ ಎಂದು ನಿರ್ಮಲಾ ಭಾಷಣ ಪೂರ್ಣಗೊಳಿಸಲು ಪ್ರಯತ್ನಿಸಿದರು. ಮತ್ತೆ ಮಾತು ಆರಂಭಿಸಿದಾಗ ಉಸಿರಾಡಲೂ ಕಷ್ಟಪಟ್ಟರು. ಆಗ ಪ್ರಧಾನಿ ನರೇಂದ್ರ ಮೋದಿ ಮಾತು ನಿಲ್ಲಿಸಿ ವಿರಮಿಸುವಂತೆ ಸಲಹೆ ನೀಡಿದರು. ಕೊನೆಗೆ ತಮ್ಮ ಭಾಷಣದ ಉಳಿದ ಭಾಗವನ್ನು ಸದನದ ಮೇಜಿನ ಮೇಲೆ ಇರಿಸಿ ನಿರ್ಮಲಾ ಕುಳಿತುಕೊಂಡರು.

ಕೇಂದ್ರ ಬಜೆಟ್-2020: ಭಾರತದಲ್ಲಿ 100 ಅಲ್ಲ, 105 ಸ್ಮಾರ್ಟ್ ಸಿಟಿಕೇಂದ್ರ ಬಜೆಟ್-2020: ಭಾರತದಲ್ಲಿ 100 ಅಲ್ಲ, 105 ಸ್ಮಾರ್ಟ್ ಸಿಟಿ

ಸತತ ಬಜೆಟ್ ಭಾಷಣ ಮಾಡಿದ್ದ ಜೇಟ್ಲಿ

ಸತತ ಬಜೆಟ್ ಭಾಷಣ ಮಾಡಿದ್ದ ಜೇಟ್ಲಿ

ಸತತ ಮೂರು ಅವಧಿಯಲ್ಲಿ ಸುದೀರ್ಘ ಬಜೆಟ್ ಭಾಷಣ ಮಾಡಿದವರೆಂದರೆ ಮಾಜಿ ಸಚಿವ ದಿ. ಅರುಣ್ ಜೇಟ್ಲಿ. 2018ರ ಬಜೆಟ್ ಭಾಷಣದಲ್ಲಿ ಅವರು 18,604 ಪದಗಳನ್ನು ಬಳಸಿದ್ದರು. ಮನಮೋಹನ್ ಸಿಂಗ್ ಅವರಿಗಿಂತ 46 ಕಡಿಮೆ ಪದಗಳನ್ನಷ್ಟೇ ಬಳಸಿದ್ದರು. ಈ ವೇಳೆ ಅವರು 1 ಗಂಟೆ 49 ನಿಮಿಷ ಮಾತನಾಡಿದ್ದರು. 2017ರಲ್ಲಿ ಜೇಟ್ಲಿ 1 ಗಂಟೆ 50 ನಿಮಿಷ ಭಾಷಣ ಮಾಡಿದ್ದರು. ಇದಕ್ಕೂ ಮೊದಲು 2015ರಲ್ಲಿ ಅವರು ಎರಡು ಗಂಟೆಗೂ ಹೆಚ್ಚು ಸಮಯ ಮಾತನಾಡಿದ್ದರು.

ಅನಣಾರೋಗ್ಯದ ನಡುವೆ 253 ಪ್ಯಾರಾ ಓದಿದ್ದ ಜೇಟ್ಲಿ

ಅನಣಾರೋಗ್ಯದ ನಡುವೆ 253 ಪ್ಯಾರಾ ಓದಿದ್ದ ಜೇಟ್ಲಿ

2014ರಲ್ಲಿ ಮೋದಿ ಸರ್ಕಾರದ ಮೊದಲ ಬಜೆಟ್ ವೇಳೆ 2 ಗಂಟೆ 10 ನಿಮಿಷ ಮಾತನಾಡಿದ್ದ ಜೇಟ್ಲಿ, ನಡುವೆ ನಾಲ್ಕು ನಿಮಿಷ ವಿರಾಮ ತೆಗೆದುಕೊಂಡಿದ್ದರು. ಆಗ ಅವರು 253 ಪ್ಯಾರಾಗ್ರಾಫ್‌ಗಳನ್ನು ಓದಿದ್ದರು. ಆ ಸಮಯದಲ್ಲಿ ಅವರಿಗೆ ಅನಾರೋಗ್ಯ ಕಾಡುತ್ತಿತ್ತು. 2012ರಲ್ಲಿ ಬಜೆಟ್ ಮಂಡಿಸಿದ್ದ ಪ್ರಣವ್ ಮುಖರ್ಜಿ, ಸುದೀರ್ಘ ಭಾಷಣ ಮಾಡಿದ್ದರು. ಅವರ ಬಜೆಟ್ ಭಾಷಣ 220 ಪ್ಯಾರಾಗಳನ್ನು ಒಳಗೊಂಡಿತ್ತು.

ಬಜೆಟ್ 2020: ಗುಣಮಟ್ಟದ ಶಿಕ್ಷಣಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆಬಜೆಟ್ 2020: ಗುಣಮಟ್ಟದ ಶಿಕ್ಷಣಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ

ಬಜೆಟ್‌ನ ಚಿಕ್ಕ ಭಾಷಣ

ಬಜೆಟ್‌ನ ಚಿಕ್ಕ ಭಾಷಣ

ಸ್ವಾತಂತ್ರ್ಯಾನಂತರದ ಮೊಟ್ಟ ಮೊದಲ ಕೇಂದ್ರ ಬಜೆಟ್, ಇತಿಹಾಸದಲ್ಲಿಯೇ ಅತ್ಯಂತ ಚಿಕ್ಕ ಬಜೆಟ್ ಭಾಷಣ ಎಂದೆನಿಸಿದೆ. ಆಗಿನ ಹಣಕಾಸು ಸಚಿವ ಆರ್‌ಕೆ ಷಣ್ಮುಖಂ ಚೆಟ್ಟಿ ಕೇವಲ 39 ಪ್ಯಾರಾಗ್ರಾಫ್‌ಗಳಲ್ಲಿಯೇ ಬಜೆಟ್ ಭಾಷಣ ಮಾಡಿದ್ದರು. ಆದರೆ ಅದರ ಬಳಿಕದ ಎಲ್ಲ ಬಜೆಟ್ ಭಾಷಣಗಳೂ ಸುದೀರ್ಘವಾಗುತ್ತಲೇ ಹೋದವು. ಪದಗಳ ಮಿತಿಯಲ್ಲಿ ಅತ್ಯಂತ ಚಿಕ್ಕ ಬಜೆಟ್ ಭಾಷಣವೆಂದರೆ 1977ರಲ್ಲಿ ಹಣಕಾಸು ಸಚಿವರಾಗಿದ್ದ ಎಚ್‌ಎಂ ಪಟೇಲರು ಮಂಡಿಸಿದ ಬಜೆಟ್. ಅವರ ಭಾಷಣ ಕೇವಲ 800 ಪದಗಳನ್ನು ಹೊಂದಿತ್ತು. ಅದು ಮಧ್ಯಂತರ ಬಜೆಟ್ ಆಗಿತ್ತು.

English summary
Finance Minister Nirmala Sitharaman on Saturday betters her own record of delivering longest budget speech in the history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X