ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ನಲ್ಲಿ ಜೇಬಿಗೆ ಭಾರ ಯಾವುದು, ಹಗುರ ಯಾವುದು?

|
Google Oneindia Kannada News

ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಮಂಡಿಸಲಾದ ಶುಕ್ರವಾರದ ಕೇಂದ್ರ ಬಜೆಟ್ ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಏನು ನೀಡಿದ್ದಾರೆ. ಯಾರ ಪಾಲಿಗೆ ಈ ಬಜೆಟ್ ಹೇಗೆ ಎಂಬುದನ್ನು ಮುಖ್ಯಾಂಶಗಳ ರೀತಿಯಲ್ಲಿ ನಿಮ್ಮ ಮುಂದೆ ಇಡಲಾಗುತ್ತಿದೆ.

* ಐದು ಲಕ್ಷ ರುಪಾಯಿ ತನಕ ಯಾವುದೇ ಆದಾಯ ತೆರಿಗೆ ಇಲ್ಲ. ಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ ಯಾವುದೇ ಬದಲಾವಣೆ ಪ್ರಸ್ತಾವ ಆಗಿಲ್ಲ.

ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ? ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ?

* ಮೆಚ್ಯೂರಿಟಿ ಸಂದರ್ಭದಲ್ಲಿ ಎನ್ ಪಿಎಸ್ ನಿಂದ ಒಟ್ಟಾರೆಯಾಗಿ ಅರವತ್ತು ಪರ್ಸೆಂಟ್ ವಿಥ್ ಡ್ರಾಗೆ ಯಾವುದೇ ತೆರಿಗೆ ಇಲ್ಲ.

Union Budget 2019: Which proposals are more heavy to your pockets?

* ನಲವತ್ತೈದು ಲಕ್ಷದೊಳಗಿನ ಮನೆ ಸಾಲವನ್ನು ಮಾರ್ಚ್ 31, 2020ರೊಳಗೆ ಪಡೆದಿದ್ದರೆ ಅದಕ್ಕೆ ಹೆಚ್ಚುವರಿ ಒಂದೂವರೆ ಲಕ್ಷ ತೆರಿಗೆ ವಿನಾಯಿತಿ ಹೆಚ್ಚುವರಿಯಾಗಿ ದೊರೆಯುತ್ತದೆ.

* ಆದಾಯ ತೆರಿಗೆ ರಿಟರ್ನ್ ಗೆ ಪ್ಯಾನ್ ಕಾರ್ಡ್ ಕಡ್ಡಾಯವಲ್ಲ. ಆಧಾರ್ ಇದ್ದರೂ ಸಾಕು.

* ತೆರಿಗೆದಾರರಿಗೆ ಅನುಕೂಲ ಆಗುವಂತೆ ಎಲೆಕ್ಟ್ರಾನಿಕ್ ವಿಧಾನದಲ್ಲಿ ಆದಾಯ ತೆರಿಗೆ ಅಸೆಸ್ ಮೆಂಟ್ ಅನ್ನು ಹಂತಹಂತವಾಗಿ ಆರಂಭಿಸಲಾಗುವುದು.

ಆದಾಯ ತೆರಿಗೆ ಪಾವತಿ ಮಿತಿ ಬಗ್ಗೆ ನಿರ್ಮಲಾ ಬಜೆಟ್ ನಲ್ಲಿ ಏನಿದೆ?ಆದಾಯ ತೆರಿಗೆ ಪಾವತಿ ಮಿತಿ ಬಗ್ಗೆ ನಿರ್ಮಲಾ ಬಜೆಟ್ ನಲ್ಲಿ ಏನಿದೆ?

* ಎರಡರಿಂದ ಐದು ಕೋಟಿ ಮತ್ತು ಏಳು ಕೋಟಿ ಆದಾಯ ಇರುವವರಿಗೆ ಕ್ರಮವಾಗಿ ಮೂರು ಹಾಗೂ ಏಳು ಪರ್ಸೆಂಟ್ ಗೆ ಸರ್ ಚಾರ್ಜ್ ಹೆಚ್ಚಳ.

* ರಸ್ತೆ ಹಾಗೂ ಮೂಲ ಸೌಕರ್ಯಕ್ಕಾಗಿ ಪೆಟ್ರೋಲ್ ಹಾಗೂ ಡೀಸೆಲ್ ಗೆ ಪ್ರತಿ ಲೀಟರ್ ಗೆ ಎರಡು ರುಪಾಯಿ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ.

ಸರ್ಕಾರಿ ನೌಕರರಿಗೆ ಮತ್ತೆ ನಿರಾಶೆ ಮೂಡಿಸಿದ ಕೇಂದ್ರ ಬಜೆಟ್ಸರ್ಕಾರಿ ನೌಕರರಿಗೆ ಮತ್ತೆ ನಿರಾಶೆ ಮೂಡಿಸಿದ ಕೇಂದ್ರ ಬಜೆಟ್

* ಚಿನ್ನ ಹಾಗೂ ದುಬಾರಿ ಲೋಹಗಳ ಆಮದು ಸುಂಕವು 10ರಿಂದ 12.5 ಪರ್ಸೆಂಟ್ ಗೆ ಏರಿಕೆ.

* ಬ್ಯಾಂಕ್ ಖಾತೆಯಿಂದ ವಾರ್ಷಿಕ ಒಂದು ಕೋಟಿ ರುಪಾಯಿ ವಿಥ್ ಡ್ರಾ ಮಾಡಿದರೆ ಎರಡು ಪರ್ಸೆಂಟ್ ಟಿಡಿಎಸ್.

English summary
Union Budget 2019: Which proposals are more heavy to your pockets? Here is an highlights of union budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X