• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆದಾಯ ತೆರಿಗೆ ಪಾವತಿ ಮಿತಿ ಬಗ್ಗೆ ನಿರ್ಮಲಾ ಬಜೆಟ್ ನಲ್ಲಿ ಏನಿದೆ?

|

ನವದೆಹಲಿ, ಜುಲೈ 05: ಮೋದಿ ಸರ್ಕಾರದ ನೂತನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ(ಜುಲೈ 05) ಪೂರ್ಣಾವಧಿ ಬಜೆಟ್ ಮಂಡನೆ ಮಾಡಿದ್ದಾರೆಈ ಬಾರಿಯ ಬಜೆಟ್ ನಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಕ್ರಮದ ಬಗ್ಗೆ ಹೆಚ್ಚಿನ ಮಹತ್ವ ಇದ್ದರೂ, ತೆರಿಗೆದಾರರಿಗೆ ಎಂದಿನಂತೆ ನಿರೀಕ್ಷೆಗಳು ಇದ್ದಿದ್ದು ಸುಳ್ಳಲ್ಲ. ಆದರೆ, ಆದಾಯ ತೆರಿಗೆ ಪಾವತಿ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 5 ಲಕ್ಷ ರು ತನಕ ವಾರ್ಷಿಕ ಆದಾಯವಿರುವ ಸಂಬಳದಾರರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ.

ಬಜೆಟ್ 2019: ಸ್ಟಾರ್ಟ್‌ ಅಪ್‌ಗೆ ತಲೆನೋವಾಗಿದ್ದ ಏಂಜಲ್ ಟಾಕ್ಸ್‌ ರದ್ದು

ಜುಲೈ 05ರಂದು ಚೊಚ್ಚಲ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಮವರ್ಗೀಯ ಸಂಬಳದಾರರಿಗೆ ಏನೆಲ್ಲ ನೀಡಬಹುದು ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

ರೈತರ ಆದಾಯ ದ್ವಿಗುಣ, ಶೂನ್ಯ ಬಂಡವಾಳ ಕೃಷಿಗೆ ಒತ್ತು

ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ನಿರೀಕ್ಷೆ ಈಗಾಗಲೇ ಈಡೇರಿದೆ. ವೃತ್ತಿಪರರ ತೆರಿಗೆದಾರ, ಸಣ್ಣ ತೆರಿಗೆದಾರರಿಗೆ ಅನುಕೂಲವಾಗಲು ಆದಾಯ ತೆರಿಗೆ ಇಲಾಖೆಯಿಂದ ಇ -ಸಹಯೋಗ ಯೋಜನೆ ಜಾರಿಗೊಳಿಸಲಿದೆ. ಕಳೆದ ಬಾರಿ ಬಜೆಟ್ ನಲ್ಲಿ ತೆರಿಗೆ ಪಾವತಿ ಮಿತಿ ಏರಿಕೆಯಾಗಿದೆ. ತೆರಿಗೆ ಪಾವತಿ, ಪಾವತಿ ವಿಧಾನ ಮಾತ್ರ ಬದಲಾವಣೆ ಘೋಷಣೆಯಾಗಿದೆ.

ಈ ಬಾರಿ ತೆರಿಗೆದಾರರಿಗೆ ಉತ್ತೇಜನ ನೀಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆನಲೈನ್ ನಲ್ಲಿ ತೆರಿಗೆ ಪಾವತಿ ವಿಧಾನ, ತೆರಿಗೆ ಪಾವತಿ ಸರಳೀಕರಣಗೊಳಿಸಲು ಹೆಚ್ಚಿನ ಮಹತವ ನೀಡಲಾಗಿದೆ. ಜೊತೆಗೆ ಎಲೆಕ್ಟ್ರಿಕ್ ವಾಹನದ ಮೇಲೆ 1.50 ಲಕ್ಷ ರೂಪಾಯಿಗಳವರೆಗಿನ ಸಾಲಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ.

ಕೇಂದ್ರ ಬಜೆಟ್ Live Updates: ಈ ವರ್ಷದಲ್ಲಿ ದೇಶ ಬಯಲುಶೌಚ ಮುಕ್ತ

ಮಿಕ್ಕಂತೆ ಆದಾಯ ತೆರಿಗೆ ಪಾವತಿ ಮಾಡಲಿ ಆಧಾರ್, ಪ್ಯಾನ್ ಕಾರ್ಡ್ ಎರಡರಲ್ಲಿ ಒಂದು ಹೊಂದಿದ್ದರೆ ಸಾಕು, ಎರಡು ಕಡ್ಡಾಯ ಎಂಬ ಸಡಿಲಗೊಳಿಸಲಾಗಿದೆ.

* ಒಂದು ಬ್ಯಾಂಕಿನ ಒಂದು ಖಾತೆಯಿಂದ ವಾರ್ಷಿಕ 1 ಕೋಟಿ ರು ವಿಥ್ ಡ್ರಾ ಮಾಡಿದರೆ ಶೇ 2ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ.

* ಕೈಗೆಟುಕುವ ದರದ ಮನೆ ಮೇಲಿನ ಸಾಲದಲ್ಲಿ 1.5 ಲಕ್ಷ ಕಡಿತ ಘೋಷಿಸಲಾಗಿದ್ದು, 2020ರ ಮಾರ್ಚ್ ತನಕ ಅನ್ವಯವಾಗಲಿದೆ.

* ವಾರ್ಷಿಕ 2 ಕೋಟಿ ರು ನಿಂದ 5 ಕೋಟಿ ರು ಆದಾಯ ಹೊಂದಿದವರಿಗೆ ತೆರಿಗೆ ಶೇ 3ರಷ್ಟು ಹೆಚ್ಚಳ.

* ವಾರ್ಷಿಕ 5 ಕೋಟಿ ರುಗೂ ಅಧಿಕ ಆದಾಯ ಹೊಂದಿದವರಿಗೆ ಶೇ 7ರಷ್ಟು ತೆರಿಗೆ

* ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್ಟಿ ದರವನ್ನು ಶೇಕಡಾ 12ರಿಂದ ಶೇಕಡ 5ಕ್ಕೆ ಇಳಿಕೆ ಮಾಡಲಾಗಿದೆ.

ಕಳೆದ ಬಜೆಟ್ ತೆರಿಗೆದಾರರಿಗೆ ಮುಖ್ಯಾಂಶಗಳು

ಕಳೆದ ಬಜೆಟ್ ತೆರಿಗೆದಾರರಿಗೆ ಮುಖ್ಯಾಂಶಗಳು

* ಐಟಿ ರಿಟರ್ನ್ಸ್ ಎಲ್ಲಾ ವಿಧಾನಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ಕೃತಕ ಬುದ್ಧಿಮತ್ತೆ(AI)ಬಳಸಿಕೊಂಡು ತೆರಿಗೆ ಪಾವತಿ ವ್ಯವಸ್ಥೆಯನ್ನು ಅಧಿಕಾರಿಗಳು ರಹಿತ, ಆನ್ ಲೈನ್ ವ್ಯವಸ್ಥೆಯಾಗಿ ಬದಲಾಯಿಸಲಾಗುತ್ತದೆ.

* 5 ಲಕ್ಷ ರು ತನಕ ತೆರಿಗೆ ಪಾವತಿಸಬೇಕಾಗಿಲ್ಲ.

* ಭವಿಷ್ಯ ನಿಧಿ ಹಾಗೂ ವಿಮೆ ಯಲ್ಲಿ ಹೂಡಿಕೆ ಮಾಡಿದರೆ 6.25 ಲಕ್ಷ ರು ತನಕ ತೆರಿಗೆ ವಿನಾಯಿತಿ ಇರುತ್ತದೆ.

* TDS ಅಡಿಯಲ್ಲಿ ಗೃಹಸಾಲದ ಮಿತಿ 1.5 ಲಕ್ಷರು ನಿಂದ 2 ಲಕ್ಷ ರುಗೆ ಏರಿಕೆ.

* ಸ್ಟಾಡರ್ಡ್ ಡಿಡಕ್ಷನ್ 40 ಸಾವಿರ ರು ನಿಂದ 50 ಸಾವಿರ ರು ಗೆ ಏರಿಕೆ.

2019-20ನೇ ಸಾಲಿನ ಬಜೆಟ್ ನಲ್ಲೂ ಈ ಎಲ್ಲಾ ಅಂಶಗಳನ್ನು ಮುಂದುವರೆಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಮೂಲ ತೆರಿಗೆ ಪಾವತಿ ಮಿತಿ

ಮೂಲ ತೆರಿಗೆ ಪಾವತಿ ಮಿತಿ

ಮೂಲ ತೆರಿಗೆ ಪಾವತಿ ಮಿತಿ : 5 ಲಕ್ಷ ರು ತನಕ ತೆರಿಗೆ ಪಾವತಿಸುವಂತಿಲ್ಲ, ಇನ್ನೊಂದಿಷ್ಟು ಉಳಿತಾಯ ತೋರಿಸಿದರೆ 9 ಲಕ್ಷ ರು ತನಕ ತೆರಿಗೆ ಕಟ್ಟದೆ ಇರಬಹುದು ಎಂದು ಸಂಬಳದಾರರಿಗೆ ಮೋದಿ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಆದರೆ, ತೆರಿಗೆ ಪಾವತಿ ಮೂಲ ಮಿತಿಯಾದ 2.5 ಲಕ್ಷ ರುಗಳನ್ನು 2014ರಿಂದ ಇಲ್ಲಿ ತನಕ ಬದಲಾಯಿಸಿಲ್ಲ. ಪ್ರಸ್ತುತ ಬಜೆಟ್ ನಲ್ಲಿ ಈ ಮಿತಿಯನ್ನು 3 ಲಕ್ಷ ರುಗಳಿಗೆ ಏರಿಸಲು ಬೇಡಿಕೆ ಬಂದಿದೆ. ಆದರೆ, ಈಗಾಗಲೇ ವೈಯಕ್ತಿಕ ಆದಾಯ 5 ಲಕ್ಷರು ತನಕ ಹೊಂದಿರುವವರು ಸೆಕ್ಷನ್ 87ಎ ಅಡಿಯಲ್ಲಿ ಪೂರ್ತಿ ತೆರಿಗೆ ರಿಬೇಟ್ ಪಡೆಯಬಹುದಾಗಿದೆ. ಹೀಗಾಗಿ, ಮೂಲ ಮಿತಿಯನ್ನು ಬದಲಾಯಿಸುವ ಸಾಧ್ಯತೆ ಕಡಿಮೆ.

9.5 ಲಕ್ಷ ರು ಆದಾಯವಿದ್ದರೂ ತೆರಿಗೆ ಕಟ್ಟಬೇಕಾಗಿಲ್ಲ

ತೆರಿಗೆದಾರರ ಸಂಖ್ಯೆ ಹೆಚ್ಚಳಕ್ಕೆ ಕ್ರಮ

ತೆರಿಗೆದಾರರ ಸಂಖ್ಯೆ ಹೆಚ್ಚಳಕ್ಕೆ ಕ್ರಮ

ನರೇಂದ್ರ ಮೋದಿ ಸರ್ಕಾರವು 2014ರಿಂದಲೂ ದೇಶದ ತೆರಿಗೆದಾರರ ಸಂಖ್ಯೆ ಹೆಚ್ಚಳ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದು, ಈ ಬಾರಿ ಕೂಡಾ ತೆರಿಗೆದಾರರ ಸಂಖ್ಯೆ ಹೆಚ್ಚಳಕ್ಕೆ ಬೇಕಾದ ಅಗತ್ಯ ಕ್ರಮಗಳತ್ತ ವಿತ್ತ ಸಚಿವರು ಗಮನ ಹರಿಸಿದ್ದಾರೆ. ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ನಿರೀಕ್ಷೆ ಈಗಾಗಲೇ ಈಡೇರಿದೆ. ವೃತ್ತಿಪರರ ತೆರಿಗೆದಾರ, ಸಣ್ಣ ತೆರಿಗೆದಾರರಿಗೆ ಅನುಕೂಲವಾಗಲು ಆದಾಯ ತೆರಿಗೆ ಇಲಾಖೆಯಿಂದ ಇ -ಸಹಯೋಗ ಯೋಜನೆ ಜಾರಿಗೊಳಿಸಲಿದೆ. ತೆರಿಗೆ ಪಾವತಿ ಸರಳಗೊಳಿಸುವುದು, ತೆರಿಗೆ ವಂಚಕರ ನಿಯಂತ್ರಣ, ಪಾವತಿದಾರರ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ.

ರಿಬೇಟ್ ದರ ಮಿತಿ ಏರಿಕೆಯಾಗಿತ್ತು

ರಿಬೇಟ್ ದರ ಮಿತಿ ಏರಿಕೆಯಾಗಿತ್ತು

ಕಳೆದ ಬಜೆಟ್ ನಲ್ಲಿ ರಿಬೇಟ್ ದರ ಮಿತಿ ಏರಿಕೆಯಾಗಿತ್ತು

* 5 ಲಕ್ಷ ರು ನಿಂದ 10 ಲಕ್ಷ ರು ತನಕ ಆದಾಯ ಹೊಂದಿರುವವರ ತೆರಿಗೆ ಶೇ 20.

* 50 ಲಕ್ಷ ದಿಂದ 1 ಕೋಟಿ ರು ವಾರ್ಷಿಕ ಆದಾಯ ಇರುವವರಿಗೆ ಶೇ10 ರಷ್ಟು ಸರ್ ಚಾರ್ಜ್

* ಕಡಿಮೆ ಆದಾಯ ಗಳಿಸುವ ಉದ್ಯೋಗಿಗಳ ವೈಯಕ್ತಿಕ ತೆರಿಗೆ ಹಿಂಪಡೆಯುವ (rebate) ಮಿತಿಯಲ್ಲಿ ಬದಲಾವಣೆ ಕಂಡು ಬಂದಿದೆ. ವಾರ್ಷಿಕವಾಗಿ 5 ಲಕ್ಷ ಆದಾಯ(Taxable Income) ಹೊಂದಿರುವವರಿಗೆ ಈ ಮೊತ್ತ 2,000 ರು ನಿಂದ 5,000 ರು ಗೆ ಏರಿಸಲಾಗಿದೆ. * ಮನೆ ಬಾಡಿಗೆ ಭತ್ಯೆ ಮಿತಿ ಹೆಚ್ಚಳ: HRA ದರ 24,000 ರು ನಿಂದ 60,000 ರು ಗೆ ಏರಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Finance Minister Nirmala Sitharaman in her maiden budget proposed no change in Income tax slabs. Aadhar and Pan Cards are now interchangeable in the filing of income tax returns. She told the House this will not only significantly reduce the hassle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more