ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ 2019 : ಮಾರುಕಟ್ಟೆಗೆ ಬರಲಿದೆ 20 ರೂ. ಹೊಸ ನಾಣ್ಯ

|
Google Oneindia Kannada News

ಬೆಂಗಳೂರು, ಜುಲೈ 05 : ದೃಷ್ಟಿ ಹೀನರೂ ಸಹ ಸುಲಭವಾಗಿ ಗುರುತಿಸಲು ಸಹಾಯಕವಾಗುವಂತಹ ಹೊಸ ನಾಣ್ಯಗಳನ್ನು ಪರಿಚಯಿಸಲಾಗುತ್ತದೆ ಎಂದು ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. 20 ರೂ.ಗಳ ಹೊಸ ನಾಣ್ಯ ಬಿಡುಗಡೆ ಮಾಡುವುದಾಗಿಯೂ ಘೋಷಿಸಲಾಗಿದೆ.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 2ನೇ ಬಜೆಟ್ ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಹಲವು ಘೋಷಣೆಗಳನ್ನು ಮಾಡಿದ್ದಾರೆ. ಹಲವು ವಸ್ತುಗಳ ಬೆಲೆಗಳು ಏರಿಕೆ, ಇಳಿಕೆಯಾಗಿವೆ.

ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ?ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ?

ದೃಷ್ಟಿ ಹೀನರಿಗೆ ಸಹ ಗುರುತಿಸಲು ಸಹಾಯಕವಾಗುವಂತೆ 1, 2, 5, 10 ಮತ್ತು 20 ರೂ.ಗಳ ಹೊಸ ನಾಣ್ಯಗಳನ್ನು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 2019ರ ಮಾರ್ಚ್‌ನಲ್ಲಿ ಮೋದಿ ನಾಣ್ಯಗಳನ್ನು ಬಿಡುಗಡೆ ಮಾಡಿದ್ದು, ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ.

ಕೇಂದ್ರ ಬಜೆಟ್ Liive Updates: ತೈಲ, ಚಿನ್ನ, ಮದ್ಯ ದುಬಾರಿಕೇಂದ್ರ ಬಜೆಟ್ Liive Updates: ತೈಲ, ಚಿನ್ನ, ಮದ್ಯ ದುಬಾರಿ

Union Budget 2019 : New series of coins to be released

20 ರೂ. ಹೊಸ ನಾಣ್ಯ : 20 ರೂ.ಗಳ ಹೊಸ ನಾಣ್ಯವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು. ಹೊಸ ನಾಣ್ಯ 27 ಮಿ.ಮೀ.ಇರಲಿದ್ದು, 854 ಗ್ರಾಂ ತೂಕ ಹೊಂದಿರುತ್ತದೆ. ಈಗಿರುವ 10 ರೂ. ನಾಣ್ಯಕ್ಕಿಂತ ಭಿನ್ನವಾಗಿರುತ್ತದೆ.

ಕೇಂದ್ರ ಬಜೆಟ್ 2019 : ಕರ್ನಾಟಕದ ನಾಯಕರ ಪ್ರತಿಕ್ರಿಯೆಕೇಂದ್ರ ಬಜೆಟ್ 2019 : ಕರ್ನಾಟಕದ ನಾಯಕರ ಪ್ರತಿಕ್ರಿಯೆ

ನಾಣ್ಯದ ಹೊರಭಾಗದ ಉಂಗುರ ಶೇ 65ರಷ್ಟು ತಾಮ್ರ, ಶೇ 15ರಷ್ಟು ಸತು, ಶೇ 20ರಷ್ಟು ನಿಕ್ಕಲ್ ಬಳಸಿ ತಯಾರು ಮಾಡಲಾಗುತ್ತದೆ. ಹಿಂದಿ ಮತ್ತು ಇಂಗ್ಲಿಶ್ ಭಾಷೆಯಲ್ಲಿ ನಾಣ್ಯದ ಮೇಲೆ 20 ರೂ. ಎಂದು ಬರೆಯಲಾಗುತ್ತದೆ.

ಕೃಷಿಯ ಪ್ರಾಮುಖ್ಯತೆಯನ್ನು ಸಾರಲು ನಾಣ್ಯದ ಮೇಲೆ ಧಾನ್ಯಗಳ ಚಿತ್ರ ಇರಲಿದೆ. ನಾಣ್ಯದ ಮುಂಭಾಗದಲ್ಲಿ ನಾಲ್ಕು ಸಿಂಹಗಳ ಲಾಂಚನ, ಸತ್ಯಮೇವ ಜಯತೆ ವಾಕ್ಯವನ್ನು ಮುದ್ರಿಸಲಾಗುತ್ತದೆ. 2009ರಲ್ಲಿ 10 ರೂ. ನಾಣ್ಯ ಪರಿಚಯಿಸಲಾಗಿತ್ತು. 10 ವರ್ಷಗಳ ಬಳಿಕ 20 ರೂ. ನಾಣ್ಯವನ್ನು ಬಿಡುಗಡೆ ಮಾಡಲಾಗುತ್ತದೆ.

English summary
Budget news in Kannada : Finance Minister Nirmala Sitharaman presented 2019-20 budget on July 5, 2019. In a budget speech minister announced that new series of coins of Rs 1, 2, 5, 10 and 20 easily identifiable to the visually impaired were released by 7th March 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X