ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷಕ್ಕೆ 5 ಲಕ್ಷದವರೆಗೆ ಆಸ್ಪತ್ರೆ ಖರ್ಚು ಭರಿಸುವ ಯೋಜನೆ ಘೋಷಣೆ

|
Google Oneindia Kannada News

Recommended Video

Union Budget 2018 :5 ಲಕ್ಷದವರೆಗೆ ಆಸ್ಪತ್ರೆ ಖರ್ಚು ಭರಿಸುವ ಅಯುಷ್ಮಾನ್ ಭಾರತ್ ಯೋಜನೆ ಘೋಷಣೆ | Oneindia Kannada

ರಾಷ್ಟ್ರೀಯ ಆರೋಗ್ಯ ರಕ್ಷಣೆ ಯೋಜನೆ ಅಡಿ ದೇಶದ ಐವತ್ತು ಕೋಟಿ ಮಂದಿಯನ್ನು ಒಳಗೊಂಡಂತೆ ಆರೋಗ್ಯ ಯೋಜನೆಯನ್ನು ಬಜೆಟ್ ನಲ್ಲಿ ಅರುಣ್ ಜೇಟ್ಲಿ ಘೋಷಿಸಿದರು. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಒಂದು ಕುಟುಂಬಕ್ಕೆ ಐದು ಲಕ್ಷ ರುಪಾಯಿವರೆಗೆ ವರ್ಷಕ್ಕೆ ಆಸ್ಪತ್ರೆ ಖರ್ಚನ್ನು ಆ ಯೋಜನೆ ಅಡಿ ಭರಿಸಲಾಗುತ್ತದೆ.

ಹತ್ತು ಕೋಟಿ ಬಡ ಕುಟುಂಬಗಳು ಈ ಯೋಜನೆ ಅಡಿ ಬರುತ್ತವೆ. ಇದು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆ ಆಗಿದೆ. ಇದೇ ಯೋಜನೆಯ ಇನ್ನೊಂದು ಭಾಗವಾಗಿ ಸಾವಿರದ ಇನ್ನೂರು ಕೋಟಿ ರುಪಾಯಿಯನ್ನು ಆರೋಗ್ಯ ಕೇಂದ್ರಗಳಿಗಾಗಿಯೇ ಮೀಸಲಿಡಲಾಗಿದೆ. ಕ್ಷಯ ರೋಗಿಗಳಿಗಾಗಿ ಪೌಷ್ಟಿಕತೆಗಾಗಿ ಆರು ನೂರು ಕೋಟಿ ಮೀಸಲಿಡಲಾಗಿದೆ.

ಕೇಂದ್ರ ಆಯವ್ಯಯ 2018 LIVE : ಜೇಟ್ಲಿಯಿಂದ ಕೃಷಿ ಪ್ರಧಾನ ಬಜೆಟ್ಕೇಂದ್ರ ಆಯವ್ಯಯ 2018 LIVE : ಜೇಟ್ಲಿಯಿಂದ ಕೃಷಿ ಪ್ರಧಾನ ಬಜೆಟ್

ಇಪ್ಪತ್ನಾಲ್ಕು ಹೊಸ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ನಿರ್ಧರಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯು ಮಹತ್ವದಾಗಿದ್ದು, ಇದರಿಂದ ಗ್ರಾಮೀಣ- ನಗರ ಭಾಗ ಎಂಬ ಭೇದವಿಲ್ಲದೆ ಜಾರಿಗೆ ತಂದಿದ್ದೇ ಆದರೆ ದೊಡ್ಡ ಮಟ್ಟದ ಅನುಕೂಲ ಆಗಲಿದೆ. ದೇಶದ ಒಟ್ಟು ಜನಸಂಖ್ಯೆಯ ಶೇ ನಲವತ್ತರಷ್ಟು ಇದರ ಅಡಿ ಬರಲಿದೆ.

Union budget 2018: Up to 5 lakh hospital expense bear under Ayushman Bharat

* ಆಯುಷ್ಮಾನ್ ಭಾರತ್ ಯೋಜನೆ ಅಡಿ ಐವತ್ತು ಕೋಟಿ ಮಂದಿಗೆ ಅನುಕೂಲ

* ಹತ್ತು ಕೋಟಿ ಕುಟುಂಬಗಳಿಗೆ ಇದರಿಂದ ಅನುಕೂಲ

* ವಾರ್ಷಿಕ ಐದು ಲಕ್ಷದವರೆಗಿನ ಆಸ್ಪತ್ರೆ ಖರ್ಚನ್ನು ಭರಿಸಲಾಗುತ್ತದೆ

English summary
Under Ayushman Bhart scheme Up to 5 lakh hospital expenses of poor families will bear. It helps 10 crore poor families in country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X