ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಮವರ್ಗದ್ದು ದ್ರೌಪದಿಯ ಪಾತ್ರ! ಬಜೆಟ್ ಗೆ ಶ್ರೀಸಾಮಾನ್ಯನ ವ್ಯಂಗ್ಯ

|
Google Oneindia Kannada News

ನವದೆಹಲಿ, ಫೆಬ್ರವರಿ 02: "ಕೇಂದ್ರ ಬಜೆಟ್ ನಂತರ ಮಧ್ಯಮ ವರ್ಗದ ಸ್ಥಿತಿ ದ್ರೌಪದಿಯಂತಾಗಿದೆ. ಸೀರೆ ಆದಾಯವಿದ್ದಂತೆ, ಶ್ರೀಕೃಷ್ಣ ಸಾಕಷ್ಟು ಕೊಟ್ಟರೂ, ಇತ್ತ ದುಶ್ಶಾಸನ (ತೆರಿಗೆ) ಎಳೆದು ಬಂದಿದ್ದೆಲ್ಲವನ್ನೂ ಕಿತ್ತುಕೊಳ್ಳುತ್ತಿದ್ದಾನೆ! ಇವನ್ನೆಲ್ಲ ದುರ್ಯೋಧನ (ಸರ್ಕಾರ) ನೋಡಿ ಮಜಾ ತೆಗೆದುಕೊಳ್ಳುತ್ತಾನೆ" ಹಾಗೊಂದು ವ್ಯಂಗ್ಯ ಭರಿತ ಟ್ವೀಟ್ ಕೇಂದ್ರ ಬಜೆಟ್ ಕುರಿತ ಅಸಮಾಧಾನವನ್ನು ಹೊರಹಾಕಿದೆ!

ಕೌತುಕದಿಂದ ಕಾಯುತ್ತಿದ್ದ ಕೇಂದ್ರ ಬಜೆಟ್ ನಿನ್ನೆ(ಫೆ.1) ಘೋಷಣೆಯಾಗಿದೆ. ಮಧ್ಯಮ ವರ್ಗದ ಜನರತ್ತ ಈಗಲಾದರೂ ಸರ್ಕಾರ ತಿರುಗಿ ನೋಡಬಹುದು ಎಂದುಕೊಂಡಿದ್ದರೆ ಅದು ಸುಳ್ಳಾಗಿದೆ. ತೆರಿಗೆ ವಿನಾಯಿತಿ ಮಿತಿಯನ್ನು ಏರಿಸುವ, ಆದಾಯ ತೆರಿಗೆ ಸ್ಲಾಬ್ ನಲ್ಲಿ ಬದಲಾವಣೆ ಮಾಡುವ ಯಾವ ನಿರ್ಧಾರವನ್ನೂ ಸರ್ಕಾರ ಕೈಗೊಳ್ಳದಿರುವುದು ಮಧ್ಯಮ ವರ್ಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬಜೆಟ್ 2018: ಯಾವುದು ಏರಿಕೆ? ಯಾವುದು ಇಳಿಕೆ?ಬಜೆಟ್ 2018: ಯಾವುದು ಏರಿಕೆ? ಯಾವುದು ಇಳಿಕೆ?

ತೆರಿಗೆ ಕಸಿಯುವಾಗ ಮಾತ್ರ ಮಧ್ಯಮ ವರ್ಗ ನೆನಪಾಗಬೇಕೆ? ಕೊಡುಗೆ ನೀಡುವಾಗ ನಮ್ಮನ್ನು ಕಡೆಗಣಿಸುವುದೇಕೆ? ಎಂಬುದು ಮಧ್ಯಮ ವರ್ಗದ ಶ್ರೀಸಾಮಾನ್ಯನ ಪ್ರಶ್ನೆ.

ಮಧ್ಯಮ ವರ್ಗದೆಡೆ ತಾತ್ಸಾರದ ನೋಟ ಬೀರಿರುವ ಕೇಂದ್ರ ಬಜೆಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿನ್ನೆಯಿಂದ ವಿಡಂಬನಾತ್ಮಕ ಟ್ವೀಟ್ ಗಳು ಹರಿದಾಡುತ್ತಲೇ ಇವೆ. ಅವುಗಳತ್ತ ಒಂದು ನೋಟ...

ವ್ಯಂಗ್ಯ, ಕುಹಕ, ಆಕ್ರೋಶದ ಸರಕಾಯ್ತೇ ಕೇಂದ್ರ ಬಜೆಟ್?!ವ್ಯಂಗ್ಯ, ಕುಹಕ, ಆಕ್ರೋಶದ ಸರಕಾಯ್ತೇ ಕೇಂದ್ರ ಬಜೆಟ್?!

ಶ್ರೀಸಾಮಾನ್ಯನದ್ದು ದ್ರೌಪದಿಯ ಸ್ಥಿತಿ!

ಭಾರತದಲ್ಲಿ ಬಜೆಟ್ ನಂತರ ಮಧ್ಯಮ ವರ್ಗದ ಸ್ಥಿತಿಯೇನು ಎಂಬುದನ್ನು ಒಂದು ಚಿತ್ರದ ಮೂಲಕ ಟ್ವೀಟ್ ಮಾಡಿದ್ದಾರೆ ಅಂಕಿತ್ ಸದಾರಿಯಾ.

ಮಧ್ಯಮ ವರ್ಗಕ್ಕೆ ತೆರಿಗೆ ಉಳಿತಾಯ

ಮಧ್ಯಮ ವರ್ಗಕ್ಕೆ ತೆರಿಗೆ ಉಳಿತಾಯ ಎಂದರೆ ಇದೇ. ಅವರು ಯಾವಾಗಲೂ ತ್ಯಾಗ ಮಾಡಬೇಕು. ಬಜೆಟ್ ಒಂದೋ ಬಡವರ ಸಿಂಪತಿಗೆ ಇಲ್ಲ, ಶ್ರೀಮಂತರ ಸೌಲಭ್ಯಕ್ಕೆ ಮೀಸಲಾಗಿರುತ್ತದೆ ಎಂದಿದ್ದಾರೆ ಅಶಿಮಾ.

ಮಧ್ಯಮ ವರ್ಗವನ್ನು ಗಂಭೀರವಾಗಿ ನೋಡಿ

ಬಹುಶಃ 2019 ರ ನಂತರ ಭಾರತೀಯ ರಾಜಕಾರಣಿಗಳು ಮಧ್ಯಮ ವರ್ಗದ ಜನರನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎನ್ನಿಸುತ್ತೆ. ಇದು ದೇಶಕ್ಕೂ ಒಳ್ಳೆಯದು ಎಂದು ಅಸುರಾ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಪ್ರಾಮಾಣಿಕ ತೆರಿಗೆದಾರನ ಕತೆ ಇದು!

ನಾನೊಬ್ಬ ಮಧ್ಯಮ ವರ್ಗದ ಪ್ರಾಮಾಣಿಕ ತೆರಿಗೆದಾರ. ಈ ಬಾರಿಯ ಬಜೆಟ್ ನಲ್ಲಿ ನಮಗೇನಾದರೂ ಸಿಕ್ಕುತ್ತಾ ಎಂದು ನಾನು ಹುಡುಕಿದ್ದು ಹೀಗೆ.

ಸದಾ ನಿಮ್ಮೊಂದಿಗಿದ್ದ ಅವರಿಗೆ ನೀವೇನು ಕೊಟ್ಟಿದ್ದೀರಿ?

ಎಲ್ ಪಿಜಿ ಸಬ್ಸಿಡಿ ಸಮಯದಲ್ಲೂ ಅವರು ಸರ್ಕಾರದೊಂದಿಗೆ ನಿಂತರು, ಅಪನಗದೀಕರಣದ ಸಮಯದಲ್ಲೂ ಅವರು ನಿಮ್ಮೊಂದಿಗೆ ನಿಂತರು, ಜಿಎಸ್ಟಿ ಜಾರಿಯ ನೋವನ್ನು ಅವರೇ ಹೊತ್ತುಕೊಂಡರು... ಆದರೆ ಅವರಿಗೆ ನೀವು ನಿಮ್ಮ ಬಜೆಟ್ ನಲ್ಲಿ ನೀಡಿದ್ದೇನು? ಇದು ನಿಜಕ್ಕೂ ಅತ್ಯಂತ ಕೆಟ್ಟ ರಾಜಕಾರಣ ಮತ್ತು ಆರ್ಥಿಕತೆ. ದಯವಿಟ್ಟು ಮಧ್ಯಮವರ್ಗವನ್ನು ಟೇಕನ್ ಫಾರ್ ಗ್ರಾಂಟೆಂದ್ ಎಂದುಕೊಳ್ಳುವುದನ್ನು ಬಿಡಿ ಎಂದಿದ್ದಾರೆ ಅಶ್ವಿನ್ ಶುಕ್ಲಾ.

English summary
Union Budget 2018: Finance minister Arun Jaitley presented union budget for the financial year 2018-19 on Feb 1st. Many people critisise budget is not caring about middle class people. Social media people on twitter still blaming Jaitley's budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X