ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೈಲಿ ಹಂಟ್ ನಲ್ಲಿ ಮೋದಿ ಸರ್ಕಾರದ ಕೇಂದ್ರ ಬಜೆಟ್ 2018 ಲೈವ್

By Mahesh
|
Google Oneindia Kannada News

ಬೆಂಗಳೂರು, ಜನವರಿ 30: ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಅರುಣ್ ಜೇಟ್ಲಿ ಅವರು ಸಿದ್ಧರಾಗಿದ್ದಾರೆ. ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಆರಂಭವಾಗಿದ್ದು, ಆರ್ಥಿಕ ಸಮೀಕ್ಷೆ ವರದಿಯನ್ನು ಮಂಡಿಸಿದ್ದಾರೆ.

ನಿರೀಕ್ಷೆಯಂತೆ 2018-19ನೇ ಸಾಲಿನ ಆಯ ವ್ಯಯ ಪತ್ರದಲ್ಲಿ ಜನಪರ, ಉದ್ಯೋಗಿಗಳ ಹಿತ ಕಾಯುವ ಅಂಶಗಳು ಹೆಚ್ಚಾಗಿರುವ ಸಾಧ್ಯತೆಗಳಿವೆ. ಫೆಬ್ರವರಿ 01ರ ಗುರುವಾರದಂದು ಕೇಂದ್ರ ಬಜೆಟ್ ಮಂಡನೆಯ ವಿವರಗಳ ಅಪ್ಡೇಟ್ ಗಳನ್ನು ಡೈಲಿ ಹಂಟ್ ನಲ್ಲಿ ಲೈವ್ ನಲ್ಲಿ ಪಡೆಯಿರಿ.

Union Budget 2018 : Live coverage on Oneindia Kannada

ವಿತ್ತೀಯ ಕೊರತೆ ಅನುಭವಿಸುತ್ತಿರುವುದರಿಂದ ತೆರಿಗೆ ವ್ಯವಸ್ಥೆ ಬದಲಾವಣೆ, ಸರಳೀಕೃತ ಪಾವತಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಯಿದೆ. ವೈಯಕ್ತಿಕ ಆದಾಯ ತೆರಿಗೆದಾರರಿಗೆ ಆದಾಯ ತೆರಿಗೆ ಮಿತಿ ಹಾಗೂ ನೇರ ತೆರಿಗೆಯಲ್ಲಿ ಬದಲಾವಣೆ ನಿರೀಕ್ಷಿತ.

ಕರ್ನಾಟಕ ಸೇರಿದಂತೆ 8 ರಾಜ್ಯಗಳ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಮಂಡಿಸಲಿರುವ 2018-19ನೆ ಸಾಲಿನ ಬಜೆಟ್ ಜನಸ್ನೇಹಿ, ಪ್ರಗತಿಪರವಾಗಿರುತ್ತದೆ ಎನ್ನಬಹುದು.

ಬಜೆಟ್‍ನಲ್ಲಿ ಮಹಿಳೆಯರು, ರೈತರು, ಸಮಾಜದ ದುರ್ಬಲ ವರ್ಗದವರು ಮತ್ತು ಹಿಂದುಳಿದ ಸಮುದಾಯದವರಿಗೆ ಹೊಸ ಯೋಜನೆಗಳು ಪ್ರಕಟಿಸುವ ನಿರೀಕ್ಷೆಯಿದೆ. ಮುಖ್ಯವಾಗಿ ನಿರುದ್ಯೋಗ ನಿವಾರಣೆ, ಡಿಜಿಟಲ್ ಇಂಡಿಯಾಕ್ಕೆ ಇನ್ನಷ್ಟು ಬಲ ತುಂಬುವ ಯುವಜನ ಸಬಲೀಕರಣಕ್ಕೆ ಪ್ರಾಮುಖ್ಯತೆ ಕೊಡುವ ಸಾಧ್ಯತೆಯಿದೆ. ಎಂದಿನಂತೆ ಕಾಳಧನಿಕರ ವಿರುದ್ಧ ಕಠಿಣ ಕ್ರಮ, ಪಾರದರ್ಶಕ ಮತ್ತು ಸುಗಮ ಹಣಕಾಸು ವಹಿವಾಟು ಅನುಸರಿಸಲು ಕ್ರಮಗಳನ್ನು ಸೂಚಿಸಬಹುದು.

English summary
Union Budget 2018 : Union Budget will be presented by Finance Minister, Arun Jaitely. Expectations are high on general cum Railway budget this time since Karnataka will be facing Assembly Election in coming months. Catch all the live updates and highlights in Kannada on Oneindia portal and Daily Hunt
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X