ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೇಟ್ಲಿ ಮಂಡಿಸಿದ ಕೇಂದ್ರ ಬಜೆಟ್ 2018 ಮುಖ್ಯಾಂಶಗಳು

By Prasad
|
Google Oneindia Kannada News

Recommended Video

      ಕೇಂದ್ರ ಬಜೆಟ್ 2018 : ಲೋಕಸಭೆಯಲ್ಲಿ ಶುರುವಾದ ಕಲಾಪ

      ನವದೆಹಲಿ, ಫೆಬ್ರವರಿ 1 : ಬಡವರಿಂದ ಹಿಡಿದು ಶ್ರೀಮಂತ ಜನರ ಅಪಾರ ನಿರೀಕ್ಷೆಗಳ ಮೂಟೆಯನ್ನು ಹೊತ್ತುಕೊಂಡು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರು ಫೆಬ್ರವರಿ 1ರ ಗುರುವಾರದಂದು 2018-19ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ.

      ಬಜೆಟ್ಟಿನಲ್ಲಿ ಕೃಷಿ ಉದ್ಯಮ ಮತ್ತು ಗ್ರಾಮೀಣ ಜನತೆಯನ್ನು ಗಮನದಲ್ಲಿಟ್ಟುಕೊಂಡು ಅರುಣ್ ಜೇಟ್ಲಿಯವರು ಹಲವಾರು ಯೋಜನೆಗಳನ್ನು ಹರಿಯಬಿಟ್ಟಿದ್ದಾರೆ. ಕೃಷಿಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಡೆಗಣಿಸುತ್ತಿದೆ ಎಂದು ವಿರೋಧಿಗಳಿಂದ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು.

      ಆದಾಯ ತೆರಿಗೆ ಮಿತಿಯನ್ನು ಮುಟ್ಟದಿರುವುದು ಕೆಳಮಧ್ಯಮ ವರ್ಗದ ಜನತೆಗೆ ಭಾರೀ ನಿರಾಶೆ ಉಂಟು ಮಾಡಿದೆ. ಶಿಕ್ಷಣ ಸೆಸ್ ಶೇ.4ರಷ್ಟು ಏರಿಸಿರುವುದು ಕೂಡ ಮಧ್ಯಮ ಜನರಿಗೆ ಬಿಸಿ ತಟ್ಟಿಸಲಿದೆ. ಇನ್ನು ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಗ್ರಾಮೀಣ ಜನತೆಗೆ ಸಾಕಷ್ಟು ಸೌಲಭ್ಯಗಳನ್ನು ಜೇಟ್ಲಿ ಒದಗಿಸಿದ್ದಾರೆ.

      Union Budget 2018 by Arun Jaitley LIVE Updates

      Newest FirstOldest First
      12:57 PM, 1 Feb

      ಶಿಕ್ಷಣ ಸೆಸ್ ಶೇ.4ರಷ್ಟು ಏರಿಕೆ. ಶಿಕ್ಷಣ ಆಗಲಿದೆ ಇನ್ನಷ್ಟು ದುಬಾರಿ. ಮೊಬೈಲ್, ಟಿವಿ ಮತ್ತಿತರ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆ ಏರಿಕೆ ಸಾಧ್ಯತೆ.
      12:53 PM, 1 Feb

      ಆಮದು ಮಾಡಿಕೊಳ್ಳಲಾಗುವ ಮೊಬೈಲ್ ಮೇಲೆ ಕಸ್ಟಮ್ಸ್ ತೆರಿಗೆಯನ್ನು ಶೇ.15ರಿಂದ ಶೇ.20ಕ್ಕೆ ಏರಿಸಲಾಗಿದೆ.
      12:49 PM, 1 Feb

      100 ಕೋಟಿಗೂ ಹೆಚ್ಚು ಆದಾಯವಿರುವ ಕೃಷಿ ಉತ್ಪನ್ನ ಉತ್ಪಾದಿಸುವ ಕಂಪನಿಗಳಿಗೆ ಮೊದಲ 5 ವರ್ಷ ಶೇ.100ರಷ್ಟು ಆದಾಯ ತೆರಿಗೆ ವಿನಾಯಿತಿ.
      12:41 PM, 1 Feb

      250 ಕೋಟಿ ರುಪಾಯಿಗೂ ಹೆಚ್ಚು ವಾರ್ಷಿಕ ಆದಾಯವಿರುವ ಕಂಪನಿಗಳಿಗೂ ಶೇ.25ರಷ್ಟು ಕಾರ್ಪೊರೇಟ್ ತೆರಿಗೆ ವಿಧಿಸಲಾಗುವುದು
      12:39 PM, 1 Feb

      ಕಳೆದ 3 ವರ್ಷಗಳಲ್ಲಿ ವೈಯಕ್ತಿಕ ತೆರಿಗೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿರುವುದರಿಂದ ಈ ವರ್ಷ ಯಾವುದೇ ತಿದ್ದುಪಡಿ ಇರುವುದಿಲ್ಲ. ಹಾಗಾಗಿ, ಆದಾಯ ತೆರಿಗೆ ಮಿತಿ ಏರಿಕೆ ಇರುವುದಿಲ್ಲ.
      12:34 PM, 1 Feb

      ಪ್ರಾಮಾಣಿಕ ತೆರಿಗೆದಾರರು ಅಪನಗದೀಕರಣವನ್ನು 'ಪ್ರಾಮಾಣಿಕತೆಯ ಉತ್ಸವ'ವನ್ನಾಗಿ ಮಾಡಿದ್ದಾರೆ. 2014-15ರಲ್ಲಿ 6.47 ಕೋಟಿ ಇದ್ದ ತೆರಿಗೆದಾರರ ಸಂಖ್ಯೆ 2016-17ರಲ್ಲಿ 8.27 ಆಗಿದೆ.
      12:26 PM, 1 Feb

      ರಾಷ್ಟ್ರಪತಿ ಸಂಬಳವನ್ನು ತಿಂಗಳಿಗೆ 5 ಲಕ್ಷ ರುಪಾಯಿಗೆ ಮತ್ತು ಉಪರಾಷ್ಟ್ರಪತಿ ಸಂಬಳವನ್ನು ತಿಂಗಳಿಗೆ 4 ಲಕ್ಷ ರುಪಾಯಿ ಮತ್ತು ರಾಜ್ಯಪಾಲರ ಸಂಬಳವನ್ನು 3.5 ಲಕ್ಷ ರುಪಾಯಿಗೆ ಪರಿಷ್ಕರಣೆ ಮಾಡಲಾಗಿದೆ.
      Advertisement
      12:22 PM, 1 Feb

      ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು, ಸಂಸದೀಯರ ಸಂಬಳದಲ್ಲಿ ಏರಿಕೆ. ಪ್ರತಿ 5 ವರ್ಷಗಳಿಗೊಮ್ಮೆ ಹಣದುಬ್ಬರದ ಆಧಾರದ ಮೇಲೆ ಸಂಬಳ ಪರಿಷ್ಕರಣೆ ಮಾಡಲಾಗುವುದು.
      12:15 PM, 1 Feb

      ಭಾರತ ಏರ್ಪೋರ್ಟ್ ಪ್ರಾಧಿಕಾರದಡಿಯಲ್ಲಿ 124 ವಿಮಾನ ನಿಲ್ದಾಣಗಳಿವೆ. ಇದನ್ನು 5 ಪಟ್ಟು ಹೆಚ್ಚಿಸಲಾಗುವುದು ಮತ್ತು ಪ್ರತಿವರ್ಷ 1 ಬಿಲಿಯನ್ ಟ್ರಿಪ್ ಗುರಿ ಇಟ್ಟುಕೊಳ್ಳಲಾಗಿದೆ
      12:10 PM, 1 Feb

      2017ರ ಸೆಪ್ಟೆಂಬರ್ ನಲ್ಲಿ ಬುಲೆಟ್ ಟ್ರೈನ್ ಗಾಗಿ ಅಡಿಗಲ್ಲು ಹಾಕಲಾಗಿದೆ. ಹೈಸ್ಪೀಟ್ ರೈಲು ಯೋಜನೆಗಳಿಗಾಗಿ ತರಬೇತಿ ನೀಡಲು ಬರೋಡಾದಲ್ಲಿ ಸಂಸ್ಥೆ ಸ್ಥಾಪಿಸಲಾಗುತ್ತಿದೆ
      12:08 PM, 1 Feb

      160 ಕಿ.ಮೀ. ಉದ್ದದ ಬೆಂಗಳೂರು ಸಬರ್ಬನ್ ಯೋಜನೆಗಾಗಿ 17 ಸಾವಿರ ಕೋಟಿ ರುಪಾಯಿ ನಿಯೋಜನೆ
      12:04 PM, 1 Feb

      ಹವಾಯಿ ಚಪ್ಪಲಿ ಧರಿಸುವವರು ಕೂಡ ಹವಾಯಿ ಜಹಾಜ್ (ವಿಮಾನದಲ್ಲಿ) ಹೋಗುವಂತಾಗಿದೆ.
      Advertisement
      12:02 PM, 1 Feb

      ಪ್ರತಿದಿನ 25 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುವ ರೈಲು ನಿಲ್ದಾಣಗಳಲ್ಲಿ ಎಸ್ಕಲೇಟರ್, ಎಲ್ಲ ನಿಲ್ದಾಣಗಳಲ್ಲಿ ವೈಫೈ, ಸಿಸಿಟಿವಿ ಅಳವಡಿಸಲಾಗುವುದು. ಮುಂಬೈ ರೈಲು ಸಂಪರ್ಕವನ್ನು 11 ಕೋಟಿ ರುಪಾಯಿ ಯೋಜನೆಯಲ್ಲಿ ಮೇಲ್ದರ್ಜೆಗೇರಿಸಲಾಗುವುದು.
      11:59 AM, 1 Feb

      ಗಂಗಾ ನದಿ ಶುದ್ಧೀಕರಣ ರಾಷ್ಟ್ರೀಯ ಆದ್ಯತೆಯಾಗಿದೆ. ನಮಾಮಿ ಗಂಗಾ ಯೋಜನೆಯಡಿಯಲ್ಲಿ 187 ಪ್ರಾಜೆಕ್ಟ್ ಗಳಿಗೆ ಅನುಮೋದನೆ ನೀಡಲಾಗಿದೆ.
      11:55 AM, 1 Feb

      ಪರಿಶಿಷ್ಟ ಜಾತಿಯ ಅಭ್ಯದಯಕ್ಕಾಗಿ 56,619 ಕೋಟಿ ರುಪಾಯಿ ಮತ್ತು ಪರಿಶಿಷ್ಟ ಪಂಗಡಗಳಿಗಾಗಿ 39,135 ಕೋಟಿ ರುಪಾಯಿ ನಿಯೋಜನೆ.
      11:51 AM, 1 Feb

      ಶೈಕ್ಷಣಿಕ ಗುಣಮಟ್ಟವನ್ನು ವೃದ್ಧಿಪಡಿಸಲು ತಂತ್ರಜ್ಞಾನವನ್ನು ಅಧಿಕವಾಗಿ ಬಳಸಲಾಗುವುದು. ಕಪ್ಪು ಹಲಗೆಯಿಂದ ಡಿಜಿಟಲ್ ಬೋರ್ಡ್ ಅಳವಡಿಸಲಾಗುವುದು.
      11:46 AM, 1 Feb

      ಪ್ರಸ್ತುತ ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದಲ್ಲದೆ 24 ಹೊಸ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಲು ಸರಕಾರ ಯೋಜನೆ ಹಾಕಿಕೊಂಡಿದೆ
      11:44 AM, 1 Feb

      600 ಕೋಟಿ ರುಪಾಯಿ ಕ್ಷಯ ರೋಗಿಗಳಿಗಾಗಿ ನಿಗದಿ, ಪ್ರತಿ ಮೂರು ಕ್ಷೇತ್ರಗಳಿಗೆ 1 ಮೆಡಿಕಲ್ ಕಾಲೇಜು ನಿರ್ಮಾಣದ ವಾಗ್ದಾನ
      11:41 AM, 1 Feb

      10 ಕೋಟಿ ಬಡ ಮತ್ತು ನಿರ್ಗತಿಕರ ಸಂರಕ್ಷಣೆಗಾಗಿ 5 ಲಕ್ಷ ರುಪಾಯಿ ಆಸ್ಪತ್ರೆ ವೆಚ್ಚಕ್ಕಾಗಿ ನೀಡಲಾಗುವುದು. ಇದಕ್ಕಾಗಿ 1200 ಕೋಟಿ ರುಪಾಯಿ ನೀಡಲಾಗುತ್ತಿದೆ.
      11:39 AM, 1 Feb

      ಭಾರತ ಆರೋಗ್ಯಕರವಾಗಿದ್ದರೆ ಮಾತ್ರ ಆರ್ಥಿಕ ಸ್ಥಿತಿಯೂ ಆರೋಗ್ಯಕರವಾಗಿರುತ್ತದೆ. ಆರೋಗ್ಯ ಕ್ಷೇತ್ರವನ್ನು ಜನರ ಮನೆಗೆ ತೆಗೆದುಕೊಂಡು ಹೋಗಬಯಸುತ್ತೇವೆ. ಬಡವರಿಗೆ ಉಚಿತ ಔಷಧಿ ದೊರಕಿಸಲು 12,000 ಕೋಟಿ ರುಪಾಯಿ ನಿಗದಿಪಡಿಸಲಾಗಿದೆ.
      11:33 AM, 1 Feb

      ದೆಹಲಿಯ ವಾಯು ಮಾಲಿನ್ಯ ನಿಜಕ್ಕೂ ಕಳವಳಕಾರಿ. ಇದಕ್ಕಾಗಿ ದೆಹಲಿ, ಹರ್ಯಾಣ, ಪಂಜಾಬ್, ಉತ್ತರ ಪ್ರದೇಶದಲ್ಲಿ ಮಾಲಿನ್ಯ ಕಡಿಮೆ ಮಾಡಲು ವಿಶೇಷ ಯೋಜನೆಗಳನ್ನು ಆರಂಭಿಸಲಾಗುವುದು.
      11:29 AM, 1 Feb

      ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಮುಂದಿನ ವರ್ಷದಲ್ಲಿ ಬಡವರಿಗಾಗಿ 2 ಕೋಟಿ ಹೆಚ್ಚುವರಿ ಶೌಚಾಲಯ ನಿರ್ಮಿಸುವ ಗುರಿ ಹೊಂದಿದ್ದೇವೆ
      11:28 AM, 1 Feb

      ಉಜಾಲಾ ಯೋಜನೆಯಲ್ಲಿ 8 ಕೋಟಿ ಬಡ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕವನ್ನು ನೀಡಲಾಗಿದೆ.
      11:26 AM, 1 Feb

      ಬಾಂಬೂ ಕೃಷಿಯ ಉತ್ತೇಜನಕ್ಕಾಗಿ 1200 ಕೋಟಿ ರುಪಾಯಿ ನಿಗದಿಪಡಿಸಲಾಗಿದೆ
      11:24 AM, 1 Feb

      2022ರೊಳಗೆ ದೇಶದ ರೈತರ ಆದಾಯ ದ್ವಿಗುಣಗೊಳ್ಳಲಿದೆ.
      11:21 AM, 1 Feb

      ಆಪರೇಷನ್ ಫ್ಲಡ್ ಯೋಜನೆಯಂತೆ ಆಪರೇಷನ್ ಗ್ರೀನ್ ಯೋಜನೆ ಆರಂಭಿಸಲಾಗುತ್ತಿದ್ದು, 500 ಕೋಟಿ ರುಪಾಯಿಯನ್ನು ನಿಗದಿಪಡಿಸಲಾಗಿದೆ
      11:19 AM, 1 Feb

      ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಕೃಷಿ ಉತ್ಪನ್ನ ಮತ್ತು ಗ್ರಾಮೀಣ ಆರ್ಥಿಕತೆಯ ಮೇಲೆ ಹೆಚ್ಚಿನ ಆದ್ಯತೆ ನೀಡಲಾಗುವುದು.
      11:13 AM, 1 Feb

      ರೈತರ ಅಭ್ಯುದಯಕ್ಕೆ ಸರಕಾರ ಕಟಿಬದ್ಧ. ರೈತರ ಆದಾಯ ಏರಿಸಬೇಕೆಂಬುದು ನಮ್ಮ ಆಶಯ. ಅವರ ಬೆಳೆಗಳಿಗೂ ಹೆಚ್ಚಿನ ಬೆಲೆ ಸಿಗಬೇಕು. ಕೃಷಿ ಉತ್ಪನ್ನವೂ ಏರಿಕೆಯಾಗಿದೆ. ಅವರ ಬೆಳೆಗಳಿಗೆ ಒಂದೂವರೆ ಪಟ್ಟು ಹೆಚ್ಚು ಬೆಲೆ ಸಿಗಬೇಕು.
      11:10 AM, 1 Feb

      ಬಡವರಿಗೆ ಉಚಿತ ಡಯಾಲಿಸಿಸ್, ಸ್ಟೆಂಟ್ ದರ ಇಳಿಸಲಾಗಿದೆ, ಎಲ್ಲ ಸೇವೆಗಳು ಆನ್ ಲೈನ್ ನಲ್ಲಿವೆ... ಇವೆಲ್ಲದರಿಂದ ಜನರಿಗೆ ಲಾಭ ಸಿಗುತ್ತಿದೆ.
      11:08 AM, 1 Feb

      ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಕೂಡ ಭಾರತದ ಜಿಡಿಪಿ ಮುಂದಿನ ವರ್ಷ 7.4ಕ್ಕೆ ಏರಲಿದೆ ಎಂದು ಹೇಳಿದೆ
      READ MORE

      English summary
      All eyes on Union Budget 2018-19 to be presented by Finance Minister Arun Jaitley. This is last full budget before Lok Sabha Elections 2019 and first budget after GST implementation. Expectations are high as Karnataka Assembly Elections are round the corner.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X