ರುಪಾಯಿ ಎಲ್ಲಿಂದ ಬರಲಿದೆ, ಎಲ್ಲೆಲ್ಲಿ ವಿನಿಯೋಗವಾಗಲಿದೆ?

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 29 : ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬಡವರು ಮತ್ತು ರೈತರನ್ನು ಗಮನದಲ್ಲಿಟ್ಟುಕೊಂಡು, ಮಧ್ಯಮ ವರ್ಗದವರನ್ನು ಇದ್ದಲ್ಲಿಯೇ ಇಟ್ಟು, ಶ್ರೀಮಂತರಿಂದ ಹೆಚ್ಚು ಜಗ್ಗುವ ಉದ್ದೇಶದಿಂದ ಮೂರನೇ ಬಾರಿ ಕೇಂದ್ರ ಆಯವ್ಯಯವನ್ನು ಫೆಬ್ರವರಿ 29ರಂದು, ಸೋಮವಾರ ಮಂಡಿಸಿದ್ದಾರೆ. [ಕೇಂದ್ರ ಬಜೆಟ್ 2016 : ಮುಖ್ಯಾಂಶಗಳು]

ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜೇಟ್ಲಿಯವರು ಈ ಬಜೆಟ್ ಮಂಡಿಸಿದ್ದಾರೆ ಎಂಬುದು ಸರ್ವವಿದಿತ. ರೈತರಿಗೆ, ಗ್ರಾಮೀಣಾಭಿವೃದ್ಧಿಗೆ, ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವಾರು ಯೋಜನೆಗಳಿಗೆ ಹಣವನ್ನು ಹರಿಯಬಿಟ್ಟಿದ್ದಾರೆ. ಕಡಿಮೆ ಆದಾಯದ 2 ಕೋಟಿ ನೌಕರರಿಗೂ ಆದಾಯ ತೆರಿಗೆಯಲ್ಲಿ ಲಾಭವಾಗಲಿದೆ. [ಯಾವುದು ಅಗ್ಗ, ಯಾವುದು ತುಟ್ಟಿ?]

ಅತ್ಯಂತ ಸಂಕಷ್ಟಮಯ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲೇ ಬಜೆಟ್ ಮಂಡಿಸುತ್ತಿರುವುದಾಗಿ ಹೇಳುತ್ತಲೇ ಮಂಡನೆ ಆರಂಭಿಸಿದ ಅರುಣ್ ಜೇಟ್ಲಿ ಅವರು ರುಪಾಯಿಯನ್ನು ಯಾವ ರೀತಿ ವಿಭಾಗಿಸಿ, ಎಷ್ಟು ಹಣವನ್ನು ವಿನಿಯೋಗಿಸುತ್ತಿದ್ದಾರೆ, ಎಷ್ಟು ಆದಾಯ ತರಲಿದ್ದಾರೆ ಎಂಬುದರ ವಿವರ ಇಲ್ಲಿದೆ. [ತೆರಿಗೆ ಉಳಿಸಲು ಇಲ್ಲಿದೆ ಸೂಪರ್ ಉಪಾಯ]

Union Budget 2016 : How Arun Jaitley has divided the rupee

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union Budget 2016 : How Finance minister Arun Jaitley has divided the rupee? Where rupee goes to, where rupee comes from? [Press Information Bureau infographic]
Please Wait while comments are loading...