ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ದರ ನಿಗದಿಗೆ ಅಸಮಾಧಾನ,ಸಬ್ಸಿಡಿ ನೀಡುತ್ತಾ ಸರ್ಕಾರ?

|
Google Oneindia Kannada News

ನವದೆಹಲಿ, ಮಾರ್ಚ್ 1: ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಗೆ ನಿಗದಿಪಡಿಸಲಾಗಿರುವ ಮೊತ್ತಕ್ಕೆ ಲಸಿಕೆ ತಯಾರಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಲಸಿಕೆಗೆ 250 ರೂಪಾಯಿಗಳ ಬೆಲೆ ನಿಗದಿಪಡಿಸಲಾಗಿದ್ದು,ಸರ್ಕಾರ ಸಬ್ಸಿಡಿ ನೀಡಲು ಚಿಂತನೆ ನಡೆಸಲಾಗುತ್ತಿದೆ.ಮಾ.1 ರಿಂದ ದೇಶಾದ್ಯಂತ ಹೆಚ್ಚಿನ ವ್ಯಾಪ್ತಿಯಲ್ಲಿ ಕೋವಿಡ್-19 ಲಸಿಕೆ ಅಭಿಯಾನ ಪ್ರಾರಂಭವಾಗುವುದಕ್ಕೂ ಮುನ್ನ ಈ ಬೆಳವಣಿಗೆಯಾಗಿದೆ.

ಸರ್ಕಾರ ಲಸಿಕೆ ತಯಾರಕರಿಗೆ ಸಬ್ಸಿಡಿ ನೀಡುವ ಚಿಂತನೆ ನಡೆಸುತ್ತಿದೆ. ಆದರೆ ಸಬ್ಸಿಡಿಯ ವಿವರಗಳು ಇನ್ನೂ ಲಭ್ಯವಾಗಿಲ್ಲ.ಸರ್ಕಾರ ಪ್ರತಿಯೊಂದು ಲಸಿಕೆಗಳನ್ನು ಮೊದಲು ಖರೀದಿಸುತ್ತದೆ. ಆಸ್ಪತ್ರೆಗಳು ಪ್ರತಿ ಡೋಸ್ ಗೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ 150 ರೂಪಾಯಿಗಳನ್ನು ನೀಡಬೇಕಾಗುತ್ತದೆ.

ಕೊರೊನಾ ಲಸಿಕೆ: ಭಾರತದ 2ನೇ ಅಭಿಯಾನದಲ್ಲಿ ಸಾರ್ವಜನಿಕರಿಗೂ ಲಸಿಕೆಕೊರೊನಾ ಲಸಿಕೆ: ಭಾರತದ 2ನೇ ಅಭಿಯಾನದಲ್ಲಿ ಸಾರ್ವಜನಿಕರಿಗೂ ಲಸಿಕೆ

ಈಗ ಸರ್ಕಾರ ಅತ್ಯಂತ ಕಷ್ಟವಾಗಿರುವ ಬೆಲೆಯನ್ನು ನಿಗದಿಪಡಿಸಿದೆ. ಹೆಚ್ಚು ಪೈಪೋಟಿ ಇಲ್ಲದೆಯೂ ಕಡಿಮೆ ಬೆಲೆ ನಿಗದಿಪಡಿಸಲಾಗಿದೆ. ಆದ್ದರಿಂದ ಸರ್ಕಾರ ಸಬ್ಸಿಡಿ ನೀಡುವ ಚಿಂತನೆಯಲ್ಲಿದೆ ಎಂದು ಲಸಿಕೆ ತಯಾರಕ ಸಂಸ್ಥೆಗಳು ತಿಳಿಸಿವೆ.

ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯೊಂದಕ್ಕೆ 250 ರೂ.

ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯೊಂದಕ್ಕೆ 250 ರೂ.

ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆಗಳಿಗೆ 250 ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು ಇದಕ್ಕಿಂತ ಹೆಚ್ಚಿನ ಶುಲ್ಕ ಪಡೆಯುವುದನ್ನು ಸರ್ಕಾರ ನಿರ್ಬಂಧಿಸಿದೆ. 250 ರೂಪಾಯಿಗಳ ಪೈಕಿ 150 ರೂಪಾಯಿಗಳು ಲಸಿಕೆ ಕಂಪನಿಗಳು ಪಡೆಯಲಿವೆ ಹಾಗೂ ಆಸ್ಪತ್ರೆಗಳಿಗೆ 100 ರೂಪಾಯಿಗಳು ಪ್ರತಿ ಲಸಿಕೆಗೆ ದೊರೆಯಲಿದೆ.

ಲಸಿಕೆಗೆ ಸಬ್ಸಿಡಿ ನೀಡಲು ಸರ್ಕಾರ ಚಿಂತನೆ

ಲಸಿಕೆಗೆ ಸಬ್ಸಿಡಿ ನೀಡಲು ಸರ್ಕಾರ ಚಿಂತನೆ

ಸರ್ಕಾರ ಪ್ರತಿಯೊಂದು ಲಸಿಕೆಗಳನ್ನು ಮೊದಲು ಖರೀದಿಸುತ್ತದೆ. ಆಸ್ಪತ್ರೆಗಳು ಪ್ರತಿ ಡೋಸ್ ಗೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ 150 ರೂಪಾಯಿಗಳನ್ನು ನೀಡಬೇಕಾಗುತ್ತದೆ. ಈಗ ಸರ್ಕಾರ ಅತ್ಯಂತ ಕಷ್ಟವಾಗಿರುವ ಬೆಲೆಯನ್ನು ನಿಗದಿಪಡಿಸಿದೆ. ಹೆಚ್ಚು ಪೈಪೋಟಿ ಇಲ್ಲದೆಯೂ ಕಡಿಮೆ ಬೆಲೆ ನಿಗದಿಪಡಿಸಲಾಗಿದೆ. ಆದ್ದರಿಂದ ಸರ್ಕಾರ ಸಬ್ಸಿಡಿ ನೀಡುವ ಚಿಂತನೆಯಲ್ಲಿದೆ ಎಂದು ಲಸಿಕೆ ತಯಾರಕ ಸಂಸ್ಥೆಗಳು ತಿಳಿಸಿವೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಉಚಿತ

ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಉಚಿತ

ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆಯನ್ನು ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಭಾರತದ ಪ್ರಮುಖ ಲಸಿಕೆ ತಯಾರಕ ಸಂಸ್ಥೆಗಳಾದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಹಾಗೂ ಭಾರತ್ ಬಯೋಟೆಕ್ ಸಂಸ್ಥೆಗಳು ಬೆಲೆ ನಿಗದಿ ಹಾಗೂ ನಿಯಂತ್ರಣಕ್ಕೆ ಬದ್ಧವಾಗಿರುವುದಾಗಿ ಹೇಳಿದೆ ಆದರೆ ಅಸಮಾಧಾನವಿದೆ ಎಂದು ಸಂಸ್ಥೆಗಳು ಹೇಳಿವೆ.

ಫೆ.27ಕ್ಕೆ ಅಂತಿಮಗೊಂಡ ನಿಯಮಗಳು ಏನು ಹೇಳುತ್ತೆ?

ಫೆ.27ಕ್ಕೆ ಅಂತಿಮಗೊಂಡ ನಿಯಮಗಳು ಏನು ಹೇಳುತ್ತೆ?

ಫೆ.27 ರಂದು ಅಂತಿಮಗೊಂಡಿರುವ ನಿಯಮಗಳ ಪ್ರಕಾರ ಮಾ.1 ರಿಂದ ಮುಂದಿನ ಹಂತದ ಲಸಿಕೆ ಅಭಿಯಾನದಲ್ಲಿ 60 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಗಳಿಗೆ ಹಾಗೂ ಬಹುವಿಧದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ದೊರೆಯಲಿದೆ.

English summary
After COVID-19 vaccine makers showed displeasure at the capping of vaccine cost at Rs 250 in private hospitals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X