ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರ ತೀವ್ರ ಏರಿಕೆ: ಸಿಎಮ್‌ಐಇ ವರದಿ

|
Google Oneindia Kannada News

ನವದೆಹಲಿ, ಜು.26: ದೇಶಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರ ಏರಿಕೆಯಾಗಿದ್ದು, ಜುಲೈ 25 ಕ್ಕೆ ಕೊನೆಗೊಂಡ ವಾರದಲ್ಲಿ ಇದು ಶೇಕಡ 6.75 ರಷ್ಟು ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್‌ಐಇ) ಯ ಹೊಸ ಅಂಕಿ ಅಂಶಗಳು ತಿಳಿಸಿವೆ. ಒಂದು ವಾರದ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರವು ಶೇಕಡಾ 5.1 ರಷ್ಟಿತ್ತು.

ಇನ್ನು ಈ ಸಂದರ್ಭದಲ್ಲೇ ನಗರ ಉದ್ಯೋಗದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ. ಜುಲೈ 25 ಕ್ಕೆ ಕೊನೆಗೊಂಡ ವಾರದಲ್ಲಿ ನಗರ ನಿರುದ್ಯೋಗವು ಶೇಕಡ 8.01 ಕ್ಕೆ ಏರಿಕೆಯಾಗಿದ್ದು, ವಾರದ ಹಿಂದೆ ಶೇ 7.94 ರಷ್ಟಿತ್ತು.

 ಲಕ್ಷಾಂತರ ಭಾರತೀಯರನ್ನು ಬಡತನಕ್ಕೆ ದೂಡಿದ ಕೊರೊನಾ: ಚಿನ್ನ ಮಾರಾಟವೇ ದಾರಿ ಲಕ್ಷಾಂತರ ಭಾರತೀಯರನ್ನು ಬಡತನಕ್ಕೆ ದೂಡಿದ ಕೊರೊನಾ: ಚಿನ್ನ ಮಾರಾಟವೇ ದಾರಿ

ಕೋವಿಡ್ -19 ನಿರ್ಬಂಧಗಳನ್ನು ಸಡಿಲಿಸಿಕೆ ಹಾಗೂ ಹೆಚ್ಚುತ್ತಿರುವ ಆರ್ಥಿಕ ಚಟುವಟಿಕೆಗಳ ಹೊರತಾಗಿಯೂ ನಗರ ನಿರುದ್ಯೋಗ ದರವು, ಗ್ರಾಮೀಣ ಮತ್ತು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ವರದಿಯಾಗಿದೆ. ಈ ಸಂದರ್ಭದಲ್ಲೇ, ರಾಷ್ಟ್ರೀಯ ನಿರುದ್ಯೋಗ ದರವು ಶೇಕಡ 7.14 ರಷ್ಟಿದೆ. ಈ ದರವು ವಾರದ ಹಿಂದಿನ ಅವಧಿಯಲ್ಲಿ 5.98 ರಷ್ಟಿತ್ತು ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್‌ಐಇ) ಯ ಅಂಕಿ ಅಂಶಗಳು ತಿಳಿಸಿವೆ.

Unemployment rate rises sharply in rural areas says CMIE data

ಜುಲೈ 25 ಕ್ಕೆ ಕೊನೆಗೊಂಡ ವಾರದಲ್ಲಿ ಒಟ್ಟಾರೆ ನಿರುದ್ಯೋಗ ದರವು ಹೆಚ್ಚಾಗಿದ್ದರೆ, ಕೋವಿಡ್ -19 ರ ಎರಡನೇ ಅಲೆಯ ಮಧ್ಯೆ ನಿರುದ್ಯೋಗ ತೀವ್ರವಾಗಿ ಹೆಚ್ಚಾದ ಹಿಂದಿನ ಮೂರು ತಿಂಗಳುಗಳಿಗಿಂತ ಪರಿಸ್ಥಿತಿ ಉತ್ತಮವಾಗಿದೆ. ಭಾರತದ ನಗರ ಭಾಗಗಳಲ್ಲಿ ನಿರುದ್ಯೋಗ ದರವು ಜುಲೈ ಆರಂಭದಿಂದಲೂ ಶೇಕಡ 9 ಕ್ಕಿಂತಲೂ ಕಡಿಮೆಯಿದೆ. ಹಾಗೆಯೇ ರಾಷ್ಟ್ರಮಟ್ಟದಲ್ಲಿ ನಿರುದ್ಯೋಗ ದರವು ಶೇಕಡ 8 ಕ್ಕಿಂತಲೂ ಕಡಿಮೆಯಾಗಿದೆ.

 ದೇಶದಲ್ಲಿ ಉದ್ಯೋಗಿಗಳಿಗೆ ಮುಂದಿನ ವರ್ಷ ವೇತನ ಹೆಚ್ಚಳ ಸಾಧ್ಯತೆ: ಕಾರಣವೇನು? ದೇಶದಲ್ಲಿ ಉದ್ಯೋಗಿಗಳಿಗೆ ಮುಂದಿನ ವರ್ಷ ವೇತನ ಹೆಚ್ಚಳ ಸಾಧ್ಯತೆ: ಕಾರಣವೇನು?

ಈ ನಡುವೆ, ಜೂನ್‌ನಲ್ಲಿ ಮಾಸಿಕ ರಾಷ್ಟ್ರೀಯ ನಿರುದ್ಯೋಗ ದರವು ಶೇಕಡ 9.17 ರಷ್ಟಿದ್ದರೆ, ನಗರ ಭಾರತದಲ್ಲಿ ಇದು 10.07 ಮತ್ತು ಗ್ರಾಮೀಣ ಭಾರತದಲ್ಲಿ ಶೇಕಡ 8.75 ರಷ್ಟಿತ್ತು. ಮುಂಗಾರು ಪ್ರಗತಿಯೊಂದಿಗೆ ಹೆಚ್ಚಿನ ಆರ್ಥಿಕ ಚಟುವಟಿಕೆಗಳನ್ನು ತೆರೆಯಲಾಗಿದ್ದು, ನಗರ ಮತ್ತು ಗ್ರಾಮೀಣ ಉದ್ಯೋಗವನ್ನು ಸ್ಥಿರಗೊಳಿಸಲು ಸಹಾಯ ಮಾಡಿದೆ ಎಂದು ನಾವು ಈ ಸಂದರ್ಭದಲ್ಲಿ ಗಮನಿಸಬಹುದು.

ಆದರೆ ಕೋವಿಡ್‌ ಸಾಂಕ್ರಾಮಿಕ ರೋಗದ ಮತ್ತೊಂದು ಅಲೆಯಿಂದ ದೇಶವು ಅಪ್ಪಳಿಸಿದಾಗಿನಿಂದಲೂ ಉದ್ಯೋಗಾವಕಾಶಗಳು ಭಾರೀ ಕಡಿಮೆಯಾಗಿರುವುದರಿಂದ ದೇಶದ ಉದ್ಯೋಗ ಮಾರುಕಟ್ಟೆಯಲ್ಲಿ ಪರಿಸ್ಥಿತಿ ಜಿಗುಟಾಗಿದೆ. ಎರಡನೆಯ ಕೋವಿಡ್‌ ಅಲೆಯು ಆರ್ಥಿಕತೆಯ ಮೇಲೆ ಸೌಮ್ಯವಾದ ಪರಿಣಾಮವನ್ನು ಬೀರಿದರೆ, ಈ ಕೋವಿಡ್‌ನ ಎರಡನೇ ಅಲೆಯೇ ಅನೌಪಚಾರಿಕ ವಲಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದಲ್ಲಿ ಉದ್ಯೋಗ ದರವು ಜೂನ್‌ನಿಂದ ಕೊಂಚ ಚೇತರಿಸಿಕೊಳ್ಳುತ್ತಿದೆ.

(ಒನ್‌ಇಂಡಿಯಾ ಸುದ್ದಿ)

English summary
The unemployment rate has spiked in rural areas across the country, rising from 6.75 per cent in the week ended July 25, according to fresh data from the Centre for Monitoring Indian Economy (CMIE).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X