ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CMIE ಮತ್ತೊಂದು ವರದಿಯಲ್ಲೂ ಮೋದಿ ಸರ್ಕಾರಕ್ಕೆ ಕಹಿ ಸುದ್ದಿ

|
Google Oneindia Kannada News

ನವದೆಹಲಿ, ಮಾರ್ಚ್ 21: ಭಾರತದಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಇಳಿಮುಖವಾದರೂ ನಿರುದ್ಯೋಗ ಪ್ರಮಾಣ ಅಧಿಕವಾಗಿದೆ ಎಂದು 'ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ (ಸಿಎಂಐಇ)' ಸಂಸ್ಥೆ ನೀಡಿದ್ದ ವರದಿಯಿಂದ ಮೋದಿ ಸರ್ಕಾರ ಇನ್ನು ಚೇತರಿಸಿಕೊಂಡಿಲ್ಲ.

ಈಗ ಮತ್ತೊಂದು ವರದಿ ನೀಡಿದ್ದು, 2017ರಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿಧರರು ನಿರುದ್ಯೋಗಿಗಳಾಗಿರುವ ಪ್ರಮಾಣ ಹೆಚ್ಚಾಗಿದೆ ಎಂದು ಸಿಎಂಐಇ ಮುಖ್ಯಸ್ಥ ಮಹೇಶ್ ವ್ಯಾಸ್ ಹೇಳಿದ್ದಾರೆ.

ಮೋದಿ ಸರ್ಕಾರಕ್ಕೆ ಆಘಾತ! ನಿರುದ್ಯೋಗ ಪ್ರಮಾಣ ಸಕತ್ ಏರಿಕೆ ಮೋದಿ ಸರ್ಕಾರಕ್ಕೆ ಆಘಾತ! ನಿರುದ್ಯೋಗ ಪ್ರಮಾಣ ಸಕತ್ ಏರಿಕೆ

ಹೊಚ್ಚ ಹೊಸ ವರದಿಯಂತೆ, ಉನ್ನತ ಶಿಕ್ಷಣ ವಿಭಾಗದ ನಿರುದ್ಯೋಗ ಪ್ರಮಾಣ ಸೆಪ್ಟೆಂಬರ್- ಡಿಸೆಂಬರ್ 2018ರಲ್ಲಿ ಶೇ 13.2ರಷ್ಟು ಇದೆ. ಆದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ನಿರುದ್ಯೋಗ ಪ್ರಮಾಣ ಶೆ 12.1ರಷ್ಟಿತ್ತು.

Unemployment rate highest among graduates; touches 13.2% in Sept-Dec, 2018: CMIE

2019ರ ಫೆಬ್ರವರಿಯಲ್ಲಿ ನಿರುದ್ಯೋಗ ಪ್ರಮಾಣ ಶೇಕಡಾ 7.2ಕ್ಕೆ ಏರಿಕೆಯಾಗಿದೆ, 2016ರ ಸೆಪ್ಟೆಂಬರ್‌ ನಂತರ ನಿರುದ್ಯೋಗ ಪ್ರಮಾಣದಲ್ಲಾಗಿರುವ ಗರಿಷ್ಠ ಏರಿಕೆ ಇದಾಗಿದೆ ಎಂದು ಮಾರ್ಚ್ ತಿಂಗಳ ಮೊದಲವಾರದಲ್ಲಿ ಬಂದ ಮೊದಲ ವರದಿಯಲ್ಲಿ ಹೇಳಲಾಗಿತ್ತು.

ಮೋದಿ ಸರ್ಕಾರದಿಂದ ಭರ್ಜರಿ ಆಫರ್!, 2.8 ಲಕ್ಷ ಮಂದಿ ನೇಮಕಾತಿ ಮೋದಿ ಸರ್ಕಾರದಿಂದ ಭರ್ಜರಿ ಆಫರ್!, 2.8 ಲಕ್ಷ ಮಂದಿ ನೇಮಕಾತಿ

ಕಳೆದ ವರ್ಷ ಫೆಬ್ರವರಿಯಲ್ಲಿ 40.6 ಕೋಟಿ ಜನರು ಉದ್ಯೋಗದಲ್ಲಿದ್ದರೆ, ಈ ಪ್ರಮಾಣ 2019ರ ಫೆಬ್ರವರಿ ಹೊತ್ತಿಗೆ 40 ಕೋಟಿಗೆ ಇಳಿಕೆಯಾಗಿದೆ. ಅಂದರೆ 60 ಲಕ್ಷ ಉದ್ಯೋಗಿಗಳೇ ನಿರುದ್ಯೋಗಿಗಳಾಗಿದ್ದಾರೆ.

English summary
The unemployment rate among those who completed graduation or higher education (graduate+) has been rising steadily since mid-2017, according to a new analysis by the Centre for Monitoring Indian Economy (CMIE).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X