ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ ತಿಂಗಳಿನಲ್ಲಿ ಭಾರತದ ನಿರುದ್ಯೋಗ ದರ ಇಳಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 02: ನವೆಂಬರ್ ತಿಂಗಳಲ್ಲಿ ದೇಶದ ನಿರುದ್ಯೋಗ ದರದಲ್ಲಿ ಕಡಿಮೆಯಾಗಿದೆ. ದೇಶದ ಒಟ್ಟಾರೆ ನಿರುದ್ಯೋಗ ದರ ಶೇ. 6.51ರಷ್ಟು ದಾಖಲಾಗಿದೆ. ಗ್ರಾಮೀಣ ಮತ್ತು ನಗರ ನಿರುದ್ಯೋಗವು ಕುಸಿತ ಕಂಡಿದೆ. ಆದರೆ 2018ರ ಸೆಪ್ಟೆಂಬರ್‌ನಲ್ಲಿ ಎರಡು ವರ್ಷಗಳ ಹಿಂದಿನ ದಾಖಲೆಗಳನ್ನು ನೋಡಿದರೆ, ಆ ಸಮಯದಲ್ಲಿ ಭಾರತದಲ್ಲಿ ನಿರುದ್ಯೋಗ ದರವು ಶೇ. 6.47ರಷ್ಟು ಆಗಿತ್ತು.

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ನಗರ ನಿರುದ್ಯೋಗ ದರ ಶೇ. 7.07ರಷ್ಟಿದ್ದು, ಅಕ್ಟೋಬರ್‌ನಲ್ಲಿ ಶೇಕಡಾ 7.15ರಷ್ಟಿತ್ತು.

 ಇಂಗ್ಲೆಂಡ್ 300 ವರ್ಷಗಳಲ್ಲೇ ಕಾಣದ ಭೀಕರ ಆರ್ಥಿಕ ಹಿಂಜರಿತ ಎದುರಿಸಲಿದೆ! ಇಂಗ್ಲೆಂಡ್ 300 ವರ್ಷಗಳಲ್ಲೇ ಕಾಣದ ಭೀಕರ ಆರ್ಥಿಕ ಹಿಂಜರಿತ ಎದುರಿಸಲಿದೆ!

ಸಿಎಂಐಇ ವರದಿಯ ಪ್ರಕಾರ, ನವೆಂಬರ್‌ನಲ್ಲಿ ದೇಶದ ಗ್ರಾಮೀಣ ನಿರುದ್ಯೋಗ ದರವು ಶೇ. 6.26ರಷ್ಟು ಆಗಿತ್ತು. ಆದರೆ ಅಕ್ಟೋಬರ್‌ನಲ್ಲಿ ಇದು ಶೇ. 6.90 ರಷ್ಟಿತ್ತು. ಭಾರತದಲ್ಲಿ ನಿರುದ್ಯೋಗ ದರ ಅಕ್ಟೋಬರ್‌ನಲ್ಲಿ ಶೇ. 6.98ರಷ್ಟಿದ್ದು, ಸೆಪ್ಟೆಂಬರ್‌ನಲ್ಲಿ ಶೇ. 6.67 ಆಗಿದೆ.

 Unemployment Rate Drops In Both Rural And Urban India In November

ಕೊರೊನಾವೈರಸ್ ಪ್ರೇರಿತ ಲಾಕ್‌ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್‌ ತಿಂಗಳಿನಲ್ಲಿ ನಿರುದ್ಯೋಗ ದರವು ಶೇ. 23.52ರಷ್ಟು ದಾಖಲಾಗಿದ್ದು, ಇದು 2020ರಲ್ಲಿ ಅತ್ಯುನ್ನತ ಮಟ್ಟವಾಗಿದೆ. ಆದಾಗ್ಯೂ, ಕೃಷಿ ಕ್ಷೇತ್ರದಲ್ಲಿ ಉತ್ತಮ ಚೇತರಿಕೆಯ ಕಾರಣ, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ನಿರುದ್ಯೋಗ ದರವು ಕ್ರಮೇಣ ಇಳಿಕೆಯಾಗಿದೆ.

Recommended Video

Virat Kohli 2020 ರಲ್ಲಿ ಒಂದೇ ಒಂದ ಶತಕ ಕೂಡ ಸಿಡಿಸಿಲ್ಲ | Oneindia Kannada

ಅಗ್ರ ಐದು ರಾಜ್ಯಗಳ ಪಟ್ಟಿಯಲ್ಲಿ ಹರಿಯಾಣದ ನಿರುದ್ಯೋಗ ದರವು ಶೇಕಡಾ 25.6 ರಷ್ಟಿದೆ. ಇದರ ನಂತರ ರಾಜಸ್ಥಾನದಲ್ಲಿ ನಿರುದ್ಯೋಗ ದರವು ಶೇಕಡಾ 18.6 ರಷ್ಟಿದೆ. ಗೋವಾದಲ್ಲಿ ಶೇ. 15.9 ರಷ್ಟು ನಿರುದ್ಯೋಗ ದರವಿದೆ. ಹಿಮಾಚಲ ಪ್ರದೇಶದಲ್ಲಿ ನಿರುದ್ಯೋಗ ದರವು ಶೇಕಡಾ 13.8 ರಷ್ಟಿದೆ. ತ್ರಿಪುರದಲ್ಲಿ ನಿರುದ್ಯೋಗ ದರವು ಶೇಕಡಾ 13.1 ರಷ್ಟಿದೆ. ಪಶ್ಚಿಮ ಬಂಗಾಳದಲ್ಲಿ ನಿರುದ್ಯೋಗ ದರವು ಶೇಕಡಾ 11.2 ರಷ್ಟಿದೆ. ಇದಲ್ಲದೆ ಬಿಹಾರದಲ್ಲಿ ಶೇಕಡಾ 10 ರಷ್ಟು ನಿರುದ್ಯೋಗ ದರವಿದೆ.

English summary
Unemployment rate fell to 6.51% in Nov from 6.98% in Oct, indicating an increase in economic activity
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X