ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರ್ಕಾರಕ್ಕೆ ಆಘಾತ! ನಿರುದ್ಯೋಗ ಪ್ರಮಾಣ ಸಕತ್ ಏರಿಕೆ

|
Google Oneindia Kannada News

Recommended Video

ಉದ್ಯೋಗದ ವಿಷಯದಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ದೊಡ್ಡ ಆಘಾತ | Oneindia Kannada

ನವದೆಹಲಿ, ಮಾರ್ಚ್ 06: ಭಾರತದಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಇಳಿಮುಖವಾದರೂ ನಿರುದ್ಯೋಗ ಪ್ರಮಾಣ ಅಧಿಕವಾಗಿದೆ. 2019ರ ಫೆಬ್ರವರಿಯಲ್ಲಿ ನಿರುದ್ಯೋಗ ಪ್ರಮಾಣ ಶೇಕಡಾ 7.2ಕ್ಕೆ ಏರಿಕೆಯಾಗಿದೆ ಎಂದು 'ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ (ಸಿಎಂಐಇ)' ಸಂಸ್ಥೆಯ ಮುಖ್ಯಸ್ಥ ಮಹೇಶ್ ವ್ಯಾಸ್ ಹೇಳಿದ್ದಾರೆ.

2016ರ ಸೆಪ್ಟೆಂಬರ್‌ ನಂತರ ನಿರುದ್ಯೋಗ ಪ್ರಮಾಣದಲ್ಲಾಗಿರುವ ಗರಿಷ್ಠ ಏರಿಕೆ ಇದು ಎಂದು ಸಿಎಂಐಇ ಹೇಳಿದೆ.

ಮೋದಿ ಸರ್ಕಾರದಿಂದ ಭರ್ಜರಿ ಆಫರ್!, 2.8 ಲಕ್ಷ ಮಂದಿ ನೇಮಕಾತಿಮೋದಿ ಸರ್ಕಾರದಿಂದ ಭರ್ಜರಿ ಆಫರ್!, 2.8 ಲಕ್ಷ ಮಂದಿ ನೇಮಕಾತಿ

ಒಟ್ಟಾರೆ, ಉದ್ಯೋಗದಲ್ಲಿರುವವರ ಪ್ರಮಾಣವೂ ಇಳಿಮುಖವಾಗಿದ್ದು ಕಳೆದ ವರ್ಷ ಫೆಬ್ರವರಿಯಲ್ಲಿ 40.6 ಕೋಟಿ ಜನರು ಉದ್ಯೋಗದಲ್ಲಿದ್ದರೆ, ಈ ಪ್ರಮಾಣ 2019ರ ಫೆಬ್ರವರಿ ಹೊತ್ತಿಗೆ 40 ಕೋಟಿಗೆ ಇಳಿಕೆಯಾಗಿದೆ. ಅಂದರೆ 60 ಲಕ್ಷ ಉದ್ಯೋಗಿಗಳೇ ನಿರುದ್ಯೋಗಿಗಳಾಗಿದ್ದಾರೆ.

Unemployment rate at 7.2% in February despite a fall in the number of job seekers to 42.7%: CMIE

ಕಳೆದ ವರ್ಷಕ್ಕೆ ಹೋಲಿಸಿದರೆ ಫೆಬ್ರವರಿ ತಿಂಗಳಲ್ಲಿ 406 ಮಿಲಿಯನ್ ಉದ್ಯೋಗಿಗಳ ಸಂಖ್ಯೆ ಇತ್ತು ಈ ವರ್ಷ 400 ಮಿಲಿಯನ್ ಗೆ ಇಳಿದಿದೆ.

ಸಾವಿರಾರು ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಿರುವ 'ಸಿಎಂಐಇ', ಸರಕಾರದ ಇಲಾಖೆ ನಡೆಸಿರುವ ನಿರೋದ್ಯೋಗಕ್ಕೆ ಸಂಬಂಧಿಸಿದ ಅಂಕಿ ಅಂಶಗಳಿಗಿಂತ ಇದು ಹೆಚ್ಚು ನಂಬಿಕೆಗೆ ಅರ್ಹವಾದುದು ಎಂದು ಹಲವು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೋದಿ ಮೋಡಿಗೊಳಗಾಗಿ ತವರಿಗೆ ಮರಳಿದ ಕನ್ನಡಿಗ ಅಶ್ವಿನ್ ಶೆಟ್ಟಿಮೋದಿ ಮೋಡಿಗೊಳಗಾಗಿ ತವರಿಗೆ ಮರಳಿದ ಕನ್ನಡಿಗ ಅಶ್ವಿನ್ ಶೆಟ್ಟಿ

ನಿರುದ್ಯೋಗ ಪ್ರಮಾಣ: 2018ರ ಫೆಬ್ರವರಿಯಲ್ಲಿ ಶೇಕಡಾ 5.9 ಇದ್ದ ನಿರುದ್ಯೋಗ ಪ್ರಮಾಣ ಒಂದು ವರ್ಷದ ಅವಧಿಯಲ್ಲಿ ಶೇಕಡಾ 22ರಷ್ಟು ಏರಿಕೆಯಾಗಿದ್ದು ಸದ್ಯ ಶೇಕಡಾ 7.2ಕ್ಕೇರಿದೆ ಇದು 2016ರ ಸೆಪ್ಟೆಂಬರ್ ನಿಂದ ಇಲ್ಲಿ ತನಕ ದಾಖಲಾದ ಅತಿ ಹೆಚ್ಚಿನ ಪ್ರಮಾಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಿರುದ್ಯೋಗ ಸಮಸ್ಯೆ ಮತ್ತು ಕೃಷಿ ಸಮಸ್ಯೆ ಅಸ್ತ್ರವನ್ನು ಬಳಸಲು ವಿರೋಧ ಪಕ್ಷಗಳು ಟೊಂಕ ಕಟ್ಟಿ ನಿಂತಿದ್ದು, ಈ ಅಂಕಿ ಅಂಶಗಳು ಪ್ರಮುಕ ಪಾತ್ರವಹಿಸಲಿವೆ. 2018ರಿಂದ ಜಿಎಸ್‌ಟಿ ಅನುಷ್ಠಾನಗೊಂಡ ಬಳಿಕ ದೇಶದಲ್ಲಿ 1.1 ಕೋಟಿ ಉದ್ಯೋಗ ನಷ್ಟವಾಗಿದೆ. ಲಕ್ಷಾಂತರ ಸಣ್ಣ ಉದ್ಯಮಗಳಿಗೆ ಹೊಡೆತ ಬಿದ್ದಿದೆ ಎಂದು ವರದಿ ಹೇಳಿದೆ.

English summary
The unemployment rate has climbed despite a fall in the number of job seekers, Mahesh Vyas, Head of Centre for Monitoring Indian Economy (CMIE), said on March 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X