ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಮತ್ತೆ ಬುಸುಗುಟ್ಟಿದ ರಾಜಕಾರಣಿಗಳ 'ಸೆಕ್ಸ್ ಸ್ಕ್ಯಾಂಡಲ್'

ಕೇರಳ ಸಾರಿಗೆ ಸಚಿವ ಎಕೆ ಶಶೀಂದ್ರನ್ ಫೋನ್ ಕರೆಯ ತುಣುಕೊಂದು ಖಾಸಗಿ ಚಾನಲ್ ನಲ್ಲಿ ಪ್ರಸಾರವಾಗಿತ್ತು. ಈ ಆಡಿಯೋ 'ಫೋನ್ ಸೆಕ್ಸ್' ಎಂಬ ಆರೋಪ ಕೇಳಿ ಬಂದಿದ್ದು ಶಶೀಂದ್ರನ್ ಅನಿವಾರ್ಯವಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂದಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾರ್ಚ್ 30: ರಾಜಕಾರಣಿಗಳ ಪಾಲಿಗೆ ಸೆಕ್ಸ್ ಸ್ಕ್ಯಾಂಡಲ್ ಹೊಸದಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಸರಣಿ ಲೈಂಗಿಕ ಹಗರಣಗಳು ಸದ್ದು ಮಾಡಿದ್ದಿದೆ. ಈ ಸಾಲಿಗೆ ಹೊಸ ಸೇರ್ಪಡೆ ಎಕೆ ಶಶೀಂದ್ರನ್.

ಎಕೆ ಶಶೀಂದ್ರನ್ ಆಡಳಿತರೂಢ ಎಲ್.ಡಿ.ಎಫ್ ಸರಕಾರದಲ್ಲಿ ಸಾರಿಗೆ ಸಚಿವರಾಗಿದ್ದಾರೆ. ಅವರ ಫೋನ್ ಕರೆಯ ತುಣುಕೊಂದು ಖಾಸಗಿ ಚಾನಲ್ ನಲ್ಲಿ ಪ್ರಸಾರವಾಗಿತ್ತು. ಈ ಆಡಿಯೋ 'ಫೋನ್ ಸೆಕ್ಸ್' ಎಂಬ ಆರೋಪ ಕೇಳಿ ಬಂದಿದ್ದು ಶಶೀಂದ್ರನ್ ಅನಿವಾರ್ಯವಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂದಿದೆ.[ಮೇಟಿ ಲೈಂಗಿಕ ಹಗರಣ, ಸರ್ಕಾರಕ್ಕೆ ಸಂಬಂಧವಿಲ್ಲ: ಗುಂಡೂರಾವ್]

ಹಾಗಂಥ ಕೇರಳದಲ್ಲಿ ಲೈಂಗಿಕ ಹಗರಣಗಳು ಹೊಸದಲ್ಲ. 1997ರಿಂದ ಆರಂಭವಾಗಿ ಇಲ್ಲೀವರೆಗೆ ಹಲವಾರು ಲೈಂಗಿಕ ಹಗರಣಗಳು ಕೇರಳದಲ್ಲಿ ನಡೆದಿವೆ. ಹಾಗಂಥ ಲೈಂಗಿಕ ಹಗರಣಗಳು ಕೇರಳಕ್ಕೆ ಮಾತ್ರ ಸೀಮಿತವೂ ಅಲ್ಲ. ಎಚ್.ವೈ ಮೇಟಿಯಿಂದ ಹಿಡಿದು ಕರ್ನಾಟಕದಲ್ಲೂ ಹಲವು ಲೈಂಗಿಕ ಹಗರಣಗಳು ನಡೆದಿವೆ.

ಐಸ್ ಕ್ರೀಂ ಪಾರ್ಲರ್ ಸೆಕ್ಸ್ ಕೇಸ್

ಐಸ್ ಕ್ರೀಂ ಪಾರ್ಲರ್ ಸೆಕ್ಸ್ ಕೇಸ್

ಕೇರಳದಲ್ಲಿ ಮೊದಲ ಬಾರಿಗೆ ಸದ್ದು ಮಾಡಿದ ಹಗರಣವೆಂದರೆ ಅದು ಐಸ್ ಕ್ರೀಂ ಪಾರ್ಲರ್ ಸೆಕ್ಸ್ ಹಗರಣ. ಯುವತಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಈ ಹಗರಣದ ಡೀಲ್ ಗಳು ಐಸ್ ಕ್ರೀಂ ಪಾರ್ಲರ್ ನಲ್ಲಿ ನಡೆಯುತ್ತಿದ್ದವು. ಹಾಗಾಗಿ ಈ ಹಗರಣಕ್ಕೆ ಐಸ್ ಕ್ರೀಂ ಪಾರ್ಲರ್ ಹಗರಣ ಅಂತ ಹೆಸರು ಬಂತು. ಈ ಹಗರಣ ಕೊನೆಗೆ ಮುಸ್ಲಿಂ ಲೀಗ್ ಸಚಿವ ಕುನ್ಹಾಲಿಕುಟ್ಟಿ ಬುಡಕ್ಕೆ ಬಂತು. ಓರ್ವ ಯುವತಿ ಸಚಿವರು ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದಿದ್ದರಿಂದ ಅವರು ರಾಜೀನಾಮೆ ನೀಡಬೇಕಾಗಿ ಬಂದಿತ್ತು.

ಲೈಂಗಿಕ ಹಗರಣ ಹೊಸದಲ್ಲ

ಲೈಂಗಿಕ ಹಗರಣ ಹೊಸದಲ್ಲ

ಕೇರಳ ರಾಜಕೀಯವನ್ನು ಬಲ್ಲವರು ಹೇಳುವ ಪ್ರಕಾರ ಈ ರೀತಿಯ ಹಲವು ಪ್ರಕರಣಗಳು ಇಲ್ಲಿ ನಡೆದಿವೆ. ಆದರೆ ಎಲ್ಲೋ ಕೆಲವು ಪ್ರಕರಣಗಳು ಮಾತ್ರ ಸದ್ದು ಮಾಡಿದ್ದರೆ. ಹೆಚ್ಚಿನವು ವರದಿಯೇ ಆಗಿಲ್ಲ. ಯಾವಾಗ ರಾಜಕೀಯ ಪಕ್ಷಗಳು ತಮ್ಮ ಪ್ರತಿಸ್ಪರ್ಧಿಗಳ ಹುಳುಕುಗಳ್ನು ಹೆಕ್ಕಲು ಆರಂಭಿಸಿದರೋ ಆಗ ಈ ರೀತಿಯ ಹಗರಣಗಳು ಒಂದೊಂದಾಗಿ ಹೊರಬರಲು ಆರಂಭವಾಯಿತು. ಅದರಲ್ಲೂ ಕಾಂಗ್ರೆಸಿನ ಒಮ್ಮನ್ ಚಾಂಡಿ ಅಧಿಕಾರವಧಿಯಲ್ಲಿ ಲೈಂಗಿಕ ಹಗರಣಗಳು ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಇದೀಗ ಅದನ್ನು ಮೀರಿಸುವಂತೆ ಎಲ್.ಡಿ.ಎಫ್ ಸರಕಾರದ ಕಾಮಕಾಂಡಗಳು ಒಂದೊಂದಾಗಿ ಹೊರ ಬರುತ್ತಿವೆ.[ರಾಸಲೀಲೆ : ತಿವಾರಿ ಅವರೊಬ್ಬರೇ ಅಲ್ಲರಿ]

ಸೋಲಾರ್ ಸ್ಕ್ಯಾಮ್

ಸೋಲಾರ್ ಸ್ಕ್ಯಾಮ್

ಹಾಲಿ ಪಿಣರಾಯಿ ವಿಜಯನ್ ಸರಕಾರ ಸೋಲಾರ್ ಹಗರಣದಲ್ಲಿ ಚಾಂಡಿ ಮತ್ತು ಅವರ ಸಚಿವ ಸಂಪುಟದಲ್ಲಿದ್ದ ಸಚಿವರ ವಿರುದ್ಧ ಒಂದೊಂದೇ ಬಾಣಗಳನ್ನು ಬಿಡುತ್ತಿದೆ. ಸರಿತಾ ನಾಯರ್ ಎಂಬ ಸೆಮಿ ಪೋರ್ನ್ ನಟಿಯ ಕೈಯಿಂದ ಆಗಿನ ಸರಕಾರ ಲಾಭಗಳನ್ನು ಪಡೆದುಕೊಂಡಿತ್ತು ಎಂದು ಇದೇ ಸರಕಾರದ ಹಲವು ಸಚಿವರು ಆರೋಪಗಳನ್ನು ಮಾಡಿದ್ದರು. ಸ್ವತಃ ಸರಿತಾ ನಾಯರ್ ಕೂಡಾ ತಾವು ಸಚಿವರುಗಳಿಂದ ಲೈಂಗಿಕ ದೌರ್ಜನ್ಯ ಎದುರಿಸಿದ್ದಾಗಿಯೂ ಹೇಳಿದ್ದಿದೆ.
ಹಲವಾರು ಬಾರಿ ವಿರೋಧ ಪಕ್ಷಗಳ ನಾಯಕರು ಸೆಕ್ಸ್ ಟೇಪ್ ಗಳನ್ನು ಚಾಲನುಗಳಿಗೆ ನೀಡಿದ್ದಿದೆ. ಚಾನಲ್ ಗಳೂ ಜಿದ್ದಿಗೆ ಬಿದ್ದವರಂತೆ ಟಿಆರ್ಪಿ ಗಳಿಸಲು ಈ ಸೆಕ್ಸ್ ಟೇಪ್ ಗಳನ್ನೇ ಹಿಡಿದುಕೊಂಡು ದಿನವಿಡೀ ಸುದ್ದಿ ಪ್ರಸಾರ ಮಾಡಿದ್ದಿದೆ. ಹಲವು ಸಂದರ್ಭದಲ್ಲಿ ಈ ಸೆಕ್ಸ್ ಟೇಪ್ ಗಳು ತಿರುಚಿದ್ದವೂ ಆಗಿದ್ದವು.

ಎನ್.ಡಿ.ತಿವಾರಿ ಹಗರಣ

ಎನ್.ಡಿ.ತಿವಾರಿ ಹಗರಣ

ಹಾಗಂಥ ಲೈಂಗಿಕ ಹಗರಣಗಳು ಕೇರಳಕ್ಕೆ ಮಾತ್ರ ಸೀಮಿತವಲ್ಲ. ಇದೇ ರೀತಿಯ ಹಗರಣಗಳು ಇತರ ರಾಜ್ಯಗಳಲ್ಲೂ ನಡೆದಿವೆ. 86 ವರ್ಷದ ಕಾಂಗ್ರೆಸ್ ನಾಯಕ ಎನ್.ಡಿ ತಿವಾರಿ ಆಂಧ್ರ ಪ್ರದೇಶ ರಾಜ್ಯಪಾಲರಾಗಿದ್ದ ವೇಳೆ ರಾಜಭವನದಲ್ಲೇ ಮಹಿಳೆಯರ ಜತೆ ಲೈಂಗಿಕ ಕ್ರೀಯೆ ನಡೆಸಿ ಸಿಕ್ಕಿ ಬಿದ್ದಿದ್ದರು.[ಗೋವಾ: ಮತ್ತೊಂದು ಹೈಪ್ರೊಫೈಲ್ ಲೈಂಗಿಕ ಹಗರಣ]

ಎಚ್.ವೈ ಮೇಟಿ ಹಗರಣ

ಎಚ್.ವೈ ಮೇಟಿ ಹಗರಣ

ಕೆಲವು ತಿಂಗಳ ಹಿಂದೆ ಕರ್ನಾಟಕದಲ್ಲೂ ಸಚಿವ ಎಚ್.ವೈ ಮೇಟಿ ಹಗರಣ ಸದ್ದು ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 71 ವರ್ಷದ ಮಾಜಿ ಸಚಿವರು ಸರಕಾರಿ ಕಚೇರಿಯಲ್ಲೇ ಮಹಿಳೆಯೊಬ್ಬರ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದೆನ್ನಲಾದ ವಿಡಿಯೋ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಆದರೆ ಇದು ತಿರುಚಿದ್ದು ಎಂದು ಮೇಟಿ ವಾದ ಹೂಡುತ್ತಾ ಬಂದಿದ್ದಾರೆ.

ನೀಲಿ ಚಿತ್ರ ನೋಡಿ ಸಿಕ್ಕಿಬಿದ್ದರು

ನೀಲಿ ಚಿತ್ರ ನೋಡಿ ಸಿಕ್ಕಿಬಿದ್ದರು

2012ರಲ್ಲಿ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿಯ ಇಬ್ಬರು ಶಾಶಕರು ನೀಲಿ ಚಿತ್ರ ನೋಡಿ ಸಿಕ್ಕಿ ಬಿದ್ದಿದ್ದರು. ಇದು ಸರಕಾರಕ್ಕೆ ಕಳಂಕದ ಹಣೆಪಟ್ಟಿ ಹಚ್ಚಿತ್ತು. ಇದೇ ರೀತಿ ಗುಜರಾತಿನಲ್ಲೂ ಇಬ್ಬರು ಬಿಜೆಪಿ ಶಾಸಕರು ನೀಲಿ ಚಿತ್ರ ನೋಡಿದ ಘಟನೆ ಆ ನಂತರ ನಡೆದಿತ್ತು.

English summary
A K Saseendran was the latest in the list of Kerala ministers to fall trap in a sex scandal. A minister in the ruling LDF government had to resign after a channel aired an audio clip of the minister allegedly having phone sex.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X