ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಜಿಟಲ್ ಇಂಡಿಯಾ: ಮೋದಿ ಭಾಷಣದ ಹೈಲೈಟ್ಸ್

|
Google Oneindia Kannada News

ನವದೆಹಲಿ, ಜು. 01 : ನರೇಂದ್ರ ಮೋದಿ ಕನಸಿನ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಉದ್ಯಮಿಗಳಿಂದ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಭಾರತದ ಕೈಗಾರಿಕೋದ್ಯಮಿಗಳು ಅಪಾರ ಪ್ರಮಾಣದ ಹೂಡಿಕೆ ಮಾಡಲು ಸಿದ್ಧ ಎಂದು ತಿಳಿಸಿದ್ದಾರೆ.

ನವದೆಹಲಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ನರೇಂದ್ರ ಮೋದಿ, ಪ್ರಪಂಚ ಬದಲಾಗುತ್ತಿದೆ. ತಂತ್ರಜ್ಞಾನ ಬದಲಾಗಿದೆ. ನಾವು ಮತ್ತು ನಮ್ಮ ದೇಶ ಇದಕ್ಕೆ ಹೊಂದಿಕ್ಕೊಳ್ಳಬೇಕು ಎಂದು ಹೇಳಿದರು.[ಡಿಜಿಟಲ್ ಇಂಡಿಯಾ ಎಂದರೇನು? ಉದ್ದೇಶಗಳೇನು?]

modi

ಸಮಾಜದ ಒಳಿತಿಗೆ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು. ಇ ಆಡಳಿತ ಸುಲಭ ಆಡಳಿತ. ಅಕ್ಕಾಗಿಯೇ ಇಂಥ ಅಭಿಯಾನಗಳು ಎಂದು ಪುನರುಚ್ಚಾರ ಮಾಡಿದರು.

ಭಾರತ ಸೇರಿದಂತೆ ವಿದೇಶದ ಹೂಡಿಕೆದಾರರಿಗೆ ಮೋದಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಭಾರತದ ಎಲ್ಲ ಪ್ರಮುಖ ಕಂಪನಿಗಳ ಮುಖ್ಯಸ್ಥರು ಹಾಜರಿದ್ದರು. ಜುಲೈ ಮೊದಲ ವಾರವನ್ನು ಡಿಜಿಟಲ್ ಇಂಡಿಯಾ ವಾರ ಎಂದು ಆಚರಣೆ ಮಾಡಲಾಗುತ್ತಿದೆ. ಟಾಟಾ, ರಿಲಯನ್ಸ್, ಏರ್ ಟೆಲ್ ಸೇರಿದಂತೆ ವಿವಿಧ ಕಂಪನಿಗಳ ಮುಖ್ಯಸ್ಥರು ಒಟ್ಟು 4.50ಲಕ್ಷ ಕೋಟಿ ರು. ಬಂಡವಾಳ ಹೂಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಮೇಕ್ ಇನ್ ಇಂಡಿಯಾ ಅಭಿಯಾನದ ಜತೆ ಡಿಜಿಟಲ್ ಇಂಡಿಯಾ ಮತ್ತಿ ಡಿಸೈನ್ ಇನ ಇಂಡಿಯಾ ಸೇರಿಕೊಂಡರೆ ಮಾಹಿತಿ ಮತ್ತು ತಂತ್ರಜ್ಞಾನಕ್ಕಾಗಿ ಯಾವ ದೇಶದ ಬಳಿಯೂ ಕೈ ಒಡ್ಡಬೇಕಾದ ಅಗತ್ಯ ಇರುವುದಿಲ್ಲ ಎಂದು ನರೇಂದ್ರ ಮೋದಿ ಹೇಳಿದರು.

ಮೋದಿ ಭಾಷಣದ ಹೈಲೈಟ್ಸ್
* ಭ್ರಷ್ಟಾಚಾರ ತಡೆಯಲು ತಂತ್ರಜ್ಞಾನ ಉತ್ತಮ ಮಾರ್ಗ
* ಗುಣಮಟ್ಟದ ಶಿಕ್ಷಣಕ್ಕೆ ಡಿಜಿಟಲ್ ಇಂಡಿಯಾ ಆಧಾರ
* ಆರೋಗ್ಯದ ಸುಧಾರಣೆಗೆ ಡಿಜಿಟಲ್ ಇಂಡಿಯಾ ಉತ್ತಮ ಮಾರ್ಗ
* ತರ್ತು ಪರಿಸ್ಥಿತಿ ಎದುರಿಸಲು ಡಿಜಿಟಲ್ ಇಂಡಿಯಾವೇ ಮಾರ್ಗ[ಉಚಿತವಾಗಿ ಡಿಜಿಟಲ್ ಲಾಕರ್ ತೆರೆಯುವುದು ಹೇಗೆ?]

* ದೇಶದ ಜನತೆಯ ಕನಸನ್ನು ನನಸು ಮಾಡಲು ಇಂಥ ಯೋಜನೆ ಪೂರಕ.
* ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ ರು.4.50 ಲಕ್ಷ ಕೋಟಿ ಬಂಡಾವಾಳ ಹೂಡಿಕೆ ಮಾಡಲಾಗಿದೆ.
* ಯೋಜನೆಯಿಂದ 18 ಲಕ್ಷ ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ.
* ಐಟಿ ಕ್ರಾಂತಿಯ ಅವಕಾಶವನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಬಾರುದು.
* ಸೈಬರ್ ಯುದ್ಧವನ್ನು ತಡೆಯುವ ಶಕ್ತಿ ಭಾರತಕ್ಕೆ ಇದೆ. ಅದನ್ನು ಯುವ ಜನತೆಯಲ್ಲಿ ಬೆಳೆಸಬೇಕು
* ದೇಶಾದ್ಯಂತ ಬ್ಯಾಂಕ್ ಗಳಲ್ಲಿ ಪೇಪರ್ ಲೆಸ್ ವ್ಯವಹಾರ ನನ್ನ ಮುಂದಿನ ಕನಸು.
* ಮೊಬೈಲ್ ಬ್ಯಾಂಕಿಂಗ್ ಗೆ ಇನ್ನು ಹೆಚ್ಚಿನ ಉತ್ತೇಜನ
* ಇ ಆಡಳಿತವೇ ಪಾರದರ್ಶಕ ಆಡಳಿತಕ್ಕೆ ಸಾಕ್ಷಿಯಾಗಲಿದೆ.

ಇದಕ್ಕು ಮುನ್ನ ಮಾತನಾಡಿದ ಉದ್ಯಮಿಗಳು ಮೋದಿ ಅವರ ಕಾರ್ಯಕ್ರಮಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಮುಖೇಶ್ ಅಂಬಾನಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ರಿಲಯನ್ಸ್ ಸಿದ್ಧವಿದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ಸಾಕ್ಷರತೆ ಬಗ್ಗೆ ಅರಿವು ಮೂಡಿಸಿದ ಮಹಿಳೆಯರನ್ನು ಮೋದಿ ಸನ್ಮಾನಿಸಿದರು. ಡಿಜಿಟಲ್ ಇಂಡಿಯಾ ಬೀರಬಹುದಾದ ಪ್ರಭಾವದ ಬಗ್ಗೆ ಕಿರು ಚಿತ್ರವೊಂದನ್ನು ಪ್ರದರ್ಶನ ಮಾಡಲಾಯಿತು.

English summary
In an order to create participative, transparent and responsive government, Prime Minister Narendra Modi launched the much ambitious 'Digital India' programme on Wednesday, July 1 at Indira Gandhi Indoor Stadium in the national capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X