ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಂಗ್ಯೂಗೆ ಚಿಕಿತ್ಸೆ ಕೊಡಿಸಲಾಗದೆ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ

|
Google Oneindia Kannada News

ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಕರುಳು ಕತ್ತರಿಸುವಂಥ ಘಟನೆಯೊಂದು ನಡೆದಿದೆ. ತನ್ನ ಆರು ತಿಂಗಳ ಗಂಡುಮಗುವಿಗೆ ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಮಗುವನ್ನು ಬಾವಿಗೆ ಹಾಕಿ, ಆ ನಂತರ ತಾಯಿಯೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡೆಂಗ್ಯೂ, ವೈರಲ್ ಜ್ವರವೇ? ರಕ್ತ ಬೇಕೆ?ಡೆಂಗ್ಯೂ, ವೈರಲ್ ಜ್ವರವೇ? ರಕ್ತ ಬೇಕೆ?

ಪತ್ನಿ ಹಾಗೂ ಮಗು ಕಾಣಿಸುತ್ತಿಲ್ಲ ಎಂದು ಮಂಗಳವಾರ ಪತಿಯು ಹುಡುಕಾಟ ನಡೆಸುವ ವೇಳೆ ಘಟನೆ ಬೆಳಕಿಗೆ ಬಂದಿದ್ದು, ಮಹಿಳೆ ಮತ್ತು ಮಗುವಿನ ಮೃತ ದೇಹವು ತಮಿಳುನಾಡಿನ ನಾಮಕ್ಕಲ್ ನ ಬಾವಿಯಲ್ಲಿ ತೇಲಾಡುತ್ತಿದ್ದದ್ದು ಪತ್ತೆಯಾಗಿದೆ.

Unable to afford treatment, TN woman kills dengue-affected infant son, self

32 ವರ್ಷದ ಅನ್ಬುಕೋಡಿ ಮಗುವನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡವರು. ಮೃತ ಮಹಿಳೆಯ ಪತಿ ಪೆರಿಸಸ್ವಾಮಿ ವೃತ್ತಿಯಿಂದ ಕ್ಷೌರಿಕರು. ಸೋಮವಾರ ನಾಮಕ್ಕಲ್ ಜಿಲ್ಲಾಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬಂದಾಗ ಡೆಂಗ್ಯೂ ಜ್ವರದ ಶಂಕೆ ವ್ಯಕ್ತಪಡಿಸಲಾಗಿದೆ.

ಎಲ್ಲ ಪರೀಕ್ಷೆಗಳನ್ನು ನಡೆಸಿದ ನಂತರ ಮಗುವಿನ ಸ್ಥಿತಿಯ ಬಗ್ಗೆ ವೈದ್ಯರು ತಿಳಿಸಿದ್ದಾರೆ. ದಿನಕ್ಕೆ ಐದು ಸಾವಿರ ರುಪಾಯಿ ಆಸ್ಪತ್ರೆಯ ಬಿಲ್ ಆಗುತ್ತದೆ ಅಂತಲೂ ಹೇಳಿದ್ದಾರೆ. ಆದರೆ ಅಷ್ಟು ಹಣ ಕೊಟ್ಟು, ಮಗುವಿಗೆ ಚಿಕಿತ್ಸೆ ಕೊಡಿಸುವಷ್ಟು ಆರ್ಥಿಕ ಚೈತನ್ಯ ಈ ದಂಪತಿಗೆ ಇರಲಿಲ್ಲ.

ಡೆಂಗ್ಯೂ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು...ಡೆಂಗ್ಯೂ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು...

ಅನ್ಯ ಮಾರ್ಗವಿಲ್ಲದೆ ಅಸ್ವಸ್ಥವಾಗಿದ್ದ ಮಗುವನ್ನು ಕರೆದುಕೊಂಡು ಮನೆಗೆ ತೆರಳಿದ್ದಾರೆ. ಮಂಗಳವಾರ ಮಗುವನ್ನು ಕರೆದುಕೊಂಡು ಮನೆಯಿಂದ ಹೊರಟ ಮಹಿಳೆ ಮೊದಲಿಗೆ ಮಗುವನ್ನು ಬಾವಿಗೆ ಹಾಕಿ, ಆ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಮಿಳುನಾಡಿನಲ್ಲಿ ಈ ವರೆಗೆ ಇಪ್ಪತ್ತೇಳು ಮಂದಿ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಜ್ವರದ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಸರಕಾರವು ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲು ನಿರಾಕರಿಸಿದೆ. ಸೊಳ್ಳೆಗಳ ನಾಶಕ್ಕೆ ಅಂತಲೇ ಹದಿನಾರು ಕೋಟಿ ರುಪಾಯಿ ಹಣವನ್ನು ಸರಕಾರ ಎತ್ತಿಟ್ಟಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ.

English summary
Unable to afford treatment for her six-month-old son diagnosed with suspected dengue, a woman in Tamil Nadu threw the child into a well before jumping in after. The incident came to light when the woman's husband went looking for the missing duo and found their bodies floating in a nearby well in Namakkal district of Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X