• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಗ್ರ ಸಂಘಟನೆ ಸೇರಿದವರಲ್ಲಿ ಕರ್ನಾಟಕ, ಕೇರಳದವರೇ ಹೆಚ್ಚು!

|

ನವದೆಹಲಿ, ಜುಲೈ.26: ಜಾಗತಿಕ ಮಟ್ಟದಲ್ಲಿ ಶಾಂತಿ ಕದಡುತ್ತಿರುವ ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆಯ ಸದಸ್ಯರು ಕರ್ನಾಟಕ ಮತ್ತು ಕೇರಳದಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯು ಎಚ್ಚರಿಕೆ ನೀಡಿದೆ.

ಭಾರತ, ಪಾಕಿಸ್ತಾನ, ಮಯನ್ಮಾರ್, ಮತ್ತು ಬಾಂಗ್ಲಾದೇಶದ 150 ರಿಂದ 200 ಮಂದಿ ಉಗ್ರರು ಅಲ್-ಖೈದಾ ಉಗ್ರ ಸಂಘಟನೆಯಲ್ಲಿ ಸೇರಿಕೊಂಡಿದ್ದು ಪ್ರತೀಕಾರಕ್ಕಾಗಿ ದಾಳಿ ನಡೆಸುವುದಕ್ಕೆ ಯೋಜನೆ ರೂಪಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಎಚ್ಚರಿಸಿದೆ.

ತೀರ್ಥಹಳ್ಳಿ ಉಗ್ರನ ಬಗ್ಗೆ ಮಾಹಿತಿ ನೀಡಿದರೆ ಬಹುಮಾನ: ಎನ್ಐಎ

ಭಾರತೀಯ ಉಪಖಂಡದಲ್ಲಿ ಉಗ್ರ ಚಟುವಟಿಕೆ ಆರಂಭಿಸುವುದಕ್ಕೆ ಅಲ್-ಖೈದಾ ಪ್ಲ್ಯಾನ್ ಮಾಡಿಕೊಂಡಿದೆ. ಈಗಾಗಲೇ ಅಫ್ಘಾನಿಸ್ತಾನದ ನಿಮ್ರುಜ್, ಹೆಲ್ಮಂದ್ ಮತ್ತು ಕಂದಹಾರ್ ಪ್ರಾಂತ್ಯಗಳಲ್ಲಿ ತಾಲಿಬಾನ್ ಅಡಿಯಲ್ಲಿ ಅಲ್-ಖೈದಾ ಪ್ರತೀಕಾರಕ್ಕಾಗಿ ಹವಣಿಸುತ್ತಿದೆ. ಅದಕ್ಕಾಗಿ ಬೆಂಬಲ ನೀಡುವಂತೆ ಐಸಿಸ್ ಮತ್ತು ಅಲ್-ಖೈದಾ ಉಗ್ರ ಸಂಘಟನೆಗಳ ಸಂಪರ್ಕದಲ್ಲಿ ಸದಸ್ಯರು ಇದ್ದಾರೆ ಎಂದು 26ನೇ ವಿಶ್ಲೇಷಣಾತ್ಮಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತೀಕಾರಕ್ಕಾಗಿ ದಾಳಿ ನಡೆಸಲು ಸಂಚು:

ಅಲ್-ಖೈದಾದ ಈ ಉಗ್ರರ ಗುಂಪಿನಲ್ಲಿ ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್ ಮತ್ತು ಪಾಕಿಸ್ತಾನದ 150 ರಿಂದ 200 ಸದಸ್ಯರಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರತ ಉಪಖಂಡದಲ್ಲಿ ಅಲ್-ಖೈದಾ(ಎಕ್ಯೂಐಎಸ್) ಉಗ್ರ ಸಂಘಟನೆಗೆ ಒಸಾಮಾ ಮಹಮೂದ್ ಮುಖ್ಯಸ್ಥನಾಗಿದ್ದಾನೆ. ಎಕ್ಯೂಐಎಸ್ ಮಾಜಿ ನಾಯಕ ಅಸಿಮ್ ಉಮರ್ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಈ ಪ್ರದೇಶದಲ್ಲಿ ಪ್ರತೀಕಾರದ ಕಾರ್ಯಾಚರಣೆಯನ್ನು ಯೋಜಿಸುತ್ತಿದೆ ಎಂದು ವರದಿಯಾಗಿದೆ.

2019ರ ಮೇ.10ರಂದು ಘೋಷಿಸಲ್ಪಟ್ಟ ಅಂಕಿ-ಅಂಶಗಳ ಪ್ರಕಾರ ಭಾರತೀಯ ಅಂಗಸಂಸ್ಥೆಯಾಗಿರುವ ಐಎಸ್ಐಎಲ್ (ಹಿಂದ್ ವಿಲಾಯಾ) 180 ರಿಂದ 200 ಸದಸ್ಯರನ್ನು ಹೊಂದಿದೆ ಎಂದು ಒಂದು ಸದಸ್ಯ ರಾಷ್ಟ್ರವು ವರದಿ ಮಾಡಿತ್ತು. ಈ ಪೈಕಿ ಕೇರಳ ಮತ್ತು ಕರ್ನಾಟಕ ಭಾಗದಲ್ಲಿ ಅತಿಹೆಚ್ಚು ಕಾರ್ಯಚಟುವಟಿಕೆಗಳನ್ನು ನಡೆಸುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

English summary
United Nations Report: Significant numbers Of Islamic State Terrorists In Karnataka And Kerala. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X