ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌ನಲ್ಲಿ ತಕ್ಷಣದ ಕದನ ವಿರಾಮದ ಅಗತ್ಯವನ್ನು ಒಪ್ಪಿದ ಭಾರತ, ಚೀನಾ

|
Google Oneindia Kannada News

ನವದೆಹಲಿ, ಮಾರ್ಚ್ 25: ಉಕ್ರೇನ್ ಬಿಕ್ಕಟ್ಟು ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆಗೆ ಕಾರಣವಾಗಿರುವುದರಿಂದ, ಭಾರತ ಮತ್ತು ಚೀನಾ ಶುಕ್ರವಾರದಂದು ತಕ್ಷಣದ ಕದನ ವಿರಾಮದ ಅಗತ್ಯವನ್ನು ಒಪ್ಪಿಕೊಂಡಿವೆ. ಸಂಘರ್ಷವನ್ನು ಶಮನಗೊಳಿಸಲು ರಾಜತಾಂತ್ರಿಕತೆ ಮತ್ತು ಮಾತುಕತೆಯ ಹಾದಿಗೆ ಮರಳುವುದು ಅಗತ್ಯ ಎಂದು ಉಭಯ ರಾಷ್ಟ್ರಗಳು ಹೇಳಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಭಾರತಕ್ಕೆ ಭೇಟಿ ನೀಡಿದ ಚೀನಾದ ಸಹವರ್ತಿ ವಾಂಗ್ ಯಿ ನಡುವೆ ಮೂರು ಗಂಟೆಗಳ ಮಾತುಕತೆಯಲ್ಲಿ ಈ ಸಮಸ್ಯೆಯ ಬಗ್ಗೆ ಚರ್ಚೆ ನಡೆದಿದೆ. "ವಾಂಗ್ ಯಿ ಅವರು ಚೀನಾದ ವಿಚಾರವನ್ನು ಪ್ರಸ್ತುತಪಡಿಸಿದರು, ಅಲ್ಲಿನ ಪರಿಸ್ಥಿತಿ ಮತ್ತು ಅದಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಚೀನಾದ ದೃಷ್ಟಿಕೋನವನ್ನು ನಮಗೆ ತಿಳಿಸಿದರು. ನಾನು ಭಾರತೀಯ ದೃಷ್ಟಿಕೋನವನ್ನು ಅವರ ಮುಂದೆ ಪ್ರಸ್ತುತಪಡಿಸಿದೆ," ಎಂದು ಜೈಶಂಕರ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಉಕ್ರೇನ್‌-ರಷ್ಯಾ ಯುದ್ಧದ ಬಗ್ಗೆ ಭಾರತದ ಪ್ರತಿಕ್ರಿಯೆ ಅಸ್ಥಿರ: ಜೋ ಬೈಡೆನ್‌ಉಕ್ರೇನ್‌-ರಷ್ಯಾ ಯುದ್ಧದ ಬಗ್ಗೆ ಭಾರತದ ಪ್ರತಿಕ್ರಿಯೆ ಅಸ್ಥಿರ: ಜೋ ಬೈಡೆನ್‌

"ಎರಡೂ ಕಡೆಯವರು ತಮ್ಮ ತಮ್ಮ ವಿಧಾನಗಳು ಮತ್ತು ದೃಷ್ಟಿಕೋನಗಳನ್ನು ಚರ್ಚಿಸಿದರು ಮತ್ತು ರಾಜತಾಂತ್ರಿಕತೆ ಮತ್ತು ಮಾತುಕತೆಗೆ ಆದ್ಯತೆ ನೀಡಬೇಕು ಎಂಬುವುದು ಎರಡೂ ದೇಶಗಳ ಅಭಿಪ್ರಾಯವಾಗಿದೆ," ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ಹೇಳಿದರು.

Ukraine-Russia War: India, China Agree On Need For Immediate Ceasefire In Ukraine

"ನಿಮ್ಮಲ್ಲಿ ಅನೇಕರು ನಾನು ನಿನ್ನೆ ಸಂಸತ್ತಿನಲ್ಲಿ ಉಕ್ರೇನ್‌ ರಷ್ಯಾ ಯುದ್ಧದ ಬಗ್ಗೆ ಭಾರತೀಯ ದೃಷ್ಟಿಕೋನದ ವಿಚಾರದಲ್ಲಿ ಮಾತನಾಡುವುದನ್ನು ಕೇಳಿರಬಹುದು ನಾನು ಭಾವಿಸುತ್ತೇನೆ. ನಿಸ್ಸಂಶಯವಾಗಿ, ಅವರು ಹೇಳಿದ್ದು ಅವರ ದೃಷ್ಟಿಕೋನ ಮತ್ತು ನಾನು ಹೇಳಿದ್ದು ನನ್ನ ದೃಷ್ಟಿಕೋನ, ಆದರೆ ಅಲ್ಲಿ ನಾವು ಸಾಮಾನ್ಯ ಅಂಶವನ್ನು ಹೊಂದಿದ್ದೇವೆ. ನಾವಿಬ್ಬರೂ ತಕ್ಷಣದ ಕದನ ವಿರಾಮದ ಪ್ರಾಮುಖ್ಯತೆ ಮತ್ತು ರಾಜತಾಂತ್ರಿಕತೆ ಮತ್ತು ಸಂವಾದಕ್ಕೆ ಮರಳುವ ಮಹತ್ವವನ್ನು ಒಪ್ಪಿಕೊಂಡಿದ್ದೇವೆ," ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದರು.

ನ್ಯಾಟೋ ಸಭೆ ಬೆನ್ನಲ್ಲೇ ಚೀನಾಗೆ ವಾರ್ನಿಂಗ್ ಕೊಟ್ಟ ಬೈಡನ್!ನ್ಯಾಟೋ ಸಭೆ ಬೆನ್ನಲ್ಲೇ ಚೀನಾಗೆ ವಾರ್ನಿಂಗ್ ಕೊಟ್ಟ ಬೈಡನ್!

ಭಾರತದ ನಿಲುವು ಸ್ಥಿರ ಎಂದ ಜೈಶಂಕರ್‌

ರಷ್ಯಾ-ಉಕ್ರೇನ್ ಸಂಘರ್ಷದ ಕುರಿತು ಭಾರತದ ನಿಲುವು "ಸ್ಥಿರವಾಗಿದೆ". ಭಾರತವು ಮಾತುಕತೆಯ ಮೂಲಕ ಸಂಘರ್ಷವನ್ನು ಪರಿಹರಿಸಲು ಬಯಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ಗುರುವಾರ ಸಂಸತ್ತಿನಲ್ಲಿ ಹೇಳಿದರು. ಉಕ್ರೇನ್ ಮೇಲಿನ ಆಕ್ರಮಣಕ್ಕಾಗಿ ಭಾರತವು ರಷ್ಯಾವನ್ನು ಇನ್ನೂ ಟೀಕಿಸಿಲ್ಲ ಮತ್ತು ರಷ್ಯಾದ ದಾಳಿಯನ್ನು ಖಂಡಿಸುವಲ್ಲಿ ಯುಎನ್ ಮತದಾನದಿಂದ ಭಾರತವು ದೂರ ಉಳಿದಿತ್ತು ಎಂದು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ಚೀನಾವು ರಷ್ಯಾದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ ಮತ್ತು ಉಕ್ರೇನ್ ಮೇಲಿನ ರಷ್ಯಾದ ದಾಳಿಯ ನಂತರ ಯುಎಸ್ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಘೋಷಿಸಿದ ಆರ್ಥಿಕ ನಿರ್ಬಂಧಗಳ ಪರಿಣಾಮವನ್ನು ಸರಿದೂಗಿಸಲು ಮಾಸ್ಕೋಗೆ ಸಹಾಯ ಮಾಡುವ ಇಚ್ಛೆಯನ್ನು ಹೊಂದಿರುವ ಬಗ್ಗೆ ಸುಳಿವನ್ನು ನೀಡುತ್ತಿದೆ.

ಕ್ವಾಡ್ ವಿಷಯವನ್ನು ಚೀನಾದ ವಿದೇಶಾಂಗ ಸಚಿವರು ಪ್ರಸ್ತಾಪಿಸಿದ್ದಾರೆಯೇ ಎಂಬ ಪ್ರಶ್ನೆಗೆ, ಪ್ರತಿಕ್ರಿಯೆ ನೀಡಿದ ಜೈಶಂಕರ್‌, "ಇಲ್ಲ, ಅದನ್ನು ಎತ್ತಲಾಗಿಲ್ಲ. ಹಾಗಾಗಿ, ಕ್ವಾಡ್ ಕುರಿತು ಯಾವುದೇ ಸಂಭಾಷಣೆ ನಡೆದಿಲ್ಲ," ಎಂದು ಸ್ಪಷ್ಟಪಡಿಸಿದರು. ಬೇರೋಂದು ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜೈಶಂಕರ್‌ ಇಂಡೋ-ಪೆಸಿಫಿಕ್ ಸಮಸ್ಯೆಯು ಸಹ ಲೆಕ್ಕಾಚಾರವಿಲ್ಲ ಎಂದು ಹೇಳಿದರು. "ನಾವು ಬಹುಪಕ್ಷೀಯ ವಿಷಯಗಳ ಬಗ್ಗೆ ಸ್ವಲ್ಪ ಸಮಯವನ್ನು ಕಳೆದಿದ್ದೇವೆ. ಭದ್ರತಾ ಮಂಡಳಿ ಸೇರಿದಂತೆ ಯುಎನ್‌ ವ್ಯವಸ್ಥೆಯ ದೀರ್ಘಾವಧಿಯ ಸುಧಾರಣೆಯನ್ನು ಮುಂದಕ್ಕೆ ತೆಗೆದುಕೊಳ್ಳುವ ಅಗತ್ಯವನ್ನು ನಾನು ಒತ್ತಿಹೇಳಿದೆ," ಎಂದು ಜೈಶಂಕರ್ ಉಲ್ಲೇಖಿಸಿದರು.

ಭಾರತದ ಪ್ರತಿಕ್ರಿಯೆಯು ಅಸ್ಥಿರ ಎಂದಿದ್ದ ಜೋ ಬೈಡೆನ್‌

Recommended Video

ಅಭ್ಯಾಸ ಪಂದ್ಯದಲ್ಲಿ Virat ಯಾಕೆ ಆಡ್ಲಿಲ್ಲ? ಫಾಫ್- ವಿರಾಟ್ ಮಧ್ಯೆ ಬಿರುಕು? | Oneindia Kannada

ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣಕ್ಕೆ ಭಾರತದ ಪ್ರತಿಕ್ರಿಯೆಯು ಅಸ್ಥಿರವಾದುದ್ದು ಎಂದು ಯುಎಸ್ ಅಧ್ಯಕ್ಷ ಜೋ ಬೈಡೆನ್‌ ಸೋಮವಾರ ಹೇಳಿದ್ದಾರೆ. ಎರಡನೇ ಮಹಾಯುದ್ಧದ ನಂತರ ಯುರೋಪಿನ ಅತ್ಯಂತ ಕೆಟ್ಟ ಸಂಘರ್ಷಗಳಲ್ಲಿ ಒಂದಾಗಿರುವ ಉಕ್ರೇನ್‌ ರಷ್ಯಾ ಯುದ್ಧದ ಬಗ್ಗೆ ಭಾರತದ ನಿಲುವಿನ ಬಗ್ಗೆ ಈಗಾಗಲೇ ಹಲವಾರು ನಾಯಕರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
Ukraine-Russia War: India, China Agree On Need For Immediate Ceasefire In Ukraine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X