ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌ನಲ್ಲಿರುವ ಭಾರತೀಯರ ರಕ್ಷಣೆಗೆ ಸ್ಪೈಸ್ ಜೆಟ್ ವಿಶೇಷ ವಿಮಾನ

|
Google Oneindia Kannada News

ನವದೆಹಲಿ, ಫೆಬ್ರವರಿ 28: ರಷ್ಯಾ ಹಾಗೂ ಉಕ್ರೇನ್‌ ಸಂಘರ್ಷಣೆಯ ನಡುವೆ ಸಿಲುಕಿರುವ ಭಾರತೀಯರ ರಕ್ಷಣೆಗೆ ಸ್ಪೈಸ್ ಜೆಟ್ ವಿಶೇಷ ವಿಮಾನಗಳನ್ನು ಕಳುಹಿಸಿಕೊಡಲಾಗುತ್ತಿದೆ.

ಭಾರತ ತನ್ನ ನಾಗರಿಕರನ್ನು ಉಕ್ರೇನ್ ನೊಂದಿಗೆ ಗಡಿ ಹಂಚಿಕೊಂಡಿರುವ ಹಂಗೇರಿ, ರೊಮಾನಿಯಾಗಳಿಂದ ಏರ್ ಲಿಫ್ಟ್ ಮಾಡುವ ಕಾರ್ಯಾಚರಣೆ "ಆಪರೇಷನ್ ಗಂಗಾ"ವನ್ನು ಶನಿವಾರದಿಂದ ಪ್ರಾರಂಭಿಸಿದೆ. ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಫೆ.24 ರಿಂದ ಉಕ್ರೇನ್ ನ ವಾಯುಪ್ರದೇಶವನ್ನು ಪ್ರಯಾಣಿಕ ವಿಮಾನಗಳಿಗೆ ಬಂದ್ ಮಾಡಲಾಗಿದೆ.

ವಿದ್ಯಾರ್ಥಿಗಳ ರಕ್ಷಣೆಗೆ ಉಕ್ರೇನಿನತ್ತ ಹೊರಟ ಕೇಂದ್ರದ 4 ಸಚಿವರುವಿದ್ಯಾರ್ಥಿಗಳ ರಕ್ಷಣೆಗೆ ಉಕ್ರೇನಿನತ್ತ ಹೊರಟ ಕೇಂದ್ರದ 4 ಸಚಿವರು

ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗಲು ಇನ್ನೂ ಹೆಚ್ಚಿನ ವಿಮಾನಗಳನ್ನು ಸ್ಪೈಸ್ ಜೆಟ್ ನಿಯೋಜಿಸುವ ಯೋಜನೆ ಹೊಂದಿರುವುದಾಗಿ ಸಂಸ್ಥೆ ತಿಳಿಸಿದೆ.

Ukraine Crisis: Spicejet To Operate Special Flight To Evacuate Stranded Indians

ಹಂಗೇರಿಯ ರಾಜಧಾನಿ ಬುದಾಪೆಸ್ಟ್ ಗೆ ಈ ವಿಶೇಷ ವಿಮಾನಗಳು ತೆರಳಲಿದ್ದು ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಿದೆ.

ಟಾಟಾ ಸಮೂಹದ ಏರ್ ಇಂಡಿಯಾ 1,156 ಭಾರತೀಯರನ್ನು 5 ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಈ ವರೆಗೂ ದೇಶಕ್ಕೆ ಸುರಕ್ಷಿತವಾಗಿ ಕರೆತಂದಿದ್ದರೆ, ಇಂದು ಸಂಜೆ 6 ನೇ ವಿಮಾನ 240 ಭಾರತೀಯರನ್ನು ಹೊತ್ತು ನವದೆಹಲಿಯಲ್ಲಿ ಇಳಿಯಲಿದೆ. ಉಕ್ರೇನ್ ನಲ್ಲಿ ಕಾಲೇಜು ವಿದ್ಯಾರ್ಥಿಗಳೂ ಸೇರಿ 14,000 ಭಾರತೀಯರು ಸಿಲುಕಿಕೊಂಡಿದ್ದಾರೆ.

ಏರ್ ಇಂಡಿಯಾ ಬೆನ್ನಲ್ಲೇ ಸ್ಪೈಸ್ ಜೆಟ್ ಸಹ ದೇಶದ ನಾಗರಿಕರನ್ನು ರಕ್ಷಿಸಲು ಮುಂದಾಗಿದ್ದು ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಮೂಲಕ ಕಾರ್ಯಾಚರಣೆ ನಡೆಸಲು ದೆಹಲಿಯಿಂದ ಹೊರಡಲಿದೆ. ದೆಹಲಿಯಿಂದ ಬುದಾಸ್ಟ್‌ಗೆ ತೆರಳಲಿರುವ ಸ್ಪೈಸ್ ಜೆಟ್ ವಿಮಾನ, ಗೋರ್ಜಿಯಾದ ಕುಟೈಸಿ ಮೂಲಕ ವಾಪಸ್ಸಾಗಲಿದೆ.

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಕೇಂದ್ರ ಮುಂದಾಗಿದೆ. ಹಾಗೆಯೇ ಉಕ್ರೇನ್‌ಗೆ ಕೇಂದ್ರದ ನಾಲ್ವರು ಸಚಿವರು ಹೊರಟಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ.

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಮೋದಿ ಸರ್ಕಾರ ಇದೀಗ ನಾಲ್ವರು ಕೇಂದ್ರ ಸಚಿವರನ್ನೇ ಉಕ್ರೇನ್​ ಗಡಿ ರಾಷ್ಟ್ರಗಳಿಗೆ ಕಳುಹಿಸಲು ಮುಂದಾಗಿದೆ.

ಈ ನಾಲ್ವರು ಸಚಿವರು ಉಕ್ರೇನ್​ ನೆರೆಯ ರಾಷ್ಟ್ರಗಳಿಗೆ ಹರ್ದೀಪ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ವಿಕೆ ಸಿಂಗ್ ಅವರು ಉಕ್ರೇನ್​​ ನೆರೆಯ ದೇಶಗಳಿಗೆ ಪ್ರಯಾಣ ಬೆಳೆಸಲಿದ್ದಾರೆ.

ಸುಮಾರು 16,000 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಬಂಕರ್‌ಗಳು, ಬಾಂಬ್ ಶೆಲ್ಟರ್‌ಗಳು ಅಥವಾ ಅವರ ಹಾಸ್ಟೆಲ್‌ಗಳ ನೆಲಮಾಳಿಗೆಯಲ್ಲಿ ಅಡಗಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದ್ದು, ಅವರ ರಕ್ಷಣಾ ಕಾರ್ಯಕ್ಕೆ ಮುಂದಾಗಲಿದ್ದಾರೆ.

ಪ್ರಧಾನಿ ಮೋದಿ ಭಾನುವಾರವೂ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಪ್ರಧಾನಿ ಮೋದಿಯವರಲ್ಲದೆ ವಿದೇಶಾಂಗ ಸಚಿವ ಎಸ್. ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

English summary
SpiceJet will operate a special flight to Hungarian capital Budapest on Friday to evacuate Indians who have been stranded in Ukraine due to the Russian military offensive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X