ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಉದ್ಯಮಿ ನೀರವ್ ಮೋದಿ ಹಸ್ತಾಂತರ ಇನ್ನು ದೂರವಿಲ್ಲ

|
Google Oneindia Kannada News

ನವದೆಹಲಿ, ಜೂನ್ 23: ವಿದೇಶಕ್ಕೆ ಪರಾರಿ ಆಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ವಿರೋಧಿಸಿದ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಬುಧವಾರ ಯುಕೆ ಹೈಕೋರ್ಟ್ ತಿರಸ್ಕರಿಸಿದೆ.

ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 14,000 ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿ ಆಗಿರುವ ಉದ್ಯಮಿ ನೀರವ್ ಮೋದಿ ಕಳೆದ ತಿಂಗಳು ಲಂಡನ್ ಹೈಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಪಿಟಿಐ ವರದಿ ಪ್ರಕಾರ, ಕಾಗದದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಕೆಯ ಅವಕಾಶವನ್ನು ಲಂಡನ್ ಹೈಕೋರ್ಟ್ ನಿರಾಕರಿಸಿರುವ ಬಗ್ಗೆ ದೃಢಪಡಿಸಿದೆ.

ಉದ್ಯಮಿ ಮಲ್ಯ, ನೀರವ್ ಮೋದಿ, ಚೋಕ್ಸಿ 8441.5 ಕೋಟಿ ಆಸ್ತಿ ಬ್ಯಾಂಕ್​ಗಳಿಗೆ ವರ್ಗಾವಣೆಉದ್ಯಮಿ ಮಲ್ಯ, ನೀರವ್ ಮೋದಿ, ಚೋಕ್ಸಿ 8441.5 ಕೋಟಿ ಆಸ್ತಿ ಬ್ಯಾಂಕ್​ಗಳಿಗೆ ವರ್ಗಾವಣೆ

ಆದರೆ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಮುಂದುವರಿಸಬಹುದೇ ಇಲ್ಲವೇ ಎಂಬುದನ್ನು ತಿಳಿಯಲು ಹೊಸ ಮೇಲ್ಮನವಿ ಅರ್ಜಿಯೊಂದಿಗೆ ಹೈಕೋರ್ಟ್‌ನಲ್ಲಿ ಸಂಕ್ಷಿಪ್ತ ಮೌಖಿಕ ವಿಚಾರಣೆಯ್ನು ನೀರವ್ ಮೋದಿ ಎದುರಿಸಬೇಕಾಗುತ್ತದೆ.

UK High Court Refuses Nirav Modis Application To Appeal Against His Extradition To India

ಭಾರತಕ್ಕೆ ನೀರವ್ ಮೋದಿ ಹಸ್ತಾಂತರ ಆದೇಶ:

ವಜ್ರದ ವ್ಯಾಪಾರಿ ನೀರವ್ ಮೋದಿ ಅನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಏಪ್ರಿಲ್ 15ರ 2020ರಂದೇ ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಆದೇಶ ಹೊರಡಿಸಿದ್ದಾರೆ. 2019 ಮಾರ್ಚ್ 19ರ ಬಂಧಿಸಲ್ಪಟ್ಟ ದಿನದಿಂದ ಇಂದಿನವರೆಗೂ ಆರೋಪಿ ನೀರವ್ ಮೋದಿ, ಲಂಡನ್ ವಾಂಡ್ಸವರ್ತ್ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ.

ಭಾರತದಲ್ಲಿ ಪರಾರಿ ಆಗಿದ್ದು ಯಾವಾಗ?:

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ನೀರವ್ ಮೋದಿ 2018ರ ಜನವರಿ 1ರಂದು ಭಾರತದಿಂದ ಪರಾರಿ ಆಗುತ್ತಾರೆ. 2018ರ ಜೂನ್ ತಿಂಗಳಿನಲ್ಲಿ ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜೊತೆಗೆ ಜಾಮೀನುರಹಿತ ಬಂಧನದ ವಾರೆಂಟ್ ಜಾರಿಗೊಳಿಸಲಾಗುತ್ತದೆ.

English summary
UK High Court Refuses Diamantaire Nirav Modi's Application To Appeal Against His Extradition To India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X