ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯಗೆ ಹೆಚ್ಚಿದ ಸಂಕಷ್ಟ: ಲಂಡನ್‌ನಲ್ಲಿನ ಆಸ್ತಿ ಮುಟ್ಟುಗೋಲಿಗೆ ಅನುಮತಿ

|
Google Oneindia Kannada News

ಲಂಡನ್, ಜುಲೈ, 05: ಸಾಲಮಾಡಿ ಪರಾರಿಯಾಗಿ ಈಗ ಸಾಲಮರುಪಾವತಿಸಲು ಸಿದ್ದವಾಗಿರುವ ಮದ್ಯದ ದೊರೆ ವಿಜಯ್‌ ಮಲ್ಯಗೆ ಸಂಕಷ್ಟ ಇನ್ನಷ್ಟು ಹೆಚ್ಚಿದೆ. ಭಾರತದಲ್ಲಿನ ಅವರ ಆಸ್ತಿ ಕೈತಪ್ಪುವ ಬೆನ್ನಲ್ಲೆ ಅವರ ಲಂಡನ್‌ನಲ್ಲಿನ ಆಸ್ತಿಯೂ ಕೈತಪ್ಪಲಿದೆ.

ಭಾರತದ 13 ರಾಷ್ಟ್ರೀಕೃತ ಬ್ಯಾಂಕುಗಳ ಮೊರೆಗೆ ಓಗೊಟ್ಟಿರುವ ಯುವೈಟೆಡ್ ಕೀಂಗ್‌ಡಮ್‌ ನ್ಯಾಯಾಲಯವು ವಿಜಯ್ ಮಲ್ಯರ ಲಂಡನ್‌ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡಿದೆ.

UK court rules in favour of Indian banks, permits seizing of Mallyas London assets

ವಿಜಯ್‌ ಮಲ್ಯಾ ಲಂಡನ್ ಸೇರಿ ಇಂಗ್ಲೆಂಡ್ ವೇಲ್ಸ್‌ ಸೇರಿ ಹಲವು ಕಡೆ ಆಸ್ತಿ ಹೊಂದಿದ್ದು ಇವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಭಾರತದ ಬ್ಯಾಂಕುಗಳು ಕೇಳಿದ್ದ ಅನುಮತಿಯನ್ನು ಲಂಡನ್‌ನ ಹೈಕೋರ್ಟ್‌ ನೀಡಿದೆ.

159 ಕಡೆ ವಿಜಯ್ ಮಲ್ಯ ಆಸ್ತಿ ಪತ್ತೆ ಹಚ್ಚಿದ ಬೆಂಗಳೂರು ಪೊಲೀಸರು159 ಕಡೆ ವಿಜಯ್ ಮಲ್ಯ ಆಸ್ತಿ ಪತ್ತೆ ಹಚ್ಚಿದ ಬೆಂಗಳೂರು ಪೊಲೀಸರು

ಭಾರತದಲ್ಲಿ ಸಹ ವಿಜಯ್ ಮಲ್ಯ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಬೆಂಗಳೂರು ಪೊಲೀಸರು ವಿಜಯ್ ಮಲ್ಯಗೆ ಸೇರಿದ 159 ಆಸ್ತಿಗಳನ್ನು ಪತ್ತೆ ಮಾಡಿ ಅದರ ವಿವರಗಳನ್ನು ಪಟಿಯಾಲಾ ಕೋರ್ಟ್‌ಗೆ ಸಲ್ಲಿಸಿದ್ದಾರೆ.

ಮಲ್ಯರ ಆಸ್ತಿ ಮುಟ್ಟುಗೋಲಿಗೆ ಅವಕಾಶ ಕೋರಿ ಭಾರತದ ಎಸ್‌ಬಿಐ, ಎಸ್‌ಬಿಎಂ, ಬಿಒಬಿ, ಕಾರ್ಪೊರೇಶನ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಜಮ್ಮು ಆಂಡ್ ಕಾಶ್ಮೀರ್ ಬ್ಯಾಂಕ್, ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್, ಯುಸಿಓ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜೆಮ್ ಫೈನಾನ್ಸ್ ಅಸೆಟ್ ರಿಕನ್ಸಸ್ಟ್ರಕ್ಷನ್ ಬ್ಯಾಂಕುಗಳು ಅನುಮತಿ ಕೋರಿ ಅರ್ಜಿ ಹಾಕಿದ್ದವು.

ಮೋದಿಗೆ ಪತ್ರ ಬರೆದು ನೋವು ತೋಡಿಕೊಂಡ ಮಲ್ಯಮೋದಿಗೆ ಪತ್ರ ಬರೆದು ನೋವು ತೋಡಿಕೊಂಡ ಮಲ್ಯ

ಕ್ವೀನ್ಸ್‌ ನ್ಯಾಯಾಲಯವು ನೀಡಿರುವ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಮಲ್ಯ ಅವರು ನ್ಯಾಯಾಲಯಕ್ಕೆ ತಿಳಿಸಿದ್ದು ಮೇಲ್ಮನವಿ ಅರ್ಜಿ ಇನ್ನೂ ಬಾಕಿ ಉಳಿದಿದೆ.

ಇತ್ತೀಚೆಗಷ್ಟೆ ವಿಜಯ್ ಮಲ್ಯ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ತಾನು ಸಾಲ ಮರುಪಾವತಿಸಲು ಸಿದ್ಧವಿರುವುದಾಗಿ ತಿಳಿಸಿದ್ದರು. ಅವರು ಕಿಂಗ್‌ಪಿಶರ್ ಏರ್‌ಲೈನ್ಸ್ ನೌಕರರಿಗೂ ಪತ್ರ ಬರೆದಿದ್ದರು.

English summary
In a major setback for absconding liquor baron Vijay Mallya, a United Kingdom (UK) court has ordered in favor of 13 Indian banks and granted permission to seize his properties in UK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X