ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಅಧಿಕೃತ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ

By Mahesh
|
Google Oneindia Kannada News

ಬೆಂಗಳೂರು, ಜುಲೈ 19: ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) mAadhaar ಅಪ್ಲಿಕೇಷನ್ ಬಿಡುಗಡೆ ಮಾಡಿದೆ.
ಈ ಎಂಆಧಾರ್ ಅಪ್ಲಿಕೇಷನ್ ಬುಧವಾರದಿಂದ ಆಂಡ್ರಾಯ್ಡ್ ಫೋನ್ ಗಳಲ್ಲಿ ಲಭ್ಯವಿರಲಿದೆ.

ಇನ್ಮುಂದೆ ಮೊಬೈಲ್ ನಲ್ಲಿಯೇ ಆಧಾರ್ ಕಾರ್ಡ್ ಕೊಂಡೊಯ್ಯಬಹುದು ಎಂದು ಆಧಾರ್ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಹೆಸರು, ಹುಟ್ಟಿದ ದಿನ, ಲಿಂಗ, ಫೋಟೋ ಹಾಗೂ ವಿಳಾಸದ ಮಾಹಿತಿ ಕೇವಲ ಒಂದು ಕ್ಲಿಕ್ ನಲ್ಲಿ ಸಿಗಲಿದೆ.

UIDAI launches mAdhaar app for Android platform

ಗೋಗಲ್ ಪ್ಲೇ ಸ್ಟೋರ್ ನಲ್ಲಿ ನೀವು ಈ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಅಪ್ಲಿಕೇಷನ್ ಓಪನ್ ಮಾಡಿದ ಬಳಿಕ 12 ಅಂಕಿಗಳ ಪಾಸ್ವರ್ಡ್ ಹಾಕಬೇಕಾಗುತ್ತದೆ. ನಂತರ ಆಪ್ ನಿಂದ ನಿಮ್ಮ ನೋಂದಾಯಿತ ಮೊಬೈಲಿಗೆ ಸಮಯಾಧಾರಿತ ಒನ್ ಟೈಮ್ ಪಾಸ್ವರ್ಡ್ ಬರಲಿದೆ. ಇದನ್ನು ನಮೂದಿಸಿ ವೆರಿಫಿಕೇಷನ್ ಪ್ರಕ್ರಿಯೆ ಮುಗಿಸಿದರೆ ಈ ಎಂಆಧಾರ್ ಬಳಸಬಹುದಾಗಿದೆ.


ಎಂಆಧಾರ್ ನಿಖರ ಮಾಹಿತಿಯನ್ನು ನೀಡಲಿದ್ದು, ನಿಮ್ಮ ಆಧಾರ್ ಪ್ರಿಂಟೆಟ್ ಕಾರ್ಡ್ ನಂತೆ ಇದನ್ನು ಬಳಸಬಹುದಾಗಿದೆ. ಕ್ಯೂ ಆರ್ ಕೋಡ್, ಇಕೆವೈಸಿ ಡಾಟಾ ಬಳಕೆ ಮಾಡಿ ಮಾಹಿತಿ ಹಂಚಿಕೆ ಮಾಡಬಹುದಾಗಿದೆ.

English summary
Unique Identification Authority of India has launched mAadhaar app for mobile users that will allow you to carry your Aadhaar card on your smartphone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X