ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಸುರಕ್ಷತೆಗೆ ಎರಡು ಕ್ರಮ ಘೋಷಿಸಿದ ಯುಐಎಡಿಐ

|
Google Oneindia Kannada News

ನವದೆಹಲಿ, ಜನವರಿ 10 : ಆಧಾರ್ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ವರದಿ ಹಿನ್ನಲೆಯಲ್ಲಿ ಯುಐಎಡಿಐ ಎರಡು ಹೊಸ ಸುರಕ್ಷತಾ ಕ್ರಮ ಕೈಗೊಂಡಿದೆ. ಈ ಮೂಲಕ ಖಾಸಗಿತನದ ಹಕ್ಕು ಕಾಪಾಡಲು ಮುಂದಾಗಿದೆ.

ಬುಧವಾರ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಎಡಿಐ) ವಿರ್ಚುವಲ್ ಐಡಿ ಮತ್ತು ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಎರಡು ಸುರಕ್ಷತಾ ಕ್ರಮಗಳನ್ನು ಪ್ರಕಟಿಸಿದೆ.

ದಾಖಲೆ ಸೋರಿಕೆಗೆ ಆಧಾರ್ ಪ್ರಾಧಿಕಾರದವರನ್ನು ಬಂಧಿಸಿ: ಎಡ್ವರ್ಡ್ ಸ್ನೂಡೆನ್ದಾಖಲೆ ಸೋರಿಕೆಗೆ ಆಧಾರ್ ಪ್ರಾಧಿಕಾರದವರನ್ನು ಬಂಧಿಸಿ: ಎಡ್ವರ್ಡ್ ಸ್ನೂಡೆನ್

Virtual ID ಪಡೆಯುವುದರಿಂದ ನಿಮ್ಮ ಆಧಾರ್ ಸಂಖ್ಯೆಯನ್ನು ನೀಡುವುದಕ್ಕೆ ಕಡಿವಾಣ ಬೀಳಲಿದೆ. 16 ಸಂಖ್ಯೆಗಳ Virtual Idಯನ್ನು ಜನರು ಬಳಕೆ ಮಾಡಬಹುದಾಗಿದೆ.

ಸಂಕ್ರಾಂತಿ ವಿಶೇಷ ಪುಟ

UIDAI introduces two-layer security system to improve Aadhaar privacy

ಮೊಬೈಲ್ ಸಂಖ್ಯೆ ಪಡೆಯುವಾಗಿ Virtual Idಯನ್ನು ನೀಡಬಹುದಾಗಿದೆ. ಹೆಸರು, ವಿಳಾಸ, ಭಾವಚಿತ್ರಗಳ ಮಾಹಿತಿ ಪಡೆಯಲು ಇದು ಸಾಕಾಗುತ್ತದೆ. ಆದ್ದರಿಂದ, ಆಧಾರ್ ಸಂಖ್ಯೆ ನೀಡುವ ಅಗತ್ಯವಿರುವುದಿಲ್ಲ.

ಎಲವೋ ಕಳ್ಳ, ಕದಿಯುವ ಮುನ್ನ ಆಧಾರ್ ತೋರ್ಸಯ್ಯ!ಎಲವೋ ಕಳ್ಳ, ಕದಿಯುವ ಮುನ್ನ ಆಧಾರ್ ತೋರ್ಸಯ್ಯ!

ಗ್ರಾಹಕರು ಎಷ್ಟು Virtual Idಗಳನ್ನು ಬೇಕಾದರೂ ಪಡೆಯಬಹುದು. ಹೊಸ ಐಡಿ ಪಡೆದಾಗ ಹಿಂದಿನದು ರದ್ದಾಗಲಿದೆ. ಮಾರ್ಚ್ 1, 2018ರಿಂದು Virtual ID ನೀಡುವ ಪ್ರಕ್ರಿಯೆ ಆರಂಭವಾಗಲಿದೆ.

ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ) ಪ್ರಕ್ರಿಯೆನ್ನು ಗ್ರಾಹಕ ಸ್ನೇಹಿಯಾಗಿ ಮಾಡಲಾಗುತ್ತದೆ. ಇದರಿಂದಾಗಿ ಖಾಸಗಿ ಏಜನ್ಸಿಗಳು ಗ್ರಾಹಕರ ಮಾಹಿತಿಯನ್ನು ಸಂಗ್ರಹಿಸಿ ಇಡದಂತೆ ಯುಐಎಡಿಐ ತಡೆಯಲಿದೆ.

English summary
Unique Identification Authority of India (UIDAI) released a 2-layer safety net creating a Virtual ID and limiting Know Your Customer (KYC) for the 12-digit biometric code.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X