ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಸಿಮ್ ಬೇಕಾದ್ರೆ, ಆಧಾರ್ ಜತೆಗೆ ಮುಖ ತೋರಿಸ್ಬೇಕಾಗುತ್ತೆ!

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 24: ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ಆಧಾರ್ ಗೆ ಹೆಚ್ಚಿನ ಭದ್ರತೆ ಹೆಚ್ಚಿಸುವ ದೃಷ್ಟಿಯಿಂದ ಹೊಸ ಕ್ರಮಗಳನ್ನು ಕೈಗೊಂಡಿದೆ. ಟೆಲಿಕಾಂ ಸಂಸ್ಥೆಗಳು ಎರಡು ಸ್ತರದ ವೇರಿಫಿಕೇಷನ್ ಅಳವಡಿಸಲು ನಿರ್ದೇಶಿಸಲಾಗಿದೆ. ಆಧಾರ್ ಜತೆಗೆ ಮುಖ ದೃಢೀಕರಣ ಅಗತ್ಯ ಎಂದು ಯುಐಡಿಎಐ ತಿಳಿಸಿದೆ.

ಹೊಸ ಸಿಮ್ ಅಲ್ಲದೆ, ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ಸೌಲಭ್ಯಗಳ ಮುಂದುವರಿಕೆಗೆ ಆಧಾರ್ ಕಾರ್ಡ್, ಲೈವ್ ಫೋಟೋ ಜತೆಗೆ ಮುಖ ದೃಢಿಕರಣ(facil recognition) ಕಡ್ಡಾಯವಾಗಲಿದೆ.

ಆಧಾರ್ ಹಾಗೂ ಸಿಮ್ ಜೋಡಣೆಯಾಗದಿದ್ದರೆ, ನಂಬರ್ ಏನಾಗಲಿದೆ? ಆಧಾರ್ ಹಾಗೂ ಸಿಮ್ ಜೋಡಣೆಯಾಗದಿದ್ದರೆ, ನಂಬರ್ ಏನಾಗಲಿದೆ?

ವ್ಯಕ್ತಿಯ ದೃಢೀಕರಣಕ್ಕಾಗಿ ಇರುವ ಬೆರಳಚ್ಚು,ಒಟಿಪಿ, ಕಣ್ಣಿನ ಗುರುತಿನ(iris) ಜೊತೆ ಮುಖ ದೃಢೀಕರಣ ಹೆಚ್ಚುವರಿ ಫೀಚರ್ ಆಗಿ ಸೇರಲಿದೆ.

UIDAI changes Aadhaar authentication rules for new mobile SIM. Facial recognition must

ವೃದ್ಧರ ಹಾಗೂ ಹಸ್ತರೇಖೆ ಅಳಸಿದವರ ಬೆರಳಚ್ಚು ಸಮಸ್ಯೆಗೆ ಇದು ಪರಿಹಾರವಾಗಲಿದೆ. ಸೆಪ್ಟೆಂಬರ್ 15ರಿಂದ ಟೆಲಿಕಾಂ ಕಂಪನಿಗಲು ಹೊಸ ನಿಯಮಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ.

ಹೊಸ ಸಿಮ್ ನೀಡುವ ವೇಳೆ ಬೆರಳಚ್ಚಿನ ಜೊತೆ ಮುಖದ ದೃಢೀಕರಣ ಪಡೆಯಬೇಕಾಗುತ್ತದೆ. ಇದನ್ನು ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುವುದು ಎಂದು ಯುಐಡಿಎಐ ಹೇಳಿದೆ.

ಆನ್‌ಲೈನ್‌ ಮೂಲಕ ಮೊಬೈಲ್‌ SIM- ಆಧಾರ್‌ ಜೋಡಿಸಿಆನ್‌ಲೈನ್‌ ಮೂಲಕ ಮೊಬೈಲ್‌ SIM- ಆಧಾರ್‌ ಜೋಡಿಸಿ

ಆದರೆ, ವರ್ಚ್ಯುಯಲ್ ಆಧಾರ್ ಕಾರ್ಡ್ ಬಳಸಿದರೆ ಬೆರಳಚ್ಚು ಅಥವಾ ಕಣ್ಣಿನ ಗುರುತು ನೀಡಿದರೆ ಸಾಕು. ಇಕೈವೆಸಿ ದೃಢಿಕರಣವಾದ ಬಳಿಕ ಕೂಡಾ ಲೈವ್ ಫೋಟೋವನ್ನು ಸಿಮ್ ಆಕ್ಟಿವೇಟ್ ಮಾಡಲು, ದೃಢೀಕರಣಕ್ಕಾಗಿ ಬಳಸಲಾಗುತ್ತದೆ.

English summary
To enhance security against misuse of Aadhaar authentication, the Unique Identification Authority of India (UIDAI) has instructed all telecom operators to ensure that they should start implementing a two-factor verification, which includes facial recognition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X