ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದವಿ, ಸ್ನಾತಕೋತ್ತರ ತರಗತಿ ಪ್ರಾರಂಭಕ್ಕೆ ಹೊಸ ದಿನಾಂಕ: ವೇಳಾಪಟ್ಟಿ ಬಿಡುಗಡೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) 2020-21ನೇ ಸಾಲಿನ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಕ್ಯಾಲೆಂಡರ್ ಅನ್ನು ಮಂಗಳವಾರ ಬಿಡುಗಡೆ ಮಾಡಿದೆ. ಯುಜಿಸಿ ಅವಧಿ ಕ್ಯಾಲೆಂಡರ್ಅನ್ನು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚಿನ ಯುಜಿಸಿ ಕ್ಯಾಲೆಂಡರ್ ಪ್ರಕಾರ ಹೊಸ ವಿದ್ಯಾರ್ಥಿಗಳಿಗೆ (ಮೊದಲ ವರ್ಷ) ನವೆಂಬರ್‌ನಿಂದ ಶೈಕ್ಷಣಿಕ ಅವಧಿ ಆರಂಭವಾಗಲಿದೆ. ಹಾಗೆಯೇ ಮೊದಲ ವರ್ಷದಲ್ಲಿನ ವಿಳಂಬವು ಮುಂದಿನ ವರ್ಷದ ಶೈಕ್ಷಣಿಕ ವರ್ಷದ ಅವಧಿ ಮೇಲೆ ಕೂಡ ಪರಿಣಾಮ ಬೀರಲಿದೆ.

ಖಾಸಗಿ ಶಾಲೆಗಳ ನೋಂದಣಿ ನವೀಕರಣ; ಸರ್ಕಾರದ ಮಹತ್ವದ ತೀರ್ಮಾನಖಾಸಗಿ ಶಾಲೆಗಳ ನೋಂದಣಿ ನವೀಕರಣ; ಸರ್ಕಾರದ ಮಹತ್ವದ ತೀರ್ಮಾನ

'ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಮಿತಿ ನೀಡಿರುವ ವರದಿಯನ್ನು ಆಯೋಗ ಒಪ್ಪಿಕೊಂಡಿದೆ ಮತ್ತು ವಿಶ್ವವಿದ್ಯಾಲಯಗಳ 2020-21ನೇ ಸಾಲಿನ ಮೊದಲ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಅವಧಿ ಕ್ಯಾಲೆಂಡರ್‌ನ ಮಾರ್ಗಸೂಚಿಗಳಿಗೆ ಅಂಗೀಕಾರ ನೀಡಲಾಗಿದೆ' ಎಂದು ಪೋಖ್ರಿಯಾಲ್ ತಿಳಿಸಿದ್ದಾರೆ. ಮುಂದೆ ಓದಿ.

ಶೈಕ್ಷಣಿಕ ಅವಧಿಯ ವಿವರ

ಶೈಕ್ಷಣಿಕ ಅವಧಿಯ ವಿವರ

ಪ್ರವೇಶ ಪ್ರಕ್ರಿಯೆ ಮುಕ್ತಾಯ: ಅಕ್ಟೋಬರ್ 31

ಮೊದಲ ಬ್ಯಾಚ್ (ಸೆಮೆಸ್ಟರ್/ವರ್ಷ) ವಿದ್ಯಾರ್ಥಿಗಳಿಗೆ ತರಗತಿ ಪ್ರಾರಂಭ: ನವೆಂಬರ್ 1

ಸಿದ್ಧತೆ ವಿರಾಮ: ಮಾರ್ಚ್ 1 ರಿಂದ ಮಾರ್ಚ್ 7

ಪರೀಕ್ಷೆಗಳನ್ನು ನಡೆಸುವುದು: ಮಾರ್ಚ್ 8ರಿಂದ ಮಾರ್ಚ್ 26

ಸಮ ಸಂಖ್ಯೆಯ ಸೆಮೆಸ್ಟರ್‌ಗಳ ತರಗತಿ: ಏಪ್ರಿಲ್ 5

ಸಿದ್ಧತೆ ವಿರಾಮ: ಆಗಸ್ಟ್ 1 ರಿಂದ ಆಗಸ್ಟ್ 8

ಪರೀಕ್ಷೆ ನಡೆಸುವುದು: ಆಗಸ್ಟ್ 9 ರಿಂದ ಆಗಸ್ಟ್ 21

ಸೆಮೆಸ್ಟರ್ ವಿರಾಮ: ಆಗಸ್ಟ್ 22ರಿಂದ ಆಗಸ್ಟ್ 29

ಈ ಬ್ಯಾಚ್‌ಗೆ ಮುಂದಿನ ಶೈಕ್ಷಣಿಕ ಅವಧಿ ಪ್ರಾರಂಭ: ಆಗಸ್ಟ್ 30, 2021.

ವಿದ್ಯಾರ್ಥಿಗಳ ಶುಲ್ಕ ವಾಪಸ್

ವಿದ್ಯಾರ್ಥಿಗಳ ಶುಲ್ಕ ವಾಪಸ್

ಪ್ರವೇಶಾತಿ ರದ್ದತಿಯ ಶುಲ್ಕವನ್ನು ನವೆಂಬರ್‌ವರೆಗೂ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಹಿಂದಿರುಗಿಸಲಾಗುವುದು ಎಂದು ಸಚಿವ ಪೋಖ್ರಿಯಾಲ್ ತಿಳಿಸಿದ್ದಾರೆ. 'ಲಾಕ್‌ಡೌನ್ ಹಾಗೂ ಸಂಬಂಧಿಸಿದ ಅಂಶಗಳಿಂದಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಪೋಷಕರ ಅನುಕೂಲಕ್ಕಾಗಿ ಎಲ್ಲ ರದ್ದುಗೊಂಡ ಪ್ರವೇಶ/ವಿದ್ಯಾರ್ಥಿಗಳ ವಲಸೆಯ ಶುಲ್ಕಗಳನ್ನು ನವೆಂಬರ್ 30ರವರೆಗೂ ಮರಳಿಸಲಾಗುವುದು. ಈ ಬಾರಿ ವಿಶೇಷ ಅವಕಾಶ ಕಲ್ಪಿಸಲಾಗಿದೆ' ಎಂದು ಹೇಳಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಶುರುವಾಗಬೇಕಿತ್ತು

ಸೆಪ್ಟೆಂಬರ್‌ನಲ್ಲಿ ಶುರುವಾಗಬೇಕಿತ್ತು

ಯುಜಿಸಿಯು ಏಪ್ರಿಲ್‌ನಲ್ಲಿ ಕಾಲೇಜುಗಳಿಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಮಾಡಿತ್ತು. ಸೆಪ್ಟೆಂಬರ್‌ನಿಂದ ಕಾಲೇಜುಗಳನ್ನು ತೆರೆಯಲು ಉದ್ದೇಶಿಸಲಾಗಿತ್ತು. ಆದರೆ ಪ್ರವೇಶ ಪರೀಕ್ಷೆಗಳಲ್ಲಿನ ವಿಳಂಬ ಮತ್ತು ಕೊರೊನಾ ವೈರಸ್ ಸೋಂಕಿನಲ್ಲಿ ಹೆಚ್ಚಳವಾಗಿರುವುದರಿಂದ ಎರಡು ತಿಂಗಳು ವಿಳಂಬವಾಗಿದೆ.

ಸಿಬಿಎಸ್‌ಇಗೆ ಸುಪ್ರೀಂಕೋರ್ಟ್ ಸೂಚನೆ

ಸಿಬಿಎಸ್‌ಇಗೆ ಸುಪ್ರೀಂಕೋರ್ಟ್ ಸೂಚನೆ

ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳು ಕಾಲೇಜು ಪ್ರವೇಶಕ್ಕೆ ಅನುಕೂಲವಾಗುವಂತೆ ಯುಜಿಸಿಯೊಂದಿಗೆ ಸಮನ್ವಯ ಮಾಡಿಕೊಳ್ಳುವಂತೆ ಮತ್ತು ಆದಷ್ಟು ಬೇಗನೆ ಪರೀಕ್ಷೆಗಳ ಫಲಿತಾಂಶ ಪ್ರಕಟಿಸುವಂತೆ ಸಿಬಿಎಸ್‌ಇಗೆ ಸುಪ್ರೀಂಕೋರ್ಟ್ ಸೂಚಿಸಿದೆ.

English summary
UGC Releases academic calendar 2020-21 for first year UG and PG students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X