ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಜಿಸಿ-ನೆಟ್ ಪರೀಕ್ಷೆ ದಿನಾಂಕ ಪ್ರಕಟ: ಅರ್ಜಿ ಸಲ್ಲಿಸುವುದು ಹೇಗೆ?

|
Google Oneindia Kannada News

ನವದೆಹಲಿ, ಫೆಬ್ರವರಿ 2: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಮುಂದಿನ ಮೇ ತಿಂಗಳಿನಲ್ಲಿ ಜೂನಿಯರ್ ರೀಸರ್ಚ್ ಫೆಲೋಶಿಪ್ (ಜೆಆರ್ಎಫ್) ಯುಜಿಸಿ-ಎನ್‌ಇಟಿ ಪರೀಕ್ಷೆಗಳನ್ನು ಮತ್ತು ಸಹಾಯಕ ಪ್ರೊಫೆಸರ್‌ಗಳ ಅರ್ಹತೆ ಪರೀಕ್ಷೆಗಳನ್ನು ನಡೆಸಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಡಾ. ರಮೇಶ್ ಪೋಖ್ರಿಯಾಲ್ ನಿಶಾಂಕ್ ಮಂಗಳವಾರ ತಿಳಿಸಿದ್ದಾರೆ.

'ಕಿರಿಯ ಸಂಶೋಧನಾ ಫೆಲೋಶಿಪ್ ಮತ್ತು ಸಹಾಯಕ ಪ್ರೊಫೆಸರ್ ಅರ್ಹತೆಯ ಯುಜಿಸಿ-ಎನ್‌ಇಟಿ ಪರೀಕ್ಷೆಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 2021ರ ಮೇ ತಿಂಗಳ 2, 3, 4, 5, 6, 7, 10, 11, 12, 14 ಮತ್ತು 17ರಂದು ನಡೆಸಲಿದೆ. ಹೆಚ್ಚಿನ ಮಾಹಿತಿಗಾಗಿ ಇದರಲ್ಲಿ ಅಡಕ ಮಾಡಿರುವ ಸುತ್ತೋಲೆಯನ್ನು ಓದಿ. ಎಲ್ಲ ಅಭ್ಯರ್ಥಿಗಳಿಗೂ ಶುಭವಾಗಲಿ' ಎಂದು ಶಿಕ್ಷಣ ಸಚಿವರು ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ದಿನಾಂಕ ಪ್ರಕಟಕರ್ನಾಟಕ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ದಿನಾಂಕ ಪ್ರಕಟ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಸುತ್ತೋಲೆಯ ಪ್ರಕಾರ ಪರೀಕ್ಷೆಗೆ ಹಾಜರಾಗಲು ಬಯಸಿರುವ ಅಭ್ಯರ್ಥಿಗಳು ಫೆಬ್ರವರಿ 2ರಿಂದ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿರುವ ಯುಜಿಸಿ-ಎನ್‌ಇಟಿ ಡಿಸೆಂಬರ್ 2020ರ ಮಾಹಿತಿ ಪತ್ರವನ್ನು ವಿವರಗಳಿಗಾಗಿ ವೀಕ್ಷಿಸಬಹುದು. ಮುಂದೆ ಓದಿ.

ಇಂದಿನಿಂದಲೇ ಅರ್ಜಿ ಲಭ್ಯ

ಇಂದಿನಿಂದಲೇ ಅರ್ಜಿ ಲಭ್ಯ

'2021ರ ಫೆಬ್ರವರಿ 2ರಿಂದ ಆನ್‌ಲೈನ್ ಅರ್ಜಿ ನಮೂನೆಗಳು ಲಭ್ಯವಾಗಲಿವೆ. ಪರೀಕ್ಷೆಗೆ ಕುಳಿತುಕೊಳ್ಳಲು ಬಯಸುವ ಅಭ್ಯರ್ಥಿಗಳು ಫೆಬ್ರವರಿ 2ರಿಂದ ಮಾರ್ಚ್ 2ರ ಅವಧಿಯ ಒಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿಗಳ ಶುಲ್ಕವನ್ನು ಮಾರ್ಚ್ 3ರವರೆಗೂ ಸಲ್ಲಿಸಬಹುದು' ಎಂದು ಸುತ್ತೋಲೆ ತಿಳಿಸಿದೆ.

ಸಿಬಿಟಿ ಮಾದರಿ ಪರೀಕ್ಷೆ

ಸಿಬಿಟಿ ಮಾದರಿ ಪರೀಕ್ಷೆ

ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮಾದರಿಯದ್ದಾಗಿರುತ್ತದೆ. ಪರೀಕ್ಷೆಗೆ ಹಾಜರಾಗಲು ಬಯಸುವ ಅಭ್ಯರ್ಥಿಗಳು ಮತ್ತು ಯುಜಿಸಿ ಎನ್‌ಇಟಿ 2021ರ ಬಗ್ಗೆ ಹೆಚ್ಚಿನ ವಿವರ ಬಯಸಿರುವವರು ಎನ್‌ಟಿಎ.ಎಸಿ.ಇನ್ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ!2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ!

ಮಾರ್ಚ್ 3ರವರೆಗೂ ಶುಲ್ಕ ಪಾವತಿ

ಮಾರ್ಚ್ 3ರವರೆಗೂ ಶುಲ್ಕ ಪಾವತಿ

ಯುಜಿಸಿ ಎನ್‌ಇಟಿ 2021 ಅರ್ಜಿ ಗವಾಕ್ಷಿಯು ಮಾರ್ಚ್ 2ರವರೆಗೂ ತೆರೆದಿರಲಿದೆ. ಈ ಅರ್ಜಿಯನ್ನು ಪಡೆದುಕೊಳ್ಳಲು ಆಕಾಂಕ್ಷಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಯುಜಿಸಿ ಎನ್‌ಇಟಿ ಪರೀಕ್ಷೆಗೆ ಮಾರ್ಚ್ 3ರವರೆಗೂ ಶುಲ್ಕ ಪಾವತಿಯ ಅವಕಾಶ ನೀಡಲಾಗಿದೆ.

ಎರಡು ಪಾಳಿಗಳಲ್ಲಿ ಪರೀಕ್ಷೆ

ಎರಡು ಪಾಳಿಗಳಲ್ಲಿ ಪರೀಕ್ಷೆ

ಯುಜಿಸಿ ಎನ್‌ಇಟಿ ಡಿಸೆಂಬರ್ 2020 ಸೈಕಲ್ ಪರೀಕ್ಷೆಯು ಎರಡು ಪಾಳಿಗಳಲ್ಲಿ ನಡೆಯಲಿದೆ. ಎರಡೂ ಪಾಳಿಗಳಲ್ಲಿ ಪರೀಕ್ಷೆಯ ಅವಧಿ ಮೂರು ಗಂಟೆಗಳಾಗಿರಲಿದೆ. ಬೆಳಗಿನ ಪಾಳಿ 9 ಗಂಟೆಯಿಂದ 12 ಗಂಟೆಯವರೆಗೆ ಇದ್ದರೆ, ಎರಡನೆಯ ಪಾಳಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಇರಲಿದೆ. ಪೇಪರ್ 1 ಒಟ್ಟು 100 ಅಂಕಗಳದ್ದಾಗಿರಲಿದೆ. ಪೇಪರ್ 2 ಒಟ್ಟು 200 ಅಂಕಗಳನ್ನು ಹೊಂದಿರಲಿದೆ.

English summary
UGC-NET 2021 exam dates announced. Examination to be conducted in May. Here is how to apply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X