ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಜಿಸಿ ಎನ್‌ಇಟಿ ಪರೀಕ್ಷೆ ಮುಂದೂಡಿಕೆ, ಹೊಸ ದಿನಾಂಕ ನಿಗದಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 15: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಹತ್ವದ ಸೂಚನೆ ಹೊರಡಿಸಿದ್ದು, ಯುಜಿಸಿ ನೆಟ್ ಪರೀಕ್ಷೆಗಳನ್ನು ಮುಂದೂಡಿದೆ. ಯುಜಿಸಿ ಎನ್‌ಇಟಿ ಪರೀಕ್ಷೆಯನ್ನು ಸೆ. 24ಕ್ಕೆ ಮುಂದೂಡಿರುವುದಾಗಿ ಸಂಸ್ಥೆ ಸೂಚನೆ ತಿಳಿಸಿದೆ.

ಸೆ. 16ಕ್ಕೆ ನಿಗದಿಯಾಗಿದ್ದ ಪರೀಕ್ಷೆಯು ಒಂದು ವಾರ ಮುಂದಕ್ಕೆ ಹೋಗಿದೆ. ಪ್ರವೇಶ ಪತ್ರದ ವಿವರಗಳನ್ನು ಯುಜಿಸಿ ಎನ್‌ಟಿಎದ ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ.

ಸೆ. 16, 17, 22 ಮತ್ತು 23ರ ದಿನಾಂಕಗಳಂದು ಎನ್‌ಟಿಎ ಬೇರೆ ಪರೀಕ್ಷೆಗಳನ್ನು ನಡೆಸುತ್ತಿದೆ. ಈ ಕಾರಣದಿಂದಾಗಿ ಯುಜಿಸಿ ನೆಟ್ ಪರೀಕ್ಷೆಯನ್ನು ಮುಂದೂಡಲಾಗಿದೆ. ಸೆ. 16ರಂದು ನಿಗದಿಯಾಗಿದ್ದ ಪರೀಕ್ಷೆಗೆ ತಯಾರಿ ನಡೆಸಿರುವ ಅಭ್ಯರ್ಥಿಗಳು ಈ ದಿನಾಂಕ ಬದಲಾವಣೆಯನ್ನು ಗಮನಿಸಬೇಕು ಎಂದು ಎನ್‌ಟಿಎ ತಿಳಿಸಿದೆ.

700 ಕಿ.ಮೀ ಪ್ರಯಾಣಿಸಿದರೂ ನೀಟ್ ಪರೀಕ್ಷೆಗೆ ಸಿಗದ ಅವಕಾಶ! 700 ಕಿ.ಮೀ ಪ್ರಯಾಣಿಸಿದರೂ ನೀಟ್ ಪರೀಕ್ಷೆಗೆ ಸಿಗದ ಅವಕಾಶ!

ಐಸಿಎಆರ್ ಪರೀಕ್ಷೆಗಳಾದ ಎಐಇಇಎ-ಪದವಿ/ಸ್ನಾತಕೋತ್ತರ ಪದವಿ ಮತ್ತು ಎಐಸಿಇ-ಜೆಆರ್ಎಫ್/ಎಸ್ಆರ್ಎಫ್ (ಪಿಎಚ್‌ಡಿ) 2020-21 ಪರೀಕ್ಷೆಗಳು ಈ ಮೇಲಿನ ದಿನಾಂಕಗಳಂದು ನಡೆಯುತ್ತಿವೆ. ಹೀಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಯುಜಿಸಿ ಎನ್‌ಇಟಿ ಪರೀಕ್ಷೆಯ ದಿನಾಂಕವನ್ನು ಮರು ನಿಗದಿ ಮಾಡಿದೆ ಎಂದು ಎನ್‌ಟಿಎ ಸೂಚನೆ ತಿಳಿಸಿದೆ. ಮುಂದೆ ಓದಿ.

ಅಭ್ಯರ್ಥಿಗಳ ಅನುಕೂಲಕ್ಕಾಗಿ ಬದಲಾವಣೆ

ಅಭ್ಯರ್ಥಿಗಳ ಅನುಕೂಲಕ್ಕಾಗಿ ಬದಲಾವಣೆ

ಈ ಎರಡೂ ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿಗಳಿದ್ದಾರೆ. ಒಂದೇ ಸಮಯಕ್ಕೆ ಪರೀಕ್ಷೆ ಆಯೋಜಿಸಿದರೆ ಅವರು ಮತ್ತೊಂದು ಪರೀಕ್ಷೆಯಿಂದ ವಂಚಿತರಾಗುವ ಸಾಧ್ಯತೆ ಇದೆ. ಹೀಗಾಗಿ ವಿದ್ಯಾರ್ಥಿಗಳ ಮನವಿ ಮೇರೆಗೆ ದಿನಾಂಕ ಬದಲಿಸಲಾಗಿದೆ. ಯುಜಿಸಿ-ನೆಟ್ ಪರೀಕ್ಷೆಯು ಸೆ. 24ರಿಂದ ನಡೆಯಲಿದೆ. ವಿಷಯವಾರು ಹಾಗೂ ಪಾಳಿವಾರು ವಿವರದ ನಿಖರ ವೇಳಾಪಟ್ಟಿಯನ್ನು ಶೀಘ್ರದಲ್ಲಿಯೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಅದು ಹೇಳಿದೆ.

ಶೀಘ್ರದಲ್ಲಿ ದಿನಾಂಕ ಪ್ರಕಟ

ಶೀಘ್ರದಲ್ಲಿ ದಿನಾಂಕ ಪ್ರಕಟ

ನೆಟ್ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು ತಮ್ಮ ರೋಲ್ ನಂಬರ್, ಪರೀಕ್ಷಾ ಕೇಂದ್ರ, ದಿನಾಂಕ ಹಾಗೂ ಅವಧಿಯ ವಿವರಗಳನ್ನು ಒಳಗೊಂಡ ಪ್ರವೇಶ ಪತ್ರವನ್ನು ugcnet.nta.nic.in ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವ ದಿನವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

NLAT 2020 ಮರು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆNLAT 2020 ಮರು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ

ಎರಡು ಪತ್ರಿಕೆ, ಎರಡು ಪಾಳಿ

ಎರಡು ಪತ್ರಿಕೆ, ಎರಡು ಪಾಳಿ

ಪೇಪರ್-1 ಮತ್ತು ಪೇಪರ್-2 ಎಂದು ಎರಡು ಪತ್ರಿಕೆಗಳಿಗೆ ಪರೀಕ್ಷೆ ನಡೆಯಲಿದೆ. ಪೇಪರ್-1 ಒಟ್ಟು 100 ಅಂಕದ ಪ್ರಶ್ನೆಗಳನ್ನು ಒಳಗೊಂಡಿರಲಿದೆ. ಪೇಪರ್-2ನಲ್ಲಿ 200 ಅಂಕಗಳಿಗೆ ಪ್ರಶ್ನೆಗಳಿರಲಿವೆ. ಪರೀಕ್ಷೆಯು ಎರಡು ಪಾಳಿಯಲ್ಲಿ ನಡೆಯಲಿದೆ. ಮೊದಲ ಪಾಳಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಹಾಗೂ ಎರಡನೆಯ ಪಾಳಿ ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಇರಲಿದೆ.

ಗುರುತಿನ ಚೀಟಿ ತರಬೇಕು

ಗುರುತಿನ ಚೀಟಿ ತರಬೇಕು

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಮ್ಮ ಪ್ರವೇಶ ಪತ್ರದ ಜತೆಗೆ ಆಧಾರ್ ಕಾರ್ಡ್, ಪಾಸ್‌ಪೋರ್ಟ್‌ನಂತಹ ಫೋಟೊ ಸಹಿತದ ಗುರುತಿನ ಪುರಾವೆಯನ್ನು ತರಬೇಕು. ಜತೆಗೆ ಹ್ಯಾಂಡ್ ಸ್ಯಾನಿಟೈಸರ್ ಬಾಟಲಿಗಳನ್ನು ಅವರೇ ತರಬೇಕು. ಪರೀಕ್ಷೆಯ ದಿನದಂದು ಮಾಸ್ಕ್ ಧರಿಸುವುದು ಕಡ್ಡಾಯ.

English summary
NTA issues a notice regarding postpone of UGC NET 2020 to Sep 24, which was scheduled from Sep 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X