ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವವಿದ್ಯಾಲಯಗಳ ಕ್ಯಾಂಪಸ್ ನಲ್ಲಿ ಜಂಕ್ ಫುಡ್ ನಿಷೇಧ: ಯುಜಿಸಿ

|
Google Oneindia Kannada News

ನವದೆಹಲಿ, ಆಗಸ್ಟ್ 24: ವಿಶ್ವವಿದ್ಯಾಲಯಗಳ ಕ್ಯಾಂಪಸ್ ಗಳಲ್ಲಿ ಜಂಕ್ ಫುಡ್ ಗಳನ್ನು ನಿಷೇಧಿಸುವಂತೆ ಯುಜಿಸಿ(University Grants Commission)ಯು ಎಲ್ಲಾ ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ನೋಟೀಸ್ ನೀಡಿದೆ.

'ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಮತ್ತು ಗುಣಮಟ್ಟದ ಆರೋಗ್ಯ ಸಂಸ್ಕೃತಿ ಬೆಳೆಸಲು, ಬೊಜ್ಜು ಕರಗಿಸಲು ನವೆಂಬರ್ 2016 ರಲ್ಲೇ ಎಲ್ಲಾ ಕಾಲೇಜುಗಳಲ್ಲಿ ಜಂಕ್ ಫುಡ್ ನಿಷೇದಿಸಲು ಸಲಹೆ ನೀಡಲಾಗಿತ್ತು. ಅದನ್ನು ಮತ್ತೊಮ್ಮೆ ನೆನಪಿಸುವ ಕಾರ್ಯ ಇದೀಗ ನಡೆಯುತ್ತಿದೆ.

ಯುಜಿಸಿ ಮಾನ್ಯತೆ ಪಡೆದ ಕೆಎಸ್‌ಒಯುನ 17 ಕೋರ್ಸ್‌ಗಳು ಯಾವುವು?ಯುಜಿಸಿ ಮಾನ್ಯತೆ ಪಡೆದ ಕೆಎಸ್‌ಒಯುನ 17 ಕೋರ್ಸ್‌ಗಳು ಯಾವುವು?

ಈ ಕುರಿತು ಪ್ರತಿಕ್ರಿಯೆ ನೀಡಿದ ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್, 'ಈ ನಿರ್ದೇಶನಗಳು ಕಡ್ಡಾಯವಲ್ಲವಾದರೂ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಸ್ವಾಗತಿಸುತ್ತವೆ ಎಂದು ಭಾವಿಸಿದ್ದೇವೆ' ಎಂದಿದ್ದಾರೆ.

UGC directs all universities to ban junk food on campus

ಈ ತಲೆಮಅರಿನ ಯುಕರ ಆರೋಗ್ಯ ಚಿಕ್ಕ ವಯಸ್ಸಿನಲ್ಲಿಯೇ ಹದಗೆಡುತ್ತಿರುವುದು, ವಯಸ್ಸಲ್ಲದ ವಯಸ್ಸಿನಲ್ಲಿ ಮಾರಕ ರೋಗಗಳಿಗೆ ತುತ್ತಗುವುದು ಎಲ್ಲಕ್ಕೂ ಜೀವನ ಶೈಲಿ ಮತ್ತ ಆರೋಗ್ಯ ಕ್ರಮವೇ ಕಾರಣ ಎಂಬುದನ್ನು ಅರಿತ ಯುಜಿಸಿ ಈ ಸಲಹೆಯನ್ನು ನೀಡಿದ್ದು, ಇದನ್ನು ಪಾಲಿಸಬೇಕೋ ಬೇಡವೋ ಎಂಬುದು ವಿಶ್ವವಿದ್ಯಾಲಯಗಳಿಗೆ ಬಿಟ್ಟಿದ್ದು.

English summary
The University Grants Commission has issued a notice to vice-chancellors of all universities, directing them to ban junk food in college premises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X