ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ನವೀದ್ ಸಹಚರರು ನಿಮ್ಮ ಊರಿನಲ್ಲಿದ್ದಾರೆಯೇ?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಆಗಸ್ಟ್ 18 : ಉದಾಂಪುರ್‌ನಲ್ಲಿ ಬಿಎಸ್‌ಎಫ್ ಪಡೆಯ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಉಗ್ರ ಮೊಹಮ್ಮದ್ ನವೀದ್‌ಗೆ ಸಹಕಾರ ನೀಡಿದ ಇಬ್ಬರು ಶಂಕಿತರ ರೇಖಾಚಿತ್ರವನ್ನು ಎನ್‌ಐಎ ಬಿಡುಗಡೆ ಮಾಡಿದೆ. ಉಗ್ರರ ಸುಳಿವು ಕೊಟ್ಟವರಿಗೆ 5 ಲಕ್ಷ ರೂ. ಬಹುಮಾನವನ್ನು ಘೋಷಣೆ ಮಾಡಲಾಗಿದೆ.

ರಾಷ್ಟ್ರೀಯ ತನಿಖಾ ದಳ ಉದಾಂಪುರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ತನಿಖೆಯನ್ನು ನಡೆಸುತ್ತಿದೆ. ಮೊಹಮ್ಮದ್ ನವೀದ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ. ವಿಚಾರಣೆ ವೇಳೆಯೇ ನವೀದ್ ಜರ್ಗಮಂ, ಅಬು ಒಕಾಶಾ ಎಂಬುವವರು ತನಗೆ ಸಹಾಯ ಮಾಡಿದ್ದರು ಎಂದು ಹೇಳಿದ್ದಾನೆ. [ಉಗ್ರ ನವೀದ್ NIA ವಶಕ್ಕೆ]

terrorist

ನವೀದ್ ಹೇಳಿಕೆ ಆಧರಿಸಿ ಎನ್‌ಐಎ ಇಬ್ಬರು ಉಗ್ರರಿಗಾಗಿ ಹುಡುಕಾಟ ಆರಂಭಿಸಿದೆ. ನವೀದ್ ನೀಡಿದ ಮಾಹಿತಿ ಅನ್ವಯ ಉಗ್ರರ ರೇಖಾಚಿತ್ರಗಳನ್ನು ರಚಿಸಿ ಬಿಡುಗಡೆ ಮಾಡಲಾಗಿದ್ದು, ಇವರ ಸುಳಿವು ಕೊಟ್ಟವರಿಗೆ 5 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಲಾಗಿದೆ. [ನವೀದ್ ಲಷ್ಕರ್ ಸೇರಿದ್ದು ಹೇಗೆ?]

ಇಬ್ಬರು ಪಾಕಿಸ್ತಾನದವರು : ಜರ್ಗಮಂ, ಅಬು ಒಕಾಶಾ ಇಬ್ಬರು ಪಾಕಿಸ್ತಾನದ ಖೈಬರ್ ಪ್ರಾಂತ್ಯದ ಪಾಕ್ತುನ್ವಾಗೆ ಸೇರಿದವರಾಗಿದ್ದಾರೆ. ಜರ್ಗಮಂ ಅಲಿಯಾಸ್ ಮೊಹಮ್ಮದ ಬಾಯಿ ಸುಮಾರು 38 ರಿಂದ 40 ವರ್ಷದವನಾಗಿದ್ದಾನೆ. ಅಬು ಒಕಾಶಾ 17 ರಿಂದ 18 ವರ್ಷದವನಾಗಿದ್ದು ಪಾಕ್ತುನ್ವಾದ ನಿವಾಸಿಯಾಗಿದ್ದಾನೆ.

ಮೊಹಮ್ಮದ್ ನವೀದ್‌ನಂತೆ ಈ ಇಬ್ಬರು ಸಹ ಲಷ್ಕರ್‌ನಿಂದ ತರಬೇತಿ ಪಡೆದವರಾಗಿರಬಹುದು ಎಂದು ಎನ್‌ಐಎ ಶಂಕಿಸಿದ್ದು, ಇವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಣೆ ಮಾಡುತ್ತಿದೆ. ಇಂದು ಮೊಹಮ್ಮದ್ ನವೀದ್‌ನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಆಗಸ್ಟ್ 5ರಂದು ಜಮ್ಮು-ಕಾಶ್ಮೀರದ ಹೆದ್ದಾರಿಯಲ್ಲಿ ಬಿಎಸ್‌ಎಫ್ ಪಡೆಯ ಶಿಬಿರದ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರ ಪೈಕಿ ನವೀದ್‌ನನ್ನು ಜೀವಂತವಾಗಿ ಸೆರೆಹಿಡಿಯಲಾಗಿತ್ತು. ಇಬ್ಬರು ಉಗ್ರರು ಭದ್ರತಾಪಡೆಗಳ ಗುಂಡಿಗೆ ಬಲಿಯಾಗಿದ್ದರು.

English summary
The National Investigating Agency has launched a massive manhunt for two aides of Udhampur attacker Mohammad Naved. Two accomplices who had aided the attack and sketches of these persons have been released, also announced a reward of Rs 5 lakh each.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X