ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಧಾಂಪುರ ದಾಳಿ : ನವೀದ್‌ಗೆ ಸಹಕರಿಸಿದ್ದ ಖುರ್ಷಿದ್ ಬಂಧನ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಅಕ್ಟೋಬರ್ 14 : ಉಧಾಂಪುರದಲ್ಲಿ ನಡೆದ ಭಯೋತ್ಪಾದಕ ದಾಳಿಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಅಹಮದ್ ಭಟ್ ಅಲಿಯಾಸ್ ಖುರ್ಷಿದ್ ಎಂಬ ಆರೋಪಿಯನ್ನು ಬಂಧಿಸಿದೆ. ದಾಳಿ ಮಾಡಿದ ಉಗ್ರರು ಲಾರಿ ಮೂಲಕ ಉಧಾಂಪುರಕ್ಕೆ ಬಂದಿದ್ದರು. ಈ ಲಾರಿ ಖುರ್ಷಿದ್‌ಗೆ ಸೇರಿದ್ದಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ದಳ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯನ್ನು ಖುರ್ಷಿದ್‌ನನ್ನು ಸೆರೆಹಿಡಿಯಲಾಗಿದೆ. ರಾಷ್ಟ್ರೀಯ ತನಿಖಾ ದಳ ಖುರ್ಷಿದ್‌ ಬಗ್ಗೆ ಸುಳಿವು ಕೊಟ್ಟವರಿಗೆ 2 ಲಕ್ಷ ರೂ.ಗಳ ಬಹುಮಾನವನ್ನು ಘೋಷಣೆ ಮಾಡಿತ್ತು. [ಉಗ್ರನಿಗೆ ಸಹಾಯ ಮಾಡಿದ್ದು ಲಾರಿ ಚಾಲಕ]

mohammad naved

ಖುರ್ಷಿದ್‌ ಬಂಧನದಿಂದ ಉಧಾಂಪುರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಹಲವಾರು ಮಾಹಿತಿಗಳು ಲಭ್ಯವಾಗಲಿವೆ ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ. ಉಧಾಂಪುರದಲ್ಲಿ ದಾಳಿ ನಡೆಸಿದ ಉಗ್ರರು ಲಾರಿಯಲ್ಲಿ ಬಂದಿದ್ದರು. ಈ ಲಾರಿ ಖುರ್ಷಿದ್‌ಗೆ ಸೇರಿದ್ದಾಗಿದೆ. [ಉಗ್ರ ಮೊಹಮ್ಮದ್ ನವೀದ್ ಲಷ್ಕರ್ ಸೇರಿದ್ದು ಹೇಗೆ?]

ಉಧಾಂಪುರದ ದಾಳಿಯ ವೇಳೆ ಮೊಹಮದ್ ನವೀದ್ ಎಂಬ ಲಷ್ಕರ್ ಉಗ್ರನನ್ನು ಜೀವಂತವಾಗಿ ಸೆರೆಹಿಡಿಯಲಾಗಿತ್ತು. ಲಷ್ಕರ್ ಉಗ್ರರಿಗೆ ಕಾಶ್ಮೀರದಲ್ಲಿ ಪರಿಚಯವಿರುವ ವ್ಯಕ್ತಿಗಳ ಬಗ್ಗೆ ನವೀದ್ ಮತ್ತು ಖುರ್ಷಿದ್‌ನಿಂದ ರಾಷ್ಟ್ರೀಯ ತನಿಖಾದಳ ಮಾಹಿತಿ ಸಂಗ್ರಹಣೆ ಮಾಡಲಿದೆ.

ಉಧಾಂಪುರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇನ್ನೂ ಮೂವರು ಭಾಗಿಯಾಗಿದ್ದಾರೆ ಎಂದು ಎನ್‌ಐಎ ಮಾಹಿತಿ ಸಂಗ್ರಹಣೆ ಮಾಡಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದೆ. ಈ ಮೂವರ ಕುರಿತು ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿದೆ.

2015ರ ಆಗಸ್ಟ್ 5ರಂದು ಉಧಾಂಪುರದ ಜಮ್ಮು-ಕಾಶ್ಮೀರದ ಹೆದ್ದಾರಿಯಲ್ಲಿ ಬಿಎಸ್‌ಎಫ್ ಪಡೆಯ ಶಿಬಿರದ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರ ಪೈಕಿ ನವೀದ್‌ನನ್ನು ಜೀವಂತವಾಗಿ ಸೆರೆಹಿಡಿಯಲಾಗಿತ್ತು. ಇಬ್ಬರು ಉಗ್ರರು ಭದ್ರತಾಪಡೆಗಳ ಗುಂಡಿಗೆ ಬಲಿಯಾಗಿದ್ದರು.

English summary
Shabzar Ahmed Bhat alias Khursheed had played a key role in the Udhampur attack, NIA officials said. He was the owner of the truck which transported Mohammad Naved and Noman to the attack site at Udhampur, Jammu and Kashmir on August 5 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X