ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಪ್ರಯಾಣಿಕರಿಗೆ ನಿಷೇಧ ತೆಗೆದುಹಾಕಿದ ಯುಎಇ: ದುಬೈಗೆ ತೆರಳಲಿದ್ದಿರಿಯೇ? ಇಲ್ಲಿದೆ ಮಾರ್ಗಸೂಚಿ

|
Google Oneindia Kannada News

ನವದೆಹಲಿ, ಆ.11: ಯುನೈಟೆಡ್ ಅರಬ್ ಆಫ್ ಎಮಿರೇಟ್ಸ್ (ಯುಎಇ) ಭಾರತದಿಂದ ಆಗಮಿಸುವ ಪ್ರಯಾಣಿಕರ ಮೇಲಿನ ನಿಷೇಧವನ್ನು ತೆಗೆದುಹಾಕಿದೆ. ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಿಂದಾಗಿ ಯುನೈಟೆಡ್ ಅರಬ್ ಆಫ್ ಎಮಿರೇಟ್ಸ್ ಭಾರತದಿಂದ ಆಗಮಿಸುವ ಪ್ರಯಾಣಿಕರ ಮೇಲೆ ನಿಷೇಧ ಹೇರಿತ್ತು. ಈಗ ನಿಷೇಧವನ್ನು ತೆಗೆದಿರುವುದು ಉಭಯ ರಾಷ್ಟ್ರಗಳ ನಡುವೆ ಹೆಚ್ಚಿನ ವಿಮಾನ ಸೇವೆಗಳನ್ನು ಸುಗಮಗೊಳಿಸುತ್ತದೆ.

ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಕಾರಣದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಕ್ಕೆ ಮೊದಲ ವಿಮಾನ ಶುಕ್ರವಾರ ಬೆಳಿಗ್ಗೆ ಗೋವಾ ವಿಮಾನ ನಿಲ್ದಾಣದಿಂದ ಹೊರಟಿತು. ಬಜೆಟ್ ಕ್ಯಾರಿಯರ್ ಇಂಡಿಗೋ ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ (ಎನ್‌ಸಿಆರ್‌) ದುಬೈಗೆ ವಿಮಾನಗಳ ವೇಳಾಪಟ್ಟಿಯನ್ನು ಹಂಚಿಕೊಂಡಿದೆ. ಆದಾಗ್ಯೂ, ಎಲ್ಲಾ ಪ್ರಯಾಣಿಕರು ಭಾರತ ಮತ್ತು ದುಬೈ ನಡುವೆ ಹಾರಲು ಅನುಮತಿ ಇಲ್ಲ ಎಂಬುದನ್ನು ಪ್ರಯಾಣಿಕರು ಗಮನಿಸಬೇಕು.

ಕೊರೊನಾ ಭೀತಿ: ಎತಿಹಾಡ್ ವಿಮಾನ ಏರಿ ಯುಎಇಗೆ ಹಾರುವಂತಿಲ್ಲ ಭಾರತೀಯರು!ಕೊರೊನಾ ಭೀತಿ: ಎತಿಹಾಡ್ ವಿಮಾನ ಏರಿ ಯುಎಇಗೆ ಹಾರುವಂತಿಲ್ಲ ಭಾರತೀಯರು!

ಪ್ರಸ್ತುತ ಭಾರತದಿಂದ ಯುಎಇ ನಿವಾಸಿಗಳಿಗೆ ಮಾತ್ರ ದುಬೈಗೆ ಪ್ರಯಾಣಿಸಲು ಅನುಮತಿ ಇದೆ ಎಂದು ಏರ್‌ಲೈನ್ ತನ್ನ ಪ್ರಯಾಣಿಕರಿಗೆ ತಿಳಿಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಇಂಡಿಗೋ, "ಪ್ರಯಾಣವನ್ನು ಸುರಕ್ಷಿತವಾಗಿಸಲು ಸಹಾಯ ಮಾಡಲು ನಿಮ್ಮ #ಸೂಪರ್‌ಹಾಬಿಟ್ಸ್ ಅನ್ನು ಯಾವಾಗಲೂ ಅಭ್ಯಾಸ ಮಾಡಿ," ಎಂದು ಇಂಡಿಗೋ ಯುಎಇಗೆ ಹೋಗುವ ಮೂರು ವಿಮಾನಗಳನ್ನು ಘೋಷಿಸಿದೆ. ಈ ಮೂಲಕ ಮಾಸ್ಕ್‌, ಸಾಮಾಜಿಕ ಅಂತರ ಮೊದಲಾ ನಿಯಮಗಳು ಕಡ್ಡಾಯವಾಗಿದೆ ಎಂಬುವುದನ್ನು ಸೂಚಿಸಿದೆ.

UAE Lifts Ban on Travellers from India: Here are the Guidelines for Flying to Dubai in Kannada

ಈ ತಿಂಗಳು ದೆಹಲಿಯಿಂದ ದುಬೈಗೆ ಆಗಸ್ಟ್ 9 ಮತ್ತು ಆಗಸ್ಟ್ 10 ರಂದು ಎರಡು ಬಾರಿ, ದುಬೈನಿಂದ ಒಂದು ವಿಮಾನ ಆಗಸ್ಟ್ 10 ರಂದು ಹಾರಲು ನಿರ್ಧರಿಸಲಾಗಿತ್ತು. ನ್ಯಾಷನಲ್ ಎಮರ್ಜೆನ್ಸಿ ಅಂಡ್ ಕ್ರೈಸಿಸ್ ಮ್ಯಾನೇಜ್‌ಮೆಂಟ್ ಅಥಾರಿಟಿ (ಎನ್‌ಸಿಇಎಮ್‌ಎ) ಯುಎಇ ಹೊರಡಿಸಿದ ಇತ್ತೀಚಿನ ಪ್ರಯಾಣ ಮಾರ್ಗಸೂಚಿಗಳನ್ನು ಅಪ್‌ಡೇಟ್ ಮಾಡಿದೆ.

ದುಬೈಗೆ ತೆರಳಲು ಪಾಲಿಸಬೇಕಾದ ಮಾರ್ಗಸೂಚಿಗಳು

"ಯುಎಇಯಲ್ಲಿ ಪೂರ್ಣ ಕೋವಿಡ್‌ ವ್ಯಾಕ್ಸಿನೇಷನ್ ಡೋಸ್ ಪಡೆದ ಮಾನ್ಯ ರೆಸಿಡೆನ್ಸಿ ಪರ್ಮಿಟ್ ಹೊಂದಿರುವವರು ಮತ್ತು ಎರಡನೇ ಕೋವಿಡ್‌ ಲಸಿಕೆ ಡೋಸ್ ಪಡೆದ 14 ದಿನಗಳ ನಂತರ ಜನರು ಯುಎಇಗೆ ಪ್ರಯಾಣ ಮಾಡಬಹುದಾದವರ ವರ್ಗದಲ್ಲಿ ಸೇರಿದ್ದಾರೆ." ಎಂದು ಈ ಮಾರ್ಗಸೂಚಿ ತಿಳಿಸಿದೆ.

ಡೆಲ್ಟಾ ಆತಂಕ; ಮತ್ತೆ ಭಾರತದ ವಿಮಾನಗಳ ಮೇಲೆ ನಿರ್ಬಂಧ ವಿಸ್ತರಿಸಿದ ಯುಎಇಡೆಲ್ಟಾ ಆತಂಕ; ಮತ್ತೆ ಭಾರತದ ವಿಮಾನಗಳ ಮೇಲೆ ನಿರ್ಬಂಧ ವಿಸ್ತರಿಸಿದ ಯುಎಇ

ಎಲ್ಲಾ ಪ್ರಯಾಣಿಕರು, ಅಬುಧಾಬಿಯನ್ನು ತಲುಪಿದ ನಂತರ, ಕಡ್ಡಾಯವಾಗಿ 10 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕು. ಹೆಚ್ಚುವರಿಯಾಗಿ, ವಿಮಾನ ನಿಲ್ದಾಣದ ಅಧಿಕಾರಿಗಳು ನೀಡುವ ಕ್ವಾರಂಟೈನ್ ಅವಧಿಯಲ್ಲಿ ಪ್ರಯಾಣಿಕರು ವೈದ್ಯಕೀಯವಾಗಿ ಅನುಮೋದಿತ ಟ್ರ್ಯಾಕಿಂಗ್ ರಿಸ್ಟ್ ಬ್ಯಾಂಡ್ ಧರಿಸಬೇಕು.

ಪ್ರಸ್ತುತ, ಭಾರತವು ವಂದೇ ಭಾರತ್ ಮಿಷನ್ ಮತ್ತು ಏರ್ ಬಬಲ್ ಅಡಿಯಲ್ಲಿ ಅನೇಕ ದೇಶಗಳೊಂದಿಗೆ ಅಂತರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸುತ್ತಿದೆ. ಯುಎಇ ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ನೈಜೀರಿಯಾ ಮತ್ತು ಉಗಾಂಡಾ ಎಂಬ ಇನ್ನೂ ಐದು ದೇಶಗಳ ಪ್ರಯಾಣಿಕರ ಪ್ರಯಾಣ ನಿಷೇಧವನ್ನು ತೆಗೆದುಹಾಕಿದೆ. ಭಾರತದಲ್ಲಿ ವಾಣಿಜ್ಯ ಅಂತಾರಾಷ್ಟ್ರೀಯ ವಿಮಾನಗಳು ಸ್ಥಗಿತಗೊಳ್ಳಲಿವೆ.

ಜುಲೈ ಕೊನೆಯಲ್ಲಿ ಭಾರತದ ಮತ್ತು ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ನಡುವೆ ಎತಿಹಾಡ್ ಏರ್ ವೇಸ್ ವಿಮಾನಗಳ ಸಂಚಾರವನ್ನು ಮುಂದಿನ ಆದೇಶದವರೆಗೂ ನಿರ್ಬಂಧಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದರು. ಭಾರತದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಏರಿಕೆಯಾಗುತ್ತಿದ್ದ ಹಿನ್ನೆಲೆ ಯುನೈಟೆಡ್ ಅರಬ್ ಆಫ್ ಎಮಿರೇಟ್ಸ್ ಈ ಕ್ರಮ ಕೈಗೊಂಡಿತ್ತು.

ಈ ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ ಆಗಮಿಸುವ ಪ್ರಯಾಣಿಕರಿಗೆ ದೆಹಲಿಯು ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಹೊಸ ಪ್ರಯಾಣ ಮಾರ್ಗಸೂಚಿಗಳ ಪ್ರಕಾರ, ಮೇಲೆ ತಿಳಿಸಿದ ರಾಜ್ಯಗಳಿಂದ ದೆಹಲಿಗೆ ಹಾರುವವರು ಇನ್ನು ಮುಂದೆ ಋಣಾತ್ಮಕ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ನೀಡುವ ಅಗತ್ಯವಿಲ್ಲ.

Recommended Video

ಕ್ರಿಕೆಟ್ ಕಾಶಿ ಎಂದು ಕರೆಸಿಕೊಳ್ಳುವ Lord's ಸ್ಟೇಡಿಯಂ | The Home of Cricket | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
The United Arab of Emirates (UAE) has lifted the ban for transit travellers from India. Here are the Guidelines for Flying to Dubai in Kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X