ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೂಟ್ಯೂಬ್ ನಿಂದ ಕಳ್ಳತನ ಕಲಿತ 'ಬಾಡಿಗೆ' ಕಳ್ಳರು!

ಯೂ ಟ್ಯೂಬಿನಲ್ಲಿ ಕಳ್ಳತನ ಕಲಿತು, ಅದನ್ನು ಪ್ರಯೋಗಿಸುವುದಕ್ಕೆ ಹೊರಟ ಇಬ್ಬರು ವಿದ್ಯಾವಂತ ಕಳ್ಳರ ಕತೆಯಿದು!

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ತಮಿಳುನಾಡು, ಮಾರ್ಚ್ 23: ಯೂಟ್ಯೂಬಿನಲ್ಲಿ ಕಳ್ಳತನ ಕಲಿತು, ತಮಿಳುನಾಡಿನ ಹೊಸೂರಿನ ಸುರೇಶ್ ಮತ್ತು ಲಕ್ಷ್ಮಿ ಎಂಬುವವರ ಮನೆಗೆ ಕಳ್ಳತನಮಾಡುವುದಕ್ಕೆಂದು ಬಂದಿದ್ದ ಇಬ್ಬರು 'ವಿದ್ಯಾವಂತ ಕಳ್ಳರು' ಇದೀಗ ಪೊಲೀಸರ ಅತಿಥಿಯಾಗಿದ್ದಾರೆ!

ಸುವೇತ ಮತ್ತು ಯತೀಶ್ ಎಂಬ ಇವರಿಬ್ಬರಲ್ಲಿ ಒಬ್ಬರು ಇಂಜಿನಿಯರಿಂಗ್ ಪದವೀಧರರಾದರೆ, ಇನ್ನೊಬ್ಬರು ಸ್ನಾತಕೋತ್ತರ ಪದವೀಧರರು! ಬೆಂಗಳೂರಿನ ಕಾಲೇಜೊಂದರಲ್ಲಿ ಒಟ್ಟಿಗೇ ಓದಿದ್ದ ಇವರು ಆಗಿನಿಂದಲೇ ಖಾಸಾ ಸ್ನೇಹಿತರು.[ಅಂಗಡಿಗೆ ನುಗ್ಗಿ ವಿವಿಧ ಬ್ರ್ಯಾಂಡ್ ಮೊಬೈಲ್ ಕದ್ದ ಖತರ್ನಾಕ್ ಕಳ್ಳರು]

Two young educated arrests in theft case!

ಮಾರ್ಚ್ 7 ರಂದು ಮಧ್ಯಾಹ್ನದ ಸಮಯದಲ್ಲಿ ಟು ಲೆಟ್ ಎಂದು ಬೋರ್ಡ್ ಹಾಕಲಾಗಿದ್ದ ಲಕ್ಷ್ಮಿ ಮತ್ತು ಸುರೇಶ್ ಅವರ ಮನೆಗೆ ಇವರು ಮನೆ ಬಾಡಿಗೆ ಕೇಳಿಕೊಂಡು ಹೋಗಿದ್ದಾರೆ. ಮನೆಯಲ್ಲಿ ಲಕ್ಷ್ಮಿಯೊಬ್ಬರೇ ಇದ್ದಿದ್ದರಿಂದ ಅವರ ಯೋಜನೆ ಸುಲಭವಾಗಿ ಕೈಗೂಡಬಹುದು ಎಂದುಕೊಂಡಿದ್ದಾರೆ.[ಬುಧವಾರ ಗುಂಡಿಬೈಲಿನಲ್ಲಿ ಬೆಳ್ಳಂಬೆಳಗ್ಗೆ ಸರಣಿಗಳ್ಳತನ]

ತಾವಿಬ್ಬರೂ ಅಣ್ಣ-ತಂಗಿ ಎಂದು ಪರಿಚಯಿಸಿಕೊಂಡಿರುವ ಇವರು, ಲಕ್ಷ್ಮಿ ಅವರ ಬಳಿ ಕುಡಿಯುವುದಕ್ಕೆ ನೀರು ಕೇಳಿದ್ದಾರೆ.

ನೀರು ತರುವುದಕ್ಕೆಂದು ಹೋಗಿದ್ದ ಲಕ್ಷ್ಮಿ ಅವರ ಮೇಲೆ ಹಲ್ಲೆ ನಡೆಸಿ ಮನೆ ದರೋಡೆಗೆ ಯತ್ನಿಸಿದ್ದಾರೆ. ಆದರೆ ತಕ್ಷಣವೇ ಸಮಯಪ್ರಜ್ಞೆ ಮೆರೆದ ಲಕ್ಷ್ಮಿ ಅಕ್ಕ ಪಕ್ಕದ ಮನೆಯವರಿಗೆಲ್ಲ ಕೇಳುವಂತೆ ಜೋರಾಗಿ ಕೂಗಿದ್ದಾರೆ.ಇದರಿಂದ ಆತಂಕಗೊಂಡ ಕಳ್ಳರು ತಪ್ಪಿಸಿಕೊಂಡು ಓಡಿದ್ದಾರೆ.[ಕಟೀಲು ದೇಗುಲ ಮುಕ್ತೇಸರ ಮನೆ ಕಳವು: 12ನೇ ಆರೋಪಿ ಬಂಧನ]

ಘಟನೆ ನಡೆದು ಎರಡು ವಾರದ ನಂತರ ಇದೀಗ ಈ ಇಬ್ಬರೂ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಹೊಸೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನೀವೂ ಮನೆಯ ಮುಂದೆ 'ಟು ಲೆಟ್' ಅಂತ ಬೋರ್ಡ್ ಏನಾದ್ರೂ ಹಾಕಿದ್ರೆ ಯಾವ್ದಕ್ಕೂ ಹುಷಾರಾಗಿರಿ..!

English summary
Two young persons arrested in Hosur region, Tamil Nadu. They had learned to steel by you tube!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X