• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿರಿಯ ನಾಯಕರು ಸೈಡ್ಲೈನ್: ಅಡ್ವಾಣಿ, ಜೋಷಿಗೆ ಬಿಜೆಪಿ ಮಾಡಿದ್ದೇನು?

By ಬಾಲರಾಜ್ ತಂತ್ರಿ
|

ಎಸ್ ಎಂ ಕೃಷ್ಣ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ, ಬಿಜೆಪಿಯಲ್ಲಿ ಕೇಳಿ ಬರುತ್ತಿದ್ದ ಹಿರಿಯರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎನ್ನುವ ಕೂಗು ಈಗ ಕಾಂಗ್ರೆಸ್ ಪಕ್ಷದಲ್ಲೂ ಪ್ರತಿಧ್ವನಿಸಲಾರಂಭಿಸಿದೆ.

ತಮ್ಮದೇ ಪಕ್ಷದಲ್ಲಿ ನೂರಾರು ತೂತುಗಳಿರುವಾಗ, ಕಾಂಗ್ರೆಸ್ ಪಕ್ಷದ ತೂತನ್ನು ಕುಹುಕ ಮಾಡುವ ಬಿಜೆಪಿಗೆ, ತಮ್ಮ ಪಕ್ಷದ ಮುಖಂಡರು ಅಡ್ವಾಣಿ (ವ 89), ಜೋಷಿ (ವ 83) ಮುಂತಾದವರಿಗೆ ಮಾಡಿದ್ದೇನು ಎನ್ನುವುದನ್ನು ಒಮ್ಮೆ ಅವಲೋಕಿಸಿದರೆ ಒಳಿತು. (ಅತೃಪ್ತರನ್ನು ಬಡಿದೆಬ್ಬಿಸಿದ ಕೃಷ್ಣರ ಪಾಂಚಜನ್ಯ)

ಫ್ಲ್ಯಾಷ್ ಬ್ಯಾಕಿಗೆ ಹೋಗುವುದಾದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಮುನ್ನ ಮತ್ತು ನಂತರದ ದಿನಗಳಲ್ಲಿ, ಅಡ್ವಾಣಿ ಮತ್ತು ಮೋದಿ ನಡುವೆ ಯಾವ ರೀತಿಯ ಮನಸ್ತಾಪ ಉಂಟಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಪಾರ್ಲಿಮೆಂಟ್ ಚುನಾವಣೆಗಳಲ್ಲಿ ತಾನು ಪ್ರತಿನಿಧಿಸುತ್ತಿದ್ದ ವಾರಣಾಸಿ ಕ್ಷೇತ್ರವನ್ನು, ನರೇಂದ್ರ ಮೋದಿಗಾಗಿ ಮುರಳಿ ಮನೋಹರ್ ಜೋಷಿ ಬಿಟ್ಟು ಕೊಡಲೇ ಬೇಕಾಯಿತು. ಜೋಷಿಯವರ ವಿರೋಧದ ನಡುವೆಯೂ ವಾರಣಾಸಿಯಿಂದ ಕೊಕ್ ಕೊಟ್ಟು ಕಾನ್ಪುರ ಕ್ಷೇತ್ರವನ್ನು ಮುರಳಿ ಮನೋಹರ್ ಜೋಷಿಗೆ ನೀಡಲಾಯಿತು.

ಇದೇ ರೀತಿ ಪಕ್ಷದ ಇತರ ಹಿರಿಯ ಮುಖಂಡರಾದ ಜಸ್ವಂತ್ ಸಿಂಗ್ ( ವ 79), ಯಶವಂತ್ ಸಿನ್ಹಾ (ವ 84), ಅರುಣ್ ಶೌರಿ (ವ 75), ಗೋವಿಂದಾಚಾರ್ಯ (ವ 73) ಮುಂತಾದ ನಾಯಕರೂ, ದಿನದಿಂದ ದಿನಕ್ಕೆ ಮೂಲೆಗುಂಪಾಗುತ್ತಾ ಬಂದರು. ಯುವಕರಿಗೆ ಪ್ರಾತಿನಿಧ್ಯತೆ ನೀಡಬೇಕು ಎನ್ನುವುದು ಒಪ್ಪಿಕೊಳ್ಳುವ ಮಾತಾದರೂ, ಹಿರಿಯರನ್ನು ಕಡೆಗಣಿಸುವುದು ಯಾವ ನ್ಯಾಯ ಎನ್ನುವುದು ಅಲ್ಲಲ್ಲಿ ಕೇಳಿ ಬರುತ್ತಿರುವ ಮಾತು. ಮುಂದೆ ಓದಿ..

 ರಥಯಾತ್ರೆಯ ಮೂಲಕ ಪಕ್ಷ ಕಟ್ಟಿದ ಅಡ್ವಾಣಿ

ರಥಯಾತ್ರೆಯ ಮೂಲಕ ಪಕ್ಷ ಕಟ್ಟಿದ ಅಡ್ವಾಣಿ

ಲೋಕಸಭೆಯಲ್ಲಿ ಎರಡು ಸ್ಥಾನದಿಂದ ಇಂದು ಬಿಜೆಪಿ ಅಧಿಕಾರಕ್ಕೆ ಬರುವವರೆಗೆ ಅಡ್ವಾಣಿ, ವಾಜಪೇಯಿ ಮತ್ತು ಮುರಳಿ ಮನೋಹರ್ ಜೋಷಿಯವರ ಕೊಡುಗೆ ಕಮ್ಮಿಯೇನೂ ಇಲ್ಲ. ರಥಯಾತ್ರೆಯ ಮೂಲಕ ಪಕ್ಷವನ್ನು ರಾಷ್ಟ್ರ ಮಟ್ಟದಲ್ಲಿ ಬೆಳೆಸಿದ ಲಾಲ್ ಕೃಷ್ಣ ಅಡ್ವಾಣಿ, 2ರಿಂದ 85 ಸೀಟನ್ನು ಪಕ್ಷ ಗೆಲ್ಲುವಂತಾಗಲು ಪ್ರಮುಖ ಕಾರಣರಾದರು ಎನ್ನುವುದನ್ನು ಈಗಿನ ತಲೆಮಾರಿನವರು ಮರೆಯಬಾರದು.

 ಮಾರ್ಗದರ್ಶಕರ ಮಂಡಳಿ ಎನ್ನುವ ಕಾಟಾಚಾರದ ಮಂಡಳಿ

ಮಾರ್ಗದರ್ಶಕರ ಮಂಡಳಿ ಎನ್ನುವ ಕಾಟಾಚಾರದ ಮಂಡಳಿ

ಮೋದಿ ಪ್ರಧಾನಿಯಾದ ನಂತರ, ವಾಜಪೇಯಿ ಅನಾರೋಗ್ಯದಿಂದ ತಾವೇ ಮೂಲೆಗುಂಪಾದರೆ ಇತ್ತ ಅಡ್ವಾಣಿ, ಜೋಷಿ, ಗೋವಿಂದಾಚಾರ್ಯ ಮುಂತಾದ ಹಿರಿಯ ಮುಖಂಡರನ್ನು ದಿನದಿಂದ ದಿನಕ್ಕೆ ಮೂಲೆಗುಂಪು ಮಾಡಲಾಯಿತು.

ಹಿರಿಯರಿಗಾಗಿ ಮಾರ್ಗದರ್ಶಕರ ಮಂಡಳಿ ಎಂದು ಕಾಟಾಚಾರಕ್ಕೆ ಮಂಡಳಿ ಘೋಷಣೆಯಾದರೂ, ಅದರ ಮೊದಲ ಸಭೆ ಇನ್ನೂ ನಡೆದ ಬಗ್ಗೆ ವರದಿಯಾಗಿಲ್ಲ.

 ಪ್ರಣಾಳಿಕೆಯಲ್ಲಿ ಅಡ್ವಾಣಿ, ವಾಜಪೇಯಿ ಫೋಟೋ ಇಲ್ಲ

ಪ್ರಣಾಳಿಕೆಯಲ್ಲಿ ಅಡ್ವಾಣಿ, ವಾಜಪೇಯಿ ಫೋಟೋ ಇಲ್ಲ

ಅಡ್ವಾಣಿ ಮುಂತಾದ ಮುಖಂಡರು ಪಕ್ಷಕ್ಕೆ ಯಾವ ರೀತಿ ಬೇಡವಾಗಿದ್ದಾರೆಂದರೆ, ಮುಂಬರುವ ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆಯಲ್ಲಿ ಅಡ್ವಾಣಿ, ಜೋಷಿಯಾಗಲಿ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇಲ್ಲ. ಅಷ್ಟೇ ಯಾಕೆ, ವಾಜಪೇಯಿ, ಅಡ್ವಾಣಿಯವರ ಭಾವಚಿತ್ರವೂ ಪಕ್ಷದ ಪ್ರಣಾಳಿಕೆಯಲ್ಲೂ ಇಲ್ಲ. ಅಲ್ಲಿರುವುದು ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಭಾವಚಿತ್ರ

 ಎಸ್ ಎಂ ಕೃಷ್ಣ ಟೀಕೆ

ಎಸ್ ಎಂ ಕೃಷ್ಣ ಟೀಕೆ

ಹೀಗೆ ಹಿರಿಯರನ್ನು ಕಡೆಗಣಿಸುವ ರಾಜಕೀಯ ಕಲೆ ಈಗ ಕಾಂಗ್ರೆಸ್ ಪಕ್ಷಕ್ಕೂ ತಾಟಿದೆ. ಪಕ್ಢದ ವರ್ಚಸ್ವೀ ಮುಖಂಡ ಎಸ್ ಎಂ ಕೃಷ್ಣ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡುವ ಮುನ್ನ ಅವರು ಹೇಳಿದ್ದು, ಪಕ್ಷಕ್ಕೆ ಈಗ ನಿಷ್ಟಾವಂತರು ಬೇಕಾಗಿಲ್ಲ, ಬೇಕಾಗಿರುವುದು ಮ್ಯಾನೇಜರುಗಳ ರೀತಿಯಲ್ಲಿ ಕೆಲಸ ಮಾಡುವವರು ಎಂದು.

 ಪರೋಕ್ಷವಾಗಿ ರಾಹುಲ್ ಗಾಂಧಿಗೆ ಟಾಂಗ್

ಪರೋಕ್ಷವಾಗಿ ರಾಹುಲ್ ಗಾಂಧಿಗೆ ಟಾಂಗ್

46 ವರ್ಷದವರು 84 ವರ್ಷ ವಯಸ್ಸಾದವರ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಕೃಷ್ಣ, ಪರೋಕ್ಷವಾಗಿ ಟಾಂಗ್ ನೀಡಿದ್ದು ಯುವರಾಜ ರಾಹುಲ್ ಗಾಂಧಿಗೆ. ಕೃಷ್ಣ, ಇದೇ ರೀತಿ ಸಿದ್ದರಾಮಯ್ಯನವರ ವಿರುದ್ದವೂ ದಾಳಿ ಮಾಡಿದ್ದುಂಟು. ರಾಹುಲ್ ನಾಯಕತ್ವದಲ್ಲಿ ಪಕ್ಷ ಹಿನ್ನಡೆ ಅನುಭವಿಸುವ ದಿನ ಹತ್ತಿರದಲ್ಲೇ ಇದೆ ಎಂದು ಕೃಷ್ಣ, ಪರೋಕ್ಷವಾಗಿ ಭಾನುವಾರ (ಜ 29) ಹೇಳಿದ್ದಾಗಿದೆ.

 ಹಿರಿಯ ಮುಖಂಡರ ಪಟ್ಟಿ ಬೆಳೆಯುವ ಸಾಧ್ಯತೆ

ಹಿರಿಯ ಮುಖಂಡರ ಪಟ್ಟಿ ಬೆಳೆಯುವ ಸಾಧ್ಯತೆ

ಕೃಷ್ಣ ಅವರ ನಿರ್ಧಾರ, ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಹೊಸ ಸಂಚಲನ ಸೃಷ್ಟಿಸುವ ಸಾಧ್ಯತೆಯಿದೆ. ಸಿದ್ದರಾಮಯ್ಯ ವಿರುದ್ದ ಹರಿಹಾಯುವ ಪರಿಪಾಠ ದಿನಾಲೂ ರೂಢಿಸಿಕೊಂಡು ಬಂದಿರುವ ಜನಾರ್ಧನ ಪೂಜಾರಿ ಮತ್ತು ಜಾಫರ್ ಶರೀಫ್, ಎಂ.ವಿ. ರಾಜಶೇಖರನ್, ಮಲಕರೆಡ್ಡಿ, ಶ್ಯಾಮನೂರು ಶಿವಶಂಕರಪ್ಪ ಮುಂದಿನ ದಿನಗಳಲ್ಲಿ ಪಕ್ಷದ ನಾಯಕತ್ವದ ವಿರುದ್ದ ಸಿಡಿದೇಳುವ ಸಾಧ್ಯತೆ ಇಲ್ಲದಿಲ್ಲ.

English summary
Two national parties BJP and Congress side lining Senior leaders. LK Advani, Murli Manohar Joshi, Jaswanth Singh etc., sidelined in BJP and now SM Krishna in Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X