ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ರಾಪ್ತೆ ಮೇಲೆ ದೌರ್ಜನ್ಯ ಎಸಗಿದ್ದ ಕಿರಾತಕರಿಗೆ ಮರಣ ದಂಡನೆ: ಐತಿಹಾಸಿಕ ತೀರ್ಪು

By Manjunatha
|
Google Oneindia Kannada News

ಭೂಪಾಲ್, ಆಗಸ್ಟ್ 21: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಯತ್ನ ಎಸಗಿದ್ದ ಇಬ್ಬರು ಕಿರಾತಕರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಮಧ್ಯ ಪ್ರದೇಶದ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಅಪ್ರಾಪ್ತರ ಮೇಲಿನ ಅತ್ಯಾಚಾರ ತಡೆಯಲು ಕೇಂದ್ರ ಸರ್ಕಾರವು ಪೋಕ್ಸೋ ಕಾಯ್ದೆಗೆ ತಿದ್ದುಪಡಿ ತಂದು, ಅಪ್ರಾಪ್ತೆ ಮೇಲಿನ ಅತ್ಯಾಚಕ್ಕೆ ಗಲ್ಲು ಶಿಕ್ಷೆಯನ್ನು ಕೊಡುವಂತೆ ಶಿಫಾರಸ್ಸು ಮಾಡಿದ ಮೇಲೆ ಮೊದಲಿಗೆ ತಿದ್ದುಪಡಿಯಾದ ಕಾನೂನು ಬಳಕೆಯಾಗಿ ಆರೋಪಿಗಳು ಗಲ್ಲಿಗೆ ಗುರಿಯಾದ ಮೊದಲ ಪ್ರಕರಣ ಇದಾಗಿದೆ.

ಅತ್ಯಾಚಾರ ಸಂತ್ರಸ್ತರ ಕನ್ಯತ್ವ ಪರೀಕ್ಷೆ ಮಾಡ್ಬೇಡಿ: ಹೊಸ ಗೈಡ್ ಲೈನ್ಸ್ ಅತ್ಯಾಚಾರ ಸಂತ್ರಸ್ತರ ಕನ್ಯತ್ವ ಪರೀಕ್ಷೆ ಮಾಡ್ಬೇಡಿ: ಹೊಸ ಗೈಡ್ ಲೈನ್ಸ್

ಜೂನ್ 26ರಂದು ಮಧ್ಯಪ್ರದೇಶದ ಮಂದ್ಸಾರ್‌ನಲ್ಲಿ ಆಸಿಫ್ ಮತ್ತು ಇರ್ಪಾನ್ ಎಂಬ ಕಾಮಾಂಧರು 8 ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯ ಕತ್ತು ಸೀಳಿ ಕೊಲೆಗೆ ಯತ್ನಿಸಿದ್ದರು.

ಈ ಕಾಮುಕರ ವರ್ತನೆಯಿಂದ ಆ ಪುಟ್ಟ ಬಾಲಕಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ತೀವ್ರ ಆಘಾತಕ್ಕೆ ಒಳಗಾಗಿದ್ದಳು. ಆಕೆಯಿನ್ನೂ ಇಂಧೋರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಆದರೆ ಅಷ್ಟರ ಒಳಗೆ ತ್ವರಿತ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಇಬ್ಬರಿಗೂ ಮರಣ ದಂಡನೆ ಶಿಕ್ಷೆ ವಿಧಿಸಿದೆ.

500 ಪುಟಗಳ ದೋಷಾರೋಪ

500 ಪುಟಗಳ ದೋಷಾರೋಪ

ಅತ್ಯಾಚಾರ ಘಟನೆ ಕುರಿತು ಮಧ್ಯಪ್ರದೇಶದಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು. ಹಾಗಾಗಿ ಪ್ರಕರಣದ ತನಿಖೆಗೆ ಸರ್ಕಾರವು ವಿಶೇಷ ತಂಡ ರಚನೆ ಮಾಡಿತ್ತು, ವಿಶೇಷ ತಂಡವು ಆರೋಪಿಗಳ ಮೇಲೆ 500 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಿತ್ತು ಪರಿಣಾಮವಾಗಿ ಕೃತ್ಯ ನಡೆದ ಎರಡು ತಿಂಗಳು ಆಗುವ ಮುಂಚೆಯೇ ಆರೋಪಿಗಳಿಗೆ ಗಲ್ಲು ವಿಧಿಸಲಾಗಿದೆ.

ಅತ್ಯಾಚಾರ ಸಂತ್ರಸ್ಥೆಯ ಚಿತ್ರ ಬಳಸುವ ಮಾಧ್ಯಮಗಳಿಗೆ ಸುಪ್ರೀಂ ತಪರಾಕಿಅತ್ಯಾಚಾರ ಸಂತ್ರಸ್ಥೆಯ ಚಿತ್ರ ಬಳಸುವ ಮಾಧ್ಯಮಗಳಿಗೆ ಸುಪ್ರೀಂ ತಪರಾಕಿ

ಕಾನೂನಿಗೆ ತಿದ್ದುಪಡಿ ತಂದ ನಂತರ ಮೊದಲ ಗಲ್ಲು

ಕಾನೂನಿಗೆ ತಿದ್ದುಪಡಿ ತಂದ ನಂತರ ಮೊದಲ ಗಲ್ಲು

ಅಪ್ರಾಪ್ತರ ಮೇಲಿನ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಕಾನೂನಿಗೆ ತಿದ್ದುಪಡಿ (376 AB) ತಂದ ನಂತರ ಗಲ್ಲು ಶಿಕ್ಷೆ ವಿಧಿಸಲಾಗಿರುವ ಮೊದಲ ಪ್ರಕರಣ ಇದಾಗಿದೆ.

ಅತ್ಯಾಚಾರಿಗಳಿಂದ 14 ವರ್ಷದ ಬಾಲಕಿಯನ್ನು ರಕ್ಷಿಸಿದ ಸಾಕು ನಾಯಿಅತ್ಯಾಚಾರಿಗಳಿಂದ 14 ವರ್ಷದ ಬಾಲಕಿಯನ್ನು ರಕ್ಷಿಸಿದ ಸಾಕು ನಾಯಿ

ಎಲ್ಲ ಸಾಕ್ಷ್ಯಗಳ ಪರಿಶೀಲನೆ

ಎಲ್ಲ ಸಾಕ್ಷ್ಯಗಳ ಪರಿಶೀಲನೆ

ಜುಲೈ 30ರಂದು ಪ್ರಕರಣದ ವಿಚಾರಣೆ ಪ್ರಾರಂಭವಾಗಿತ್ತು, ಶಾಲಾ ಶಿಕ್ಷಕರು, ಬಾಲಕಿಯ ತಂದೆ, ಬಾಲಕಿಯ ಗೆಳೆಯರು, ಇಂಧೋರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿಯನ್ನೂ ಸಾಕ್ಷ್ಯವಾಗಿ ವಿಶೇಷ ವಾಹನದಲ್ಲಿ ಕರೆತರಲಾಗಿತ್ತು. ಜೊತೆಗೆ ಸಿಸಿಟಿವಿ ದೃಶ್ಯಗಳನ್ನು ಸಾಕ್ಷಗಳಾಗಿ ಒದಗಿಸಲಾಗಿತ್ತು.

ಬಾಲಕಿಯ ರಕ್ತ ಆರೋಪಿಗಳ ಬಟ್ಟೆ ಮೇಲೆ

ಬಾಲಕಿಯ ರಕ್ತ ಆರೋಪಿಗಳ ಬಟ್ಟೆ ಮೇಲೆ

ಜೊತೆಗೆ ಬಾಲಕಿಯ ರಕ್ತವು ಆರೋಪಿಗಳ ಬಟ್ಟೆಗಳಿಗೆ ಅಂಟಿಕೊಂಡಿತ್ತು ಇದೆಲ್ಲವನ್ನೂ ಪರಿಗಣಿಸಿ ಸತತವಾಗಿ ಆಗಸ್ಟ್ 8ರವರೆಗೆ ವಿಚಾರಣೆ ನಡೆಯಿತು. ಕೊನೆಯ ವಾದವನ್ನು ಆಗಸ್ಟ್ 14ರಂದು ಮಂಡಿಸಲಾಗಿತ್ತು. ಇಂದು (ಆಗಸ್ಟ್ 21)ರಂದು ತೀರ್ಪು ಪ್ರಕಟವಾಗಿದೆ.

English summary
Two men Irfan and Asif were sentenced to death on Monday by a special court for raping a seven-year-old girl in Madhya Pradesh's Mandsaur area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X