ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ISIS ಅಡಗುದಾಣಗಳ ಮೇಲೆ ಬಾಂಬ್: ಕೇರಳದ ಯುವಕರ ಸಾವು?

ಮೂಲಗಳ ಪ್ರಕಾರ, ಕೇರಳದಿಂದ ಇತ್ತೀಚೆಗೆ ಸುಮಾರು 21 ಯುವಕರು ನಾಪತ್ತೆಯಾಗಿದ್ದಾರೆ. ಈ ಎಲ್ಲಾ ಹುಡುಗರೂ ಐಎಸ್ ಐಎಸ್ ಉಗ್ರ ಸಂಘಟನೆಗೆ ಸೇರಿರುವ ಶಂಕೆಯಿದೆ.

|
Google Oneindia Kannada News

ಜಲಾಲಾಬಾದ್, ಏಪ್ರಿಲ್ 14: ಆಫ್ಘಾನಿಸ್ತಾನ- ಪಾಕಿಸ್ತಾನ ಗಡಿ ಪ್ರದೇಶಗಳಲ್ಲಿನ ಐಎಸ್ಐಎಸ್ ಉಗ್ರರ ಅಡಗುದಾಣಗಳ ಮೇಲೆ ಗುರುವಾರ (ಏಪ್ರಿಲ್ 13) ರಾತ್ರಿ ಅಮೆರಿಕ ನಡೆಸಿದ ಭೀಕರ ಬಾಂಬ್ ದಾಳಿಯಲ್ಲಿ ಕೇರಳ ಮೂಲದ ಯುವಕರ ತಂಡವೊಂದು ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.

ಮೂಲಗಳ ಪ್ರಕಾರ, ಕೇರಳದಿಂದ ಇತ್ತೀಚಿನ ವರ್ಷಗಳಲ್ಲಿ ಸುಮಾರು 21 ಯುವಕರು ನಾಪತ್ತೆಯಾಗಿದ್ದಾರೆ. ಈ ಎಲ್ಲಾ ಹುಡುಗರೂ ಐಎಸ್ ಐಎಸ್ ಉಗ್ರ ಸಂಘಟನೆಗೆ ಸೇರಿರುವ ಶಂಕೆಯಿತ್ತು. ಆನಂತರ ಈ ನಂಬಿಕೆ ನಿಜ ಎಂದು ಗುಪ್ತಚರ ಇಲಾಖೆ ಹೇಳಿತ್ತು.[ಬಾಂಬ್ ಗಳ ಮಹಾತಾಯಿ ಅಂದರೆ ಏನು? ವಿವರಗಳು]

Two Kerala Youths dies in America's attack on ISIS group

ಕೇರಳದ ಒಬ್ಬ ಮಹಿಳೆ ಸೇರಿ ಸುಮಾರು 21 ಯುವಕರು ಐಎಸ್ಐಎಸ್ ಉಗ್ರ ಸಂಘಟನೆಗೆ ಸೇರಿಕೊಂಡಿದ್ದರು. ಈಗ ಅಮೆರಿಕ ಬಾಂಬ್ ದಾಳಿ ನಡೆಸಿರುವ ನಗರ್ಹಾರ್ ಪ್ರದೇಶದಲ್ಲಿನ ಗುಹೆಗಳಲ್ಲೇ ಈ ಎಲ್ಲಾ ಕೇರಳಿಗರೂ ವಾಸ್ತವ್ಯ ಹೂಡಿದ್ದರು. ನೂರಾರು ಗುಹೆಗಳಿರುವ ಆ ಜಾಗದಲ್ಲಿನ ಒಂದು ಗುಹೆಯನ್ನು ಇವರಿಗೆ ಬಿಟ್ಟುಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ, ಇವರ ಸ್ಥಳವನ್ನು ಕೇರಳ ಹಳ್ಳಿಯೆಂದೇ ಐಎಸ್ಐಎಸ್ ಉಗ್ರರು ಗುರುತಿಸಿ ಆ ಹೆಸರಿನಿಂದಲೇ ಸಂಬೋಧಿಸುತ್ತಿದ್ದರು ಎಂದು ಹೇಳಲಾಗಿದೆ.

ಆದರೀಗ, ಅಮೆರಿಕವು ಈ ಪ್ರದೇಶಗಳಲ್ಲೇ ದಾಳಿ ನಡೆಸಿರುವುದರಿಂದ ಸಾಕಷ್ಟು ಉಗ್ರರು ಹತರಾಗಿರುವ ಸಂಭವವಿದ್ದು, ಇವರ ಜತೆ ಕೇರಳದ ಯುವಕರ ಗುಂಪೂ ಸಾವನ್ನಪ್ಪಿರಬಹುದು ಎಂದು ಅನುಮಾನಿಸಲಾಗಿದೆ. ಆದರೆ, ಈ ಬಗ್ಗೆ ಅಮೆರಿಕ ಆಗಲೀ, ಆಫ್ಘಾನಿಸ್ತಾನ ಸರ್ಕಾರವಾಗಲೀ ಅಥವಾ ಗುಪ್ತಚರ ಇಲಾಖೆಯಾಗಲೀ ಅಧಿಕೃತ ಮಾಹಿತಿ ನೀಡಿಲ್ಲ.

ಅತ್ತ, ಬಾಂಬ್ ದಾಳಿಯಲ್ಲಿ ಮೃತರಾಗಿರುವ ಐಎಸ್ಐಎಸ್ ಉಗ್ರರ ಬಗ್ಗೆ ಮಾಹಿತಿ ನೀಡಿರುವ ಆಫ್ಘಾನಿಸ್ತಾನ ಸರ್ಕಾರ, ದಾಳಿಯಲ್ಲಿ ಸುಮಾರು 36 ಉಗ್ರರು ಮೃತಪಟ್ಟಿದ್ದಾರೆಂದು ತಿಳಿಸಿದೆ. ಉಗ್ರರ ದಾಳಿಗೆ ಕೆಲವೇ ಗಂಟೆಗಳ ಮುನ್ನ ಅಮೆರಿಕ ಸರ್ಕಾರ ತನಗೆ ಮಾಹಿತಿ ನೀಡಿದ್ದರಿಂದಾಗಿ, ಸುತ್ತಲಿನ ಪ್ರಾಂತ್ಯಗಳಲ್ಲಿ ನಾಗರಿಕರ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಹಾಗಾಗಿ, ನಾಗರಿಕರಿಗೆ ಬಾಂಬ್ ದಾಳಿಯ ಬಿಸಿ ತಟ್ಟಿಲ್ಲ. ಆದರೆ, ಐಎಸ್ ಉಗ್ರ ಸಂಘಟನೆಗೆ ಸೇರಿದ ಸುಮಾರು 36 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.[ಅಫ್ಘಾನಿಸ್ತಾನ: ಉಗ್ರರ ಮೇಲೆ ಭಯಂಕರ ಬಾಂಬ್ ಹಾಕಿದ ಅಮೆರಿಕ]

ಅಮೆರಿಕದ 'ಜಿಬಿಯು-43/ಬಿ' ಬಾಂಬ್ ನ ಶಕ್ತಿ ಎಷ್ಟಿತ್ತಂದರೆ, ಗುಹೆಗಳು ಮಾತ್ರವಲ್ಲ, ಒಂದು ಗುಹೆಯಿಂದ ಮತ್ತೊಂದು ಗುಹೆಗೆ ಸಂಪರ್ಕ ಕಲ್ಪಿಸುವ, ಭೂಮಿಯಿಂದ ನೂರಾರು ಅಡಿ ಒಳಗಿದ್ದ ಗುಪ್ತ ಸುರಂಗ ಮಾರ್ಗಗಳು, ಸುರಂಗ ಕೋಣೆಗಳಲ್ಲಿ ಅಡಗಿದ್ದ ಉಗ್ರರನ್ನೂ ಧ್ವಂಸ ಮಾಡಿದೆ ಎಂದು ಆಫ್ಘಾನಿಸ್ತಾನ ಸರ್ಕಾರ ಹೇಳಿದೆ.

English summary
In a massive attack by America on ISIS terror group in Afghanistan on April 13, 2017, kills two kerala youths who were serving for ISIS since few month says sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X