ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಕಪಿಮುಷ್ಟಿಯಿಂದ ಇಬ್ಬರು ಭಾರತೀಯರ ರಕ್ಷಣೆ

By Mahesh
|
Google Oneindia Kannada News

ನವದೆಹಲಿ, ಸೆ. 15: ಸುಮಾರು 15 ತಿಂಗಳುಗಳ ಕಾಲ ಲಿಬಿಯಾದಲ್ಲಿ ಐಎಸ್ ಐಎಸ್ ಉಗ್ರರ ಕಪಿಮುಷ್ಟಿಯಲ್ಲಿದ್ದ ಇಬ್ಬರು ಭಾರತೀಯರನ್ನು ರಕ್ಷಣೆ ಮಾಡಲಾಗಿದೆ. ಈ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗುರುವಾರ ಟ್ವೀಟ್ ಮಾಡಿದ್ದಾರೆ.

ಲಿಬಿಯಾದಲ್ಲಿ ಜುಲೈ 29, 2015ರಿಂದ ಒತ್ತೆಯಾಳಾಗಿದ್ದ ಟಿ. ಗೋಪಾಲಕೃಷ್ಣ (ಆಂಧ್ರ ಪ್ರದೇಶ) ಮತ್ತು ಸಿ. ಬಲರಾಮ್ ಕಿಶನ್ (ತೆಲಂಗಾಣ) ಅವರನ್ನು ರಕ್ಷಿಸಲಾಗಿದೆ ಎಂದು ಸುಷ್ಮಾ ಇಂದು ಟ್ವೀಟ್ ಮಾಡಿದ್ದಾರೆ.

Two Indians held captive in Libya released

ಲಿಬಿಯಾದ ಉತ್ತರದಲ್ಲಿರುವ ಸಿರ್ತೆ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದ ಇವರನ್ನು ಕಳೆದ ವರ್ಷ ಜುಲೈನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಅಪಹರಿಸಿದ್ದರು.


ಲಕ್ಷ್ಮಿಕಾಂತ್, ವಿಜಯ್ ಕುಮಾರ್, ಬಲರಾಮ್ ಹಾಗೂ ಗೋಪಾಲಕೃಷ್ಣ ನಾಲ್ವರನ್ನು ಅಪಹರಿಸಲಾಗಿತ್ತು. ಲಕ್ಷ್ಮಿಕಾಂತ್ ಹಾಗೂ ಕುಮಾರ್ ಅವರು ಕರ್ನಾಟಕ ಮೂಲದವರಾಗಿದ್ದು, ಅಪಹರಣವಾದ ನಾಲ್ಕು ದಿನಗಳಲ್ಲೇ ರಕ್ಷಿಸಲಾಗಿತ್ತು.

ಆದರೆ, ತೆಲಂಗಾಣದ ಬಲರಾಮ್ ಹಾಗೂ ಆಂಧ್ರದ ಗೋಪಾಲಕೃಷ್ಣ ಅವರನ್ನು ಬಿಡುಗಡೆ ಮಾಡಿರಲಿಲ್ಲ. ಅವರ ಕುಟುಂಬದವರು ಕೂಡಾ ಆಸೆ ಬಿಟ್ಟಿದ್ದರು. ಆದರೆ, ವಿದೇಶಾಂಗ ಸಚಿವಾಲಯದ ಸತತ ಪ್ರಯತ್ನ, ಸಂಧಾನದ ಫಲವಾಗಿ ಇಬ್ಬರು ಇವತ್ತು ಬಿಡುಗಡೆಗೊಂಡಿದ್ದಾರೆ. (ಒನ್ಇಂಡಿಯಾ ಸುದ್ದಿ)

English summary
Two Indians who were held captive in Libya have been released. Announcing the same on her Twitter handle, External Affairs minister said: "Happy to inform that T Gopalkrishna and C Balram Kishan have been rescued. They were being held captive by a group at Libya since July 29 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X