• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

20 ದಿನದಲ್ಲಿ ಇಬ್ಬರು ಮಾಜಿ ಮಹಿಳಾ ಮುಖ್ಯಮಂತ್ರಿಗಳು ವಿಧಿವಶ

|
Google Oneindia Kannada News

ನವದೆಹಲಿ, ಆ 7: ಇಪ್ಪತ್ತು ದಿನದ ಅವಧಿಯಲ್ಲಿ ದೇಶ ಇಬ್ಬರು ಮಾಜಿ ಮಹಿಳಾ ಮುಖ್ಯಮಂತ್ರಿಗಳನ್ನು ಕಳೆದುಕೊಂಡಿದೆ. ಇಬ್ಬರೂ, ರಾಷ್ಟ್ರೀಯ ಪಕ್ಷಗಳನ್ನು ಪ್ರತಿನಿಧಿಸುವ ಪ್ರಮುಖ ಮಹಿಳಾ ಮುಖಂಡರಾಗಿದ್ದವರು.

ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿದ್ದ, ಹಿರಿಯ ಕಾಂಗ್ರೆಸ್ ನಾಯಕಿ, ಶೀಲಾ ದೀಕ್ಷಿತ್, ಕಳೆದ ತಿಂಗಳು ಜುಲೈ 20ರಂದು ವಿಧಿವಶರಾಗಿದ್ದರು. ಈಗ, ಆಗಸ್ಟ್ ಆರರಂದು ಮತ್ತೊಬ್ಬರು ಮಾಜಿ ಮುಖ್ಯಮಂತ್ರಿಯಾಗಿದ್ದ ಸುಷ್ಮಾ ಸ್ವರಾಜ್ ನಿಧನರಾಗಿದ್ದಾರೆ.

ನಿಮಗೆ ಗೊತ್ತಿರದ ಸುಷ್ಮಾ ಸ್ವರಾಜ್ ಹೆಜ್ಜೆ ಗುರುತುಗಳುನಿಮಗೆ ಗೊತ್ತಿರದ ಸುಷ್ಮಾ ಸ್ವರಾಜ್ ಹೆಜ್ಜೆ ಗುರುತುಗಳು

ವಿದೇಶಾಂಗ ಇಲಾಖೆಯ ಸಚಿವೆಯೂ ಆಗಿದ್ದ ಸುಷ್ಮಾ ಸ್ವರಾಜ್, ಇದಕ್ಕೂ ಮೊದಲು ದೆಹಲಿಯ ಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಸುಷ್ಮಾ ಮತ್ತು ಶೀಲಾ, ದೆಹಲಿಯ ಇಬ್ಬರು ಮಹಿಳಾ ಸಿಎಂ ಆಗಿದ್ದವರು.

ಹೃದಯಾಘಾತದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ಸುಷ್ಮಾ ಅವರನ್ನು ಮಂಗಳವಾರ ರಾತ್ರಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಇಹಲೋಕ ತ್ಯಜಿಸಿದ್ದರು.

ಚಿತ್ರಗಳಲ್ಲಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನ

ಶೀಲಾ ದೀಕ್ಷಿತ್ ನಿಧನರಾದಾಗ ಟ್ವೀಟ್ ಮಾಡಿದ್ದ ಸುಷ್ಮಾ, 'ಶೀಲಾ ನಿಧನರಾದ ಸುದ್ದಿ ಬಹಳ ನೋವನ್ನು ತಂದಿದೆ. ರಾಜಕಾರಣದಲ್ಲಿ ನಾವಿಬ್ಬರೂ ಬೇರೆ ಬೇರೆ ಪಕ್ಷಗಳನ್ನು ಪ್ರತಿನಿಧಿಸಿದರೂ, ವೈಯಕ್ತಿಕವಾಗಿ ನಾವಿಬ್ಬರೂ ಗೆಳತಿಯರಾಗಿದ್ದೆವು' ಎಂದು ಸುಷ್ಮಾ ಹೇಳಿದ್ದರು.

ಮತ್ತೆ ನೆನಪಾಗುತ್ತಿದೆ ಆದರ್ಶ ದಂಪತಿ ಸುಷ್ಮಾ-ಸ್ವರಾಜ್ ಪ್ರೇಮಕಥೆ ಮತ್ತೆ ನೆನಪಾಗುತ್ತಿದೆ ಆದರ್ಶ ದಂಪತಿ ಸುಷ್ಮಾ-ಸ್ವರಾಜ್ ಪ್ರೇಮಕಥೆ

ಜುಲೈ ಇಪ್ಪತ್ತರಂದು, ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಶೀಲಾ ದೀಕ್ಷಿತ್ ಅವರನ್ಜು ದೆಹಲಿಯ ಫೋರ್ಟಿಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಅಂದೇ ಮಧ್ಯಾಹ್ನ ಅವರು ಕೊನೆಯುಸಿರೆಳೆದಿದ್ದರು.

English summary
Two Former Woman Delhi Chief Ministers Have Died Within A Month. Sheila Dikshit on July 20 and Sushma Swaraj on Aug 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X