ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ : ಅಡ್ವಾಣಿಯನ್ನು ಕಡೆಗಣಿಸಿದರೆ ಮೋದಿ?

|
Google Oneindia Kannada News

ಅಗರ್ತಲ, ಮಾರ್ಚ್ 10: ತ್ರಿಪುರದಲ್ಲಿ ಮೊಟ್ಟ ಮೊದಲಬಾರಿಗೆ ಬಿಜೆಪಿ ಸರ್ಕಾರ ರಚಿಸುತ್ತಿರುವುದು ಬಿಜೆಪಿ ನಾಯಕರ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ನಿನ್ನೆ(ಮಾ.09) ಇಲ್ಲಿನ ಮುಖ್ಯಮಂತ್ರಿಯಾಗಿ ವಿಪ್ಲವ್ ದೇವ್ ಪ್ರಮಾಣವಚನ ಸ್ವೀಕರಿಸುವ ಮೂಲಕ ತ್ರಿಪುರದ ಮೊಟ್ಟ ಮೊದಲ ಬಿಜೆಪಿ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾದರು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈ ಅಭೂತಪೂರ್ವ ಸನ್ನಿವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಹಿರಿಯ ಮುಖಂಡರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಮುಂತಾದವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ವಿಡಿಯೋವನ್ನು ನೋಡಿದವರಿಗೆಲ್ಲ ಒಂದು ಕ್ಷಣ ಬೇಸರವಾಗಿರಲಿಕ್ಕೆ ಸಾಕು. ಅಷ್ಟಕ್ಕೂ ನಡೆದದ್ದಾದರೂ ಏನು?

ತ್ರಿಪುರ ಮುಖ್ಯಮಂತ್ರಿಯಾಗಿ ವಿಪ್ಲವ್ ದೇವ್ ಪ್ರಮಾಣ ವಚನತ್ರಿಪುರ ಮುಖ್ಯಮಂತ್ರಿಯಾಗಿ ವಿಪ್ಲವ್ ದೇವ್ ಪ್ರಮಾಣ ವಚನ

ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಡೆಯಿಂದಲೇ ಅವಮಾನ ಮಾಡಿದಂಥ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಉದ್ದೇಶಪೂರ್ವಕವಾಗಿ ನಡೆದದ್ದೆ? ಏಕೆಂದರೆ, ಮೋದಿ ಅವರು ತಮಗಿಂತ ಹಿರಿಯರಿಗೆ ಕಾಲು ಮುಟ್ಟಿ ನಮಸ್ಕರಿಸುತ್ತಾರೆಯೇ ವಿನಃ ಅವರಿಗೆ ಅವಮಾನವಾಗುವಂತೆ ನಡೆದುಕೊಳ್ಳುವವರಲ್ಲ.

Array

ಆ ವಿಡಿಯೋದಲ್ಲೇನಿದೆ?

ಪ್ರಧಾನಿ ನರೇಂದ್ರ ಮೋದಿಯವರು ವೇದಿಕೆಗೆ ಆಗಮಿಸುತ್ತಿದ್ದಂತೆಯೇ ವೇದಿಕೆಯ ಮೇಲಿದ್ದ, ಬಿಜೆಪಿ ನಾಯಕರು, ತ್ರಿಪುರದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಎದ್ದು ನಿಂತು ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಸಹ ಎದ್ದು ನಿಂತು ಮೋದಿಯವರಿಗೆ ಕೈ ಮುಗಿದರು. ಆದರೆ ಉದ್ದೇಶಪೂರ್ವಕವಾಗಿಯೋ, ಅಥವಾ ಗಮನಿಸದೆಯೋ, ಒಟ್ಟಿನಲ್ಲಿ ಎಲ್ ಕೆ ಅಡ್ವಾಣಿಯವರಿಗೆ ಕೈ ಮುಗಿಯದೆ ಮೋದಿ ತಮ್ಮ ಪಾಡಿಗೆ ತಾವು ಮುಂದೆ ಹೋದರು. ಮೋದಿಯವರ ಈ ನಡೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ಮಾಡಲಾಗುತ್ತಿದೆ.

ಸಂಸ್ಕಾರದ ಪಾಠ ಹೇಳುವವರಿಗೆ ಸಂಸ್ಕಾರವಿದೆಯೇ?

ಸಂಸ್ಕಾರದ ಬಗ್ಗೆ ಪಾಠ ಮಾಡುವವರೇ ಹೀಗೆ ಸಂಸ್ಕಾರ ಇಲ್ಲದಂತೆ ನಡೆಯುವುದು ಸರಿಯೇ? ನಿನ್ನೆಯ ಪ್ರಧಾನಿ ಮೋದಿಯವರ ನಡೆ ನಿಜಕ್ಕೂ ಬಿಜೆಪಿಯ ಹಲವು ಕಾರ್ಯಕರ್ತರಿಗೆ ನೋವನ್ನುಂಟುಮಾಡಿದೆ. ನಮ್ಮ ಸಂಪ್ರದಾಯದ ಔನ್ನತ್ಯವೇ, 'ಹಿರಿಯರಿಗೆ ಗೌರವಿಸುವ'ಬಗ್ಗೆ ಹೇಳುತ್ತದೆ. ಆದರೆ ಇಂಥ ನಡೆ ಸರಿಯಲ್ಲ. ಬಿಜೆಪಿಯ ಈಗಿನ ನಾಯಕರು ಎಲ್ ಕೆ ಆಡ್ವಾಣಿ, ಅಟಲ್ ಬಿಹಾರಿ ವಾಜಪೇಯಿಯವರಿಗೆಲ್ಲ ಅತ್ಯಂತ ಗೌರವಾನ್ವಿತ ವಿದಾಯ ನೀಡಬೇಕು. ಇದು ಹಿರಿಯ ನಾಯಕರಿಗೆ ಕಾಲವಲ್ಲ ಎನ್ನಿಸುತ್ತಿದೆ ಎಂದು ಸಂಜೀವ್ ದೀಕ್ಷಿತ್ ಟ್ವೀಟ್ ಮಾಡಿದ್ದಾರೆ.

ಎಲ್ ಕೆ ಆಡ್ವಾಣಿ ಅವರ ಕೊಡುಗೆ ಸಾಕಷ್ಟಿದೆ.

ಬಿಜೆಪಿಗೆ ಅಟಲ್ ಬಿಹಾರಿ ವಾಜಪೇಯಿ ಅವರಂತೆಯೇ ಎಲ್ ಕೆ ಆಡ್ವಾಣಿ ಅವರ ಕೊಡುಗೆಯೂ ಸಾಕಷ್ಟಿದೆ. ಜೊತೆಗೆ ಬಿಜೆಪಿಯನ್ನು ಬಲಾಡ್ಯ ಗೊಳಿಸಿದವರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ ಎಲ್ಲರ ಪರಿಶ್ರಮವೂ ಇದೆ. ಆದರೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮಾತ್ರವೇ ಬಿಜೆಪಿಗೆ ಎಲ್ಲವನ್ನೂ ಮಾಡಿದ್ದಾರೆ ಎಂದುಕೊಳ್ಳುವುದು ತಪ್ಪು ಎಂದಿದ್ದಾರೆ ಮನೀಶ್ ಮಿಶ್ರಾ ಎಂಬುವವರು.

ತಮ್ಮ ಗುರುವನ್ನೇ ಗೌರವಿಸದವರು ಜನರನ್ನು ಗೌರವಿಸುತ್ತಾರಾ?

ಇದು ದುರಹಂಕಾರದ ಪರಾಕಾಷ್ಠೆ. ಎಲ್ ಕೆ ಆಡ್ವಾಣಿ, ಮುರಳಿ ಮನೋಹರ್ ಜೋಷಿ ಅವರಂಥ ತಮ್ಮ ಗುರುವಿಗೇ ಗೌರವ ನೀಡದ ವ್ಯಕ್ತಿ ಜನರಿಗೆ ಗೌರವ ನೀಡುತ್ತಾನೆ ಎಂದು ಹೇಗೆ ನಿರೀಕ್ಷಿಸೋಣ? ನರೇಂದ್ರ ಮೋದಿ ಆಂಧ್ರ ಪ್ರದೇಶದಲ್ಲಿ ಮೋಸ ಮಾಡಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ ಎಂದು ಸಂದೀಪ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಮೋದಿ ಹೀಗೆ ಮಾಡಬಾರದಿತ್ತು. ಅವರ ಸಂಸ್ಕಾರವನ್ನು ಇದು ತೋರಿಸುತ್ತದೆ. ಮೊದಲು ಎಲ್ ಕೆ ಆಡ್ವಾಣಿ ಅವರಂಥ ಹಿರಿಯರಿಗೆ ಗೌರವ ನೀಡುವುದ್ನು ಕಲಿಯಿರಿ. ಕೊನೇ ಪಕ್ಷ ಅವರ ವಯಸ್ಸಿಗಾದರೂ ಗೌರವ ನೀಡಿ ಎಂದು ಕ್ರಿಟಿಕಲ್ ಥಾಟ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

English summary
People in social media are blaming prime minister Narednra Modi for not respecting BJP leader L.K.Advani in Tripura chief minister Viplav Dev's(Biplab Deb) swearing in ceremony in Agartala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X