• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರೋಗ್ಯ ಇಲಾಖೆಯ ಟ್ವೀಟ್ ಅವಾಂತರಕ್ಕೆ ತಪರಾಕಿ

By Mahesh
|

ನವದೆಹಲಿ, ಏಪ್ರಿಲ್ 26: ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಇತ್ತೀಚೆಗೆ ಸ್ವಾಸ್ಥ್ಯ ಭಾರತ ಎಂದು ಅಭಿಯಾನದಡಿಯಲ್ಲಿ ಮಾಡಿದ್ದ ಟ್ವೀಟ್ ಒಂದು ವಿವಾದಕ್ಕೆ ಕಾರಣವಾಗಿತ್ತು. ಮಾಂಸಾಹಾರ, ಪ್ರೋಸೆಸ್ಡ್ ಫುಡ್ ಹಾಗೂ ಸಸ್ಯಾಹಾರ ಸೇವನೆಯ ಪರಿಣಾಮಗಳನ್ನು ಬಿಂಬಿಸುವ ಎರಡು ಚಿತ್ರಗಳನ್ನು ಇಲಾಖೆ ಪೋಸ್ಟ್ ಮಾಡಿತ್ತು. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಸಾರ್ವಜನಿಕರಿಂದ ಭಾರಿ ಟೀಕೆ ಕೇಳಿ ಬಂದ ಹಿನ್ನಲೆಯಲ್ಲಿ ಹೊಸದಾಗಿ ಟ್ವೀಟ್ ಮಾಡಲಾಗಿದೆ.

ಟ್ವೀಟ್ ನಲ್ಲಿ ಒಂದು ಕಡೆ ದಪ್ಪಗಿರುವ ಮಹಿಳೆ ದೇಹದ ಚಿತ್ರವಿದ್ದು, ಅದರಲ್ಲಿ ಚಿಕನ್, ಮಾಂಸ, ಬರ್ಗರ್, ಡೋನಟ್, ಫ್ರೆಂಚ್ ಫ್ರೈಸ್, ಕೋಲಾ, ಅಲ್ಕೋಹಾಲ್ ಸೇವಿಸಿದ್ದಾಳೆಂದು ಬಿಂಬಿಸಲಾಗಿತ್ತು. ಇನ್ನೊಂದೆಡೆ ತೆಳ್ಳಗಿರುವ ಮಹಿಳೆ ಹಣ್ಣು, ಹಸಿರು ತರಕಾರಿ ಸೇವನೆಯಿಂದ ಆರೋಗ್ಯವಾಗಿದ್ದಾಳೆಂದು ಬಿಂಬಿಸಲಾಗಿತ್ತು. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು.

ಸಚಿವಾಲಯ ಈ ಟ್ವೀಟ್ ಮೂಲಕ ಬಾಡಿ ಶೇಮಿಂಗ್ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ನಂತರ ಶಾಖಾಹಾರಿ, ಮಾಂಸಹಾರಿ ಪದಾರ್ಥಗಳನ್ನು ಒಟ್ಟುಗೂಡಿಸಿ, ಹೊಸ ಚಿತ್ರವೊಂದನ್ನು ಟ್ವೀಟ್ ಮಾಡಲಾಗಿದೆ.

ಬಾಡಿ ಶೇಮಿಂಗ್ ಅನ್ನೋ ಆರೋಪ

ಬಾಡಿ ಶೇಮಿಂಗ್ ಅನ್ನೋ ಆರೋಪ

ಆರೋಗ್ಯ ಇಲಾಖೆ ಟ್ವೀಟ್ ಅವಾಂತರದಲ್ಲಿ ಬಾಡಿ ಶೇಮಿಂಗ್ ಅನ್ನೋ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲ ಸಸ್ಯಾಹಾರ ವಾದವನ್ನು ಆರೋಗ್ಯ ಇಲಾಖೆ ಮಂಡಿಸಿದೆ ಹಲವರು ಮಂದಿ ಕಿಡಿಕಾರಿದ್ದಾರೆ.

ಸೆಲೆಬ್ರಿಟಿ ಶಿರಿಷ್ ಕುಂದರ್ ಟ್ವೀಟ್

ಮಾಂಸಾಹಾರ ಹಾಗೂ ಮೊಟ್ಟೆಯಂತಹ ಪದಾರ್ಥಗಳು ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತವೆ. ಅವನ್ನೆಲ್ಲ ಬೊಜ್ಜಿನ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಸೇರಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಸಮತೋಲನ ಆಹಾರ ಎಂದರೇನು?

ಸಮತೋಲನ ಆಹಾರ ಎಂದರೇನು? ಎಂಬುದರ ಬಗ್ಗೆ ಪಾಠ ಮಾಡಬೇಕಿದೆ. ಸಸ್ಯಾಹಾರ, ಮಾಂಸಾಹಾರ ಎಂಬ ಪ್ರತ್ಯೇಕ ಆಹಾರ ಪದ್ಧತಿಗಿಂತ ಪೌಷ್ಟಿಕ ಆಹಾರ ಕ್ರಮದ ಅರಿವು ಮೂಡಿಸುವುದು ಮುಖ್ಯ ಎಂದು ಡಾ. ಸುಮಯ್ಯ ಶೇಖ್ ಟ್ವೀಟ್ ಮಾಡಿದ್ದಾರೆ.

ಮೊಟ್ಟೆ, ಮೀನು, ಮಾಂಸ ಆರೋಗ್ಯಕರವಲ್ಲವೇ?

ಆರೋಗ್ಯ ಇಲಾಖೆ ಪ್ರಕಾರ ಮೊಟ್ಟೆ, ಮೀನು, ಮಾಂಸ ಆರೋಗ್ಯಕರವಲ್ಲವೇ? ಇವು ಸಮತೋಲನ ಆಹಾರ ಪದ್ಧತಿಯಲ್ಲಿ ಸೇರಿಲ್ಲವೇ? ಸ್ಟಾಕ್ ಫೋಟೊ ಬಳಸಿ ನಂತರ ಡಿಲೀಟ್ ಮಾಡಿರುವುದು ಎಷ್ಟು ಸರಿ?

ಜೀರೋ ಫಿಗರ್ ಬರಲು ಯೋಗಿಯಾಗಬೇಕೆ?

ಜೀರೋ ಫಿಗರ್ ಬರಬೇಕಾದರೆ ಯೋಗಿಗಳಂತೆ ಆಹಾರ ಸೇವಿಸಬೇಕೇ? ಸ್ಥೂಲಕಾಯಕ್ಕೆ ಆಹಾರ ಪದ್ಧತಿಯೇ ಕಾರಣವೇ? ಆರೋಗ್ಯ ಇಲಾಖೆಯಿಂದ ಇದೆಂಥ ಟ್ವೀಟ್.

ಅತಿ ಹೆಚ್ಚು ಪೋಷಕಾಂಶವುಳ್ಳ ಆಹಾರ

ಮಾಂಸಾಹಾರ ಹಾಗೂ ಮೊಟ್ಟೆಯಂತಹ ಪದಾರ್ಥಗಳು ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತವೆ. ಅವನ್ನೆಲ್ಲ ಬೊಜ್ಜಿನ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಸೇರಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Health Department posted a tweet featuring two women showcasing that vegetarian diet helped in being healthy. The photo shows two women of which the curvey one is associated with non-vegetarian and junk foods while vegetables and fruits are shown to be essential for leaner body type.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more