ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀದೇವಿ ಕುರಿತಂತೆ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದ್ದೇಕೆ?

By ಜೇಮ್ಸ್ ಮಾರ್ಟಿನ್
|
Google Oneindia Kannada News

ಬೆಂಗಳೂರು, ಫೆಬ್ರವರಿ 27: ಚಿತ್ರರಂಗದ ಸೂಪರ್ ಸ್ಟಾರ್ ಶ್ರೀದೇವಿಯವರ ಅಕಾಲಿಕ ಸಾವಿನ ದುಃಖಕ್ಕೆ ಸಂತಾಪ ಸೂಚಿಸಿ, ವಿವಿಧ ಕ್ಷೇತ್ರದ ಗಣ್ಯರಿಂದ ಟ್ವೀಟ್ ಗಳು ಮಹಾಪೂರವೇ ಹರಿದು ಬಂದಿದ್ದನ್ನು ಗಮನಿಸಿರಬಹುದು.

ಭಾರತೀಯ ಚಿತ್ರರಂಗವನ್ನು ಶೋಕ ಸಾಗರದಲ್ಲಿ ಮುಳುಗಿರುವ ಸಂದರ್ಭದಲ್ಲಿ ದೇಶದ ಅತ್ಯಂತ ಪುರಾತನ ಪಕ್ಷ ಕೂಡಾ ಶ್ರೀದೇವಿ ಅವರ ಸಾವಿನ ಬಗ್ಗೆ ಟ್ವೀಟ್ ಮಾಡಿತ್ತು. ಆದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿಕೃತ ಟ್ವಿಟರ್ ಖಾತೆಯಿಂದ ನಟಿ ಶ್ರೀದೇವಿ ಸಾವಿಗೆ ಸಂತಾಪ ಸೂಚಿಸಿದ ಟ್ವೀಟ್ ನ ಬರೆದ ಕೊನೆ ಸಾಲುಗಳು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಆದರೆ, ಕಾಂಗ್ರೆಸ್ ಟ್ವೀಟ್ ಮಾಡುವಾಗ ಆದ ಸಣ್ಣ ತಪ್ಪನ್ನು ಉದ್ದೇಶ ಪೂರ್ವಕ ಎಂದು ಹೇಳಿ, ದೊಡ್ಡ ಸುದ್ದಿ ಮಾಡಿದ್ದು ಬಿಜೆಪಿ ಬೆಂಬಲಿತ ಟ್ವೀಟ್ ಖಾತೆ ಉಳ್ಳವರು ಎಂಬ ಆರೋಪ ಕೇಳಿ ಬಂದಿದೆ.

ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಆಗಿದ್ದ ಪ್ರಮಾದವನ್ನು ತಿದ್ದುಕೊಂಡು ಮತ್ತೊಂದು ಟ್ವೀಟ್ ಮಾಡಿತ್ತು. ಇದು ಸಾಲದೆಂಬಂತೆ ಸರಣಿ ಟ್ವೀಟ್ ಮಾಡಲಾಯಿತು. ಸರಣಿ ಟ್ವೀಟ್ ಮಾಡಿದ್ದು ಉದ್ದೇಶ ಪೂರ್ವಕವಾಗಿ ಮಾಡಿದ್ದಾ? ಅಥವಾ ನಟಿ ಬಗ್ಗೆ ಪಕ್ಷಕ್ಕಿರುವ ಕಳಕಳಿಯೇ? ಬಲ್ಲವರು ತಿಳಿಸಬೇಕು? ಸಂಗ್ರಹಿತ ಟ್ವೀಟ್ ಗಳನ್ನು ಓದಿ...

ಉದ್ದೇಶಪೂರ್ವಕವಾಗಿ ಟ್ರೆಂಡ್ ಆಗಿದ್ದೇ?

ಉದ್ದೇಶಪೂರ್ವಕವಾಗಿ ಟ್ರೆಂಡ್ ಆಗಿದ್ದೇ?

ಒಟ್ಟಾರೆ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿಯಲ್ಲಿ ಒಂದಷ್ಟು ರಂಜನೀಯವಾದ ಟ್ವೀಟ್ ಗಳು ಹೊರ ಬಂದವು. ಆದರೆ, ಅದೆಲ್ಲವೂ ಏಕಪಕ್ಷೀಯವಾಗಿತ್ತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಉದ್ದೇಶಪೂರ್ವಕವಾಗಿ ಟ್ರೆಂಡ್ ಮಾಡಲಾಯಿತೇ? ಗೊತ್ತಿಲ್ಲ.

2013ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತು

6 ಫಿಲಂಫೇರ್ ಪ್ರಶಸ್ತಿ, 4ನೇ ವರ್ಷಕ್ಕೆ ಚಿತ್ರರಂಗಕ್ಕೆ ಕಾಲಿರಿಸಿದರು. 12ನೇ ವಯಸ್ಸಿಗೆ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು ಎಂದು ಸರಣಿ ಟ್ವೀಟ್ ಮಾಡಿದ್ದ ಕಾಂಗ್ರೆಸ್.

ಶ್ರೀದೇವಿ ಹುಟ್ಟಿದ್ದು, ಮೃತರಾಗಿದ್ದು

ಶ್ರೀದೇವಿ ಹುಟ್ಟಿದ್ದು, ಮೃತರಾಗಿದ್ದು

ನೆಹರೂ ಕಾಲದಲ್ಲಿ ಹುಟ್ಟಿದ್ದ ಶ್ರೀದೇವಿ ಇಂದು ಬಿಜೆಪಿಯ ಕಾಲದಲ್ಲಿ ಮೃತರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಸಾವಿನಲ್ಲೂ ನಿಮಗೆ ಕ್ರೆಡಿಟ್ ಬೇಕಾ?

ಸಾವಿನಲ್ಲೂ ನಿಮಗೆ ಕ್ರೆಡಿಟ್ ಬೇಕಾ?

ಸಾವಿನಲ್ಲೂ ನಿಮಗೆ ಕ್ರೆಡಿಟ್ ಬೇಕಾ?, ಸರಿಯಾದ ಶ್ರದ್ಧಾಂಜಲಿ ಅರ್ಪಿಸಿ, ನಿಮಗೆ 2 ಪದ್ಮಶ್ರೀ ಕೊಡುತ್ತೇವೆ.

ಶ್ರೀದೇವಿಗೆ ನಟನೆಗಾಗಿ ಸಿಕ್ಕ ಪದ್ಮಶ್ರೀ

ಶ್ರೀದೇವಿಗೆ ನಟನೆಗಾಗಿ ಸಿಕ್ಕ ಪದ್ಮಶ್ರೀ

ಶ್ರೀದೇವಿಗೆ ನಟನೆಗಾಗಿ ಪದ್ಮಶ್ರೀ ಸಿಕ್ಕಿತು, ಆದರೆ, ನೆಹರೂ ತಮಗೆ ತಾವೇ ಭಾರತರತ್ನ ಪ್ರಶಸ್ತಿ ಕೊಟ್ಟುಕೊಂಡರು.

ಮಾನವೀಯತೆ ಇಲ್ಲದವರು

ಮಾನವೀಯತೆ ಇಲ್ಲದವರು

ಮಾನವೀಯತೆ ಇಲ್ಲದವರು ನೀವು, ಸಾವಿನಲ್ಲೂ ನಿಮ್ಮ ಕೊಡುಗೆ ಹುಡುಕುತ್ತಿದ್ದೀರಿ, ನಿಮಗೆ ಧಿಕ್ಕಾರ ಎನ್ನಲಾಗಿದೆ.

ದಿವ್ಯಸ್ಪಂದನ ನಿರ್ವಹಣೆ ಎಷ್ಟು ಚೆಂದವಾಗಿದೆ

ಸಾಮಾಜಿಕ ಜಾಲ ತಾಣಗಳ ನಿರ್ವಹಣೆಯನ್ನು ದಿವ್ಯಸ್ಪಂದನ ಹೇಗೆ ಮಾಡುತ್ತಿದ್ದಾರೆ ನೋಡಿ, ಟ್ವೀಟ್ ಡಿಲೀಟ್ ಆಗಿದೆ. ಆದರೆ, ಈ ಪ್ರಮಾದ ಬಗ್ಗೆ ಪಶ್ಚಾತ್ತಾಪವಾಗಲಿ, ಕ್ಷಮೆಯಾಗಲಿ ಇಲ್ಲ.

English summary
Congress party stooped down to ridiculous levels as the official Twitter handle of the party tweeted a condolence message on Sridevi's demise but later covered it well by series of tweets about her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X