ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುದೇವ ರವೀಂದ್ರನಾಥ್ ಠಾಗೋರ್ ಸ್ಮರಿಸಿದ ಟ್ವೀಟ್ ಲೋಕ

ಗುರುದೇವ ರವೀಂದ್ರನಾಥ್ ಠಾಗೋರ್ ಅವರ ಜನ್ಮದಿನೋತ್ಸವವಾದ ಇಂದು ಟ್ವೀಟ್ ಲೋಕ ನಮನ ಸಲ್ಲಿಸಿದೆ. ಭಾರತದ ಇತಿಹಾಸದಲ್ಲಿ ಕವಿ, ಸಾಹಿತಿ, ಸಂಗೀತಗಾರ, ಗುರುವಾಗಿ ಚಿರಸ್ಮರಣೀಯರಾಗಿದ್ದಾರೆ.

By Mahesh
|
Google Oneindia Kannada News

ಗುರುದೇವ ರವೀಂದ್ರನಾಥ್ ಠಾಗೋರ್ ಅವರ ಜನ್ಮದಿನೋತ್ಸವವಾದ ಇಂದು ಟ್ವೀಟ್ ಲೋಕ ನಮನ ಸಲ್ಲಿಸಿದೆ. ಭಾರತದ ಇತಿಹಾಸದಲ್ಲಿ ಕವಿ, ಸಾಹಿತಿ, ಸಂಗೀತಗಾರ, ಗುರುವಾಗಿ ಚಿರಸ್ಮರಣೀಯರಾಗಿದ್ದಾರೆ.

ಗುರುದೇವ ಹೆಸರಿನ ಕಾವ್ಯನಮದಿಂದ ಠಾಗೋರರು ಕಾವ್ಯಕ್ಕೆ ಹೆಸರುವಾಸಿಯಾದರೂ, ಕಾದಂಬರಿಗಳು, ಪ್ರಬಂಧಗಳು, ಸಣ್ಣ ಕಥೆಗಳು, ಪ್ರವಾಸ ಕಥನಗಳು, ನಾಟಕಗಳು, ಮತ್ತು ಸಾವಿರಾರು ಗೀತೆಗಳನ್ನೂ ರಚಿಸಿದ್ದಾರೆ. ಗದ್ಯ ಪ್ರಕಾರದಲ್ಲಿ ಠಾಗೋರ್‌ರ ಕಿರು ಕಥೆಗಳು ಅತ್ಯುತ್ಕೃಷ್ಟ ಎನಿಸಿವೆ. [ಭಾರತದ ರಾಷ್ಟ್ರಗೀತೆ ಇತಿಹಾಸ, ಸಾಹಿತ್ಯ, ಮಹತ್ವ...]

ಬೆಂಗಾಲಿ ಭಾಷೆಯ ಹೊಸ ಶೈಲಿಯ ಜನಕ ಎಂಬ ಕೀರ್ತಿಗೆ ಇವರು ಭಾಜನರಾಗಿದ್ದಾರೆ. ಲಯಬದ್ಧತೆ, ಆಶಾವಾದ, ಮತ್ತು ಗೇಯ ಗುಣದಿಂದಾಗಿ ಅವರ ಬರಹಗಳು ಗುರುತಿಸಲ್ಪಟ್ಟಿವೆ. ಜನ ಸಾಮಾನ್ಯರ ಜೀವನದ ಸುಲಭ ಸರಳ ವಿಷಯಗಳಿಂದ ಅವರ ಕಿರುಕಥೆಗಳ ಹಂದರ ನಿರ್ಮಿಸಲಾಗಿದೆ.[ಗಾಂಧೀಜಿಗೆ 'ಮಹಾತ್ಮಾ' ಬಿರುದು ಕೊಟ್ಟಿದ್ದು ಯಾರು?]

ಭಾರತೀಯ ಸಾಂಪ್ರದಾಯಕ ಶಾಸ್ತ್ರೀಯ ಕಠೋರತೆಯ ಚೌಕಟ್ಟಿನಿಂದ ಹೊರ ಬಂದ ಠಾಗೋರ್‌ ಬಂಗಾಳಿ ಕಲಾ ಪ್ರಕಾರಕ್ಕೆ ಹೊಸ ಮೆರಗು ನೀಡಿದರು.ಎಂಟನೇ ವಯಸ್ಸಿನಲ್ಲಿ ಪದ್ಯ ರಚನೆ ಆರಂಭಿಸಿದರು. [ರವೀಂದ್ರರಿಗೆ 'ಅನೇಕ'ರಿಂದ ಕಾವ್ಯನಮನ]

ಬ್ರಿಟಿಷ್ ಆಡಳಿತವನ್ನು ಬಹಿರಂಗವಾಗಿ ಖಂಡಿಸಿದ ಠಾಗೋರ್‌ ಭಾರತೀಯ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿದರು. ಗೀತಾಂಜಲಿ ಕಾವ್ಯಕ್ಕೆ 1913ರ ನೊಬೆಲ್ ಸಾಹಿತ್ಯ ಪ್ರಶಸ್ತಿದಕ್ಕಿತು. ಈ ಮೂಲಕ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಏಷ್ಯಾದ ಮೊದಲಿಗರು ಎಂಬ ಗೌರವಕ್ಕೆ ಪಾತ್ರರಾದರು.[ಮಾಹಿತಿ ಕೃಪೆ: ವಿಕಿಪೀಡಿಯ]

ಠಾಗೋರ್ ನೀಡಿದ ಕೊಡುಗೆಗಳು

ಠಾಗೋರ್ ನೀಡಿದ ಕೊಡುಗೆಗಳು

ಅವರು ಜಗತ್ತಿಗೆ ನೀಡಿದ ಬಹುದೊಡ್ಡ ಗ್ರಂಥಮಾಲೆ ಮತ್ತು ಅವರು ಸ್ಥಾಪಿಸಿದ ಸಂಸ್ಥೆ ವಿಶ್ವ-ಭಾರತಿ ವಿಶ್ವಾವಿದ್ಯಾನಿಲಯ-ಇವು ಅವರ ಪ್ರಮುಖ ಕೊಡುಗೆ. ಠಾಗೋರ್ ರಚಿಸಿದ ಎರಡು ಗೀತೆಗಳಿಗೆ ರಾಷ್ಟ್ರ ಮನ್ನಣೆ ಸಿಕ್ಕಿದೆ. 'ಜನ ಗಣ ಮನ' ಭಾರತದ ರಾಷ್ಟ್ರ ಗೀತೆಯಾಗಿ ಅಂಗೀಕರಿಸಲಾದರೆ 'ಅಮರ್ ಶೋನರ್ ಬಾಂಗ್ಲಾ' ಬಾಂಗ್ಲಾದೇಶದ್ದು.

ಗುರುದೇವ್ ರವೀಂದ್ರರ ಒಂದು ಕವನ

ಗುರುದೇವ್ ಸ್ಮರಿಸಿದ ಟ್ವಿಟ್ಟಿಗರು ರವೀಂದ್ರನಾಥ್ ಠಾಗೋರ್ ಸ್ಮರಣೆಯಲ್ಲಿ ಅವರ ಕಾವ್ಯವನ್ನು ಹಂಚಿಕೊಂಡಿದ್ದಾರೆ.

ರವೀಂದ್ರನಾಥ್ ಅವರ ಚಿತ್ರಗಳ ಸಂಪುಟ

ಗುರುದೇವ ರವೀಂದ್ರನಾಥ್ ಠಾಗೋರ್ ಅವರ ಜನ್ಮದಿನೋತ್ಸವವಾದ ಇಂದು ಟ್ವೀಟ್ ಲೋಕ ನಮನ ಸಲ್ಲಿಸಿದೆ. ರವೀಂದ್ರನಾಥ್ ಅವರ ಚಿತ್ರಗಳ ಸಂಪುಟಗಳು ಹೊರಬಂದಿವೆ.

ರಾಷ್ಟ್ರೀಯತೆ ಬಗ್ಗೆ ರವೀಂದ್ರರು

ಬ್ರಿಟಿಷ್ ಆಡಳಿತವನ್ನು ಬಹಿರಂಗವಾಗಿ ಖಂಡಿಸಿದ ಠಾಗೋರ್‌ ಭಾರತೀಯ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿದ್ದ ರವೀಂದ್ರನಾಥ್ ಠಾಗೋರರು ರಾಷ್ಟ್ರೀಯತೆ ಬಗ್ಗೆ ಹೊಂದಿದ್ದ ನಿಲುವನ್ನು ಹಂಚಿಕೊಳ್ಳಲಾಗಿದೆ.

ರವೀಂದ್ರ ಎಂಬ ಶಕ್ತಿ

ರವೀಂದ್ರನಾಥರು ಕೇವಲ ಒಬ್ಬ ಕವಿಯಾಗಿರಲಿಲ್ಲ. ಅಕ್ಷರಶಃ ಗುರುವಾಗಿ ಎಲ್ಲರನ್ನು ಇಂದಿಗೂ ಮುನ್ನಡೆಸುತ್ತಿದ್ದಾರೆ. ಅವರೊಬ್ಬರು ಮುಂದಾಲೋಚನೆ ಹೊಂದಿದ್ದ ಶಕ್ತಿಯಾಗಿದ್ದರು.

English summary
On Rabindranath Tagore’s 156th birth anniversary, twitterati paid tribute to the great poet and novelist,Here are the collection of tweets
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X