ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಹಲ್ಕಾ ತೇಜ್ ಪಾಲ್ ತಪ್ಪಿಸಿಕೊಂಡಾನು ಎಚ್ಚರ!

By Mahesh
|
Google Oneindia Kannada News

ಬೆಂಗಳೂರು, ನ.21 ತೆಹಲ್ಕಾ ಸುದ್ದಿಸಂಸ್ಥೆ ಸ್ಥಾಪಕ ಹಾಗೂ ಮುಖ್ಯ ಸಂಪಾದಕ ತರುಣ್ ತೇಜಪಾಲ್ ತನ್ನ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ವಿರುದ್ಧ ಗೋವಾ ಸರ್ಕಾರ ತನಿಖೆಗೆ ಆದೇಶಿಸಿದೆ. ಆದರೆ, 6 ತಿಂಗಳ ರಜೆ ಪಡೆದಿರುವ ತೇಜ್ ಪಾಲ್ ಯಾವುದೇ ಶಿಕ್ಷೆಗೊಳಗಾಗದೆ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಲೋಕದಲ್ಲಿ ಎಚ್ಚರಿಕೆ ಗಂಟೆ ಬಾರಿಸುತ್ತಿದೆ.

ವೃತ್ತಿಯಲ್ಲಿ ಪತ್ರಕರ್ತರಾಗಿರುವ ತರುಣ್ ತೇಜಪಾಲ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ, ಪ್ರಕರಣ ಸಂಬಂಧ ರಾಜ್ಯ ಪೊಲೀಸರು ತನಿಖೆ ಕೈಗೊಳ್ಳಲಿದ್ದು, ಆರೋಪ ಸಾಬೀತಾದರೆ ಕೇಸು ದಾಖಲಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕಾರ್ ಹೇಳಿದ್ದಾರೆ.

ಗೋವಾದ ಹೋಟೆಲ್ ವೊಂದರಲ್ಲಿ ತರುಣ್ ಅವರು ಎರಡು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಸಹದ್ಯೋಗಿ ಆರೋಪಿಸಿದ್ದರು. ತರುಣ್ ಅವರ ಮೇಲೆ ಲೈಂಗಿಕ ಆರೋಪ ಕೇಳಿ ಬರುತ್ತಿದ್ದಂತೆ, ನೈತಿಕ ಹೊಣೆ ಹೊತ್ತು ಕ್ಷಮೆಯಾಚಿಸಿ, ತಮ್ಮ ಸಹ ಸಂಪಾದಕ ಸ್ಥಾನದಿಂದ ಆರು ತಿಂಗಳ ಕಾಲ ದೂರಸರಿದಿದ್ದರು.

ಆದರೆ, ಸ್ಸಾರಿ ಕೇಳಿ ಎಲ್ಲವೂ ಸರಿ ಹೋಗುತ್ತದೆ ಎಂದು ತಿಳಿದಿರುವ ತರುಣ್ ವಿರುದ್ಧ ಸಂತ್ರಸ್ತ ಮಹಿಳೆ ಸೇರಿದಂತೆ ಸಾರ್ವಜನಿಕರು ತಿರುಗಿ ಬಿದ್ದಿದ್ದಾರೆ. ಸಾಗರೀಕ ಘೋಶ್ ಸೇರಿದಂತೆ ಇತರೆ ಮಾಧ್ಯಮ ಮಿತ್ರರು ಕೂಡಾ ತರುಣ್ ಅವರ ನಡೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರು ಅತ್ಯಾಚಾರ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆ ಬಗ್ಗೆ ತೆಹೆಲ್ಕಾ ವ್ಯವಸ್ಥಾಪ ನಿರ್ದೇಶಕಿ ಶೋಮಾ ಪ್ರತಿಕ್ರಿಯಿಸಿದ್ದು ಹೀಗೆ ..ಇದಾದ ಮೇಲೆ ಟ್ವಿಟ್ಟರ್ ನಲ್ಲಿ ಹರಿದು ಬಂದಿರುವ ಪ್ರತಿಕ್ರಿಯೆಗಳ ಸಾರಾ ಸಂಗ್ರಹ ಮುಂದೆ ಇದೆ ಓದಿ...

ಫೇಸ್ ದಿ ನೇಷನ್

ಮಹಿಳಾ ಪತ್ರಕರ್ತೆಯರಿಗೆ ಯಾರು ರಕ್ಷಣೆ? ಓಮರ್ಟಾ ಕೋಡ್ ಬ್ರೇಕ್ ಆಗಲೇ ಬೇಕು

ಮಗಳೇನು ಮಾಡಿದಳು ಪಾಪ

ತಂದೆ ತೇಜ್ ಪಾಲ್ ಮಾಡಿದ ತಪ್ಪಿಗೆ ಮಗಳ ವಿರುದ್ಧ ಟ್ವೀಟ್ ಮಾಡುವುದನ್ನು ದಯವಿಟ್ಟು ನಿಲ್ಲಿಸಿ

ಶೋಮಾಗೂ ಗುದ್ದು

ಮಹಿಳೆಯಾಗಿ ಮತ್ತೊಬ್ಬ ಮಹಿಳೆಗೆ ಆದ ಅನ್ಯಾಯದ ಬಗ್ಗೆ ಸೊಲ್ಲೆತ್ತದ ಶೋಮಾ ಬಗ್ಗೆ ಟ್ವೀಟ್

ಅಸಾರಾಂ- ತೇಜ್ ಪಾಲ್

ತೇಜಪಾಲ್ ರಜಾದಿನ ಅನುಭವಿಸಬಹುದಾದರೆ ಅಸಾರಾಂಗೆ ಏಕೆ ಜೈಲು?

ತರುಣ್ ಪತ್ರ ಸರಣಿ

ತರುಣ್ ಪತ್ರ ಸರಣಿ

ತರುಣ್ ತನ್ನ ಕೃತ್ಯ ಬಗ್ಗೆ ಬರೆದಿರುವ ಪತ್ರ ಇಲ್ಲಿದೆ

ಮುಂದೇನಾಗಬಹುದು

ತೇಜ್ ಪಾಲ್ ವಿದೇಶಕ್ಕೆ ಹಾರಬಹುದು. ಶೋಮಾ ಕೈಗೆ ತೆಹೆಲ್ಕಾ

English summary
Tehelka founder and editor-in-chief finds himself in the eye of a storm following allegations of sexual assault and intimidation from a junior woman colleague. The topic was a matter of heated debate on the social networks, with most finding it hard to digest that Tejpal might go unpunished.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X