ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಪೂಜಿಯಿಂದ ಮೇಕೆಗೆ ಮಾತೆ ಸ್ಥಾನ, ಮಾಂಸ ಸೇವನೆ ವರ್ಜಿಸಿ: ನೇತಾಜಿ ಸಂಬಂಧಿ

By Mahesh
|
Google Oneindia Kannada News

ಬೆಂಗಳೂರು, ಜುಲೈ 31: ಹರ್ಯಾಣದಲ್ಲಿ ಮೇಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡಿದ ಬಳಿಕ ಮತ್ತೊಮ್ಮೆ ಮೇಕೆ ಸುದ್ದಿಯಲ್ಲಿದೆ. ಮೇಕೆಯನ್ನು ಮಾತೆ ಎಂದು ಕಾಣಿರಿ, ಮಾಂಸ ಸೇವಿಸುವುದನ್ನು ಬಿಡಿ, ಇದನ್ನೇ ಬಾಪೂಜಿ ಕೂಡಾ ಹೇಳುತ್ತಿದ್ದರು ಎಂದು ಈ ಹಿಂದೆ ಟ್ವೀಟ್ ಮಾಡಿದ್ದು, ಈಗ ಮತ್ತೆ ಚರ್ಚೆಗೆ ಬಂದಿದೆ.

ಹಿಂದೂಗಳು ಗೋವುಗಳನ್ನು ಮಾತೆ, ಕಾಮಧೇನು ಎಂದೆಲ್ಲ, ಪೂಜಿಸಿ, ಆರಾಧಿಸುವುದನ್ನು ನೋಡಿದ್ದೇವೆ. ಆದರೆ, ಮೇಕೆಯಲ್ಲಿ ಮಾತೆಯನ್ನು ಕಾಣಿರಿ ಎಂದು ಬಿಜೆಪಿ ಮುಖಂಡ ಚಂದ್ರ ಕುಮಾರ್ ಬೋಸ್ ಅವರು ಗೋವಿನ ಬದಲು ಮೇಕೆಯನ್ನು ಮಾತೆ ಎಂದು ಕರೆದಿದ್ದಾರೆ.

ಮೇಕೆ ಮೇಲೆ ಅತ್ಯಾಚಾರ: #JusticeforGoat ಅಭಿಯಾನಮೇಕೆ ಮೇಲೆ ಅತ್ಯಾಚಾರ: #JusticeforGoat ಅಭಿಯಾನ

ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷ ಚಂದ್ರ ಕುಮಾರ್ ಬೋಸ್ ಅವರು, ಗಾಂಧೀಜಿಯವರು ಮೇಕೆ ಹಾಲು ಕುಡಿಯುತ್ತಿದ್ದುದರಿಂದ ಮೇಕೆಯನ್ನು 'ಮಾತೆ' ಎಂದು ಪರಿಗಣಿಸುತ್ತಿದ್ದರು. ಹಾಗಾಗಿ ಹಿಂದೂಗಳು ಮೇಕೆಯನ್ನು 'ಮಾತೆ' ಎಂದು ಪರಿಗಣಿಸಿ ಮಟನ್ ಸೇವನೆ ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಸಂಬಂಧಿ

ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಸಂಬಂಧಿ

ಕೋಲ್ಕತ್ತಾದ ವುಡ್‍ಬರ್ನ್ ಪಾರ್ಕ್ ನಲ್ಲಿರುವ ಚಂದ್ರಕುಮಾರ್ ರ ತಾತ ಶರತ್ ಚಂದ್ರ ಬೋಸ್ ಅವರ ಮನೆಯಲ್ಲಿ ಗಾಂಧೀಜಿ ಅವರು ಒಮ್ಮೆ ತಂಗಿದ್ದರು. ಆಗ ಅವರು ಮೇಕೆ ಹಾಲನ್ನೇ ಸೇವಿಸುತ್ತಿದ್ದರು. ಹಾಲಿಗಾಗಿಯೇ ಎರಡು ಮೇಕೆಗಳನ್ನು ಅಲ್ಲಿ ಖರೀದಿಸಲಾಗಿತ್ತು. ಹಿಂದೂಗಳ ರಕ್ಷಕರಾಗಿದ್ದ ಗಾಂಧಿಜೀ, ಮೇಕೆ ಹಾಲು ಸೇವಿಸುತ್ತಿದ್ದುದರಿಂದ ಮೇಕೆಯನ್ನು ಮಾತೆ ಎಂದು ಪರಿಗಣಿಸುತ್ತಿದ್ದರು. ಆದ್ದರಿಂದ ಹಿಂದೂಗಳು ಮೇಕೆ ಮಾಂಸ ಸೇವನೆ ನಿಲ್ಲಿಸಬೇಕು ಎಂಬುದು ಬೋಸ್ ಅವರ ವಾದ.

ಯಾವತ್ತೂ ಮಾತೆ ಎಂದು ಪರಿಗಣಿಸಿಲ್ಲ

ಗಾಂಧೀಜಿ ಮೇಕೆಯನ್ನು ಯಾವತ್ತೂ ಮಾತೆ ಎಂದು ಪರಿಗಣಿಸಿಲ್ಲ. ನಾವು ಗೋವುಗಳನ್ನು ಮಾತೆ ಎಂದು ಪರಿಗಣಿಸುತ್ತೇವೆಯೇ ಹೊರತು ಮೇಕೆಯನ್ನಲ್ಲ, ಇಂತಹ ಅಸಂಬದ್ಧ ಮಾತುಗಳನ್ನಾಡಬೇಡಿ ಎಂದು ಸಲಹೆ ನೀಡಿದ ಹರ್ಯಾಣದ ರಾಜ್ಯಪಾಲರು.

ತಮ್ಮ ವಾದವನ್ನು ಸಮರ್ಥಿಸಿಕೊಂಡ ಬೋಸ್

ಹಿಂದೂಗಳ ರಕ್ಷಕರಾಗಿದ್ದ ಗಾಂಧಿ ಮೇಕೆ ಹಾಲು ಸೇವಿಸುತ್ತಿದ್ದುದರಿಂದ ಮೇಕೆಯನ್ನು ಮಾತೆ ಎಂದು ಪರಿಗಣಿಸುತ್ತಿದ್ದರು. ತಮ್ಮ ವಾದವನ್ನು ಸಮರ್ಥಿಸಿಕೊಂಡ ಬೋಸ್.

2030ರ ವೇಳೆಗೆ ಎಲ್ಲರೂ ಸಾಬೂದಾನಾ ತಿನ್ನಿ

2030ರ ವೇಳೆಗೆ ಎಲ್ಲರೂ ಸಾಬೂದಾನಾ ತಿನ್ನಿ, ಮೇಕೆ ನಿಮ್ಮ ಆಹಾರಕ್ಕೆ ಸಿಗುವುದಿಲ್ಲ

ಹಿಂದೂ ರಾಷ್ಟ್ರದ ಬಗ್ಗೆ ಕೂಡಾ ಚರ್ಚೆ

ಆಹಾರ ಪದ್ಧತಿಯ ಜೊತೆಗೆ ಹಿಂದೂ ರಾಷ್ಟ್ರದ ಬಗ್ಗೆ ಕೂಡಾ ಚರ್ಚೆ ನಡೆದಿದೆ.

ನೆಹರೂ ಕೂಡಾ ಮಾಂಸ ಭಕ್ಷಿಸುತ್ತಿದ್ದರು.

ಕಾಶ್ಮೀರಿ ಪಂಡಿತ ಕುಟುಂಬದ ನೆಹರೂ ಅವರು ಕೂಡಾ ಮಾಂಸ ಭಕ್ಷಕರಾಗಿದ್ದರು. ಆಹಾರ ಪದ್ಧತಿಯನ್ನು ಏಕೆ ಇಲ್ಲಿ ತರುತ್ತಿದ್ದೀರಿ

ಆಹಾರ ಪದ್ಧತಿಯಲ್ಲ, ಗಾಂಧೀಜಿ ಭಾವನೆ ಮುಖ್ಯ

ಆಹಾರ ಪದ್ಧತಿಯಲ್ಲ, ಗಾಂಧೀಜಿ ಭಾವನೆ ಮುಖ್ಯ, ನಮ್ಮ ಪೂರ್ವಜರ ಮನೆಯಲ್ಲಿ ಗಾಂಧೀಜಿ ಅವರು ಉಳಿದುಕೊಂಡಾಗ ಅವರು ನಡೆದುಕೊಂಡ ರೀತಿಯ ಬಗ್ಗೆ ನಾನು ವಿವರಿಸಿದ್ದೇನೆ ಎಂದು ಬೋಸ್ ಸಮಜಾಯಿಷಿ ನೀಡಿದ್ದಾರೆ.

English summary
Twitterati erupt over 'goat mata' statement by Netaji's grandnephew, West Bengal Bharatiya Janata Party (BJP) Vice President and Netaji Subhas Chandra Bose. Chandra Kumar Bose has stirred a controversy with his bizarre remarks. Tripura Governor joined the debate with his tweets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X