ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ನಲ್ಲಿ 'ಶೋಮ್ಯಾನ್' ಅರ್ನಬ್ ಗೋಸ್ವಾಮಿ ಪರ ವಿರೋಧ ಗಲಭೆ

ಗುಜರಾತ್ ಗಲಭೆಯನ್ನು ವರದಿ ಮಾಡಿದ ವಿಚಾರದಲ್ಲಿ ರಿಪಬ್ಲಿಕ್ ಟಿವಿ ಎಡಿಟರ್-ಇನ್-ಚೀಫ್ ಅರ್ನಬ್ ಗೋಸ್ವಾಮಿ ಹಸಿಹಸಿ ಸುಳ್ಳು ಹೇಳಿದ್ದಾರೆನ್ನುವ ಇಂಡಿಯಾ ಟುಡೇ ಟಿವಿಯ ಕನ್ಸಲ್ಟಿಂಗ್ ಎಡಿಟರ್ ರಾಜ್ದೀಪ್ ಸರ್ದೇಸಾಯಿ ಹೇಳಿಕೆ ಸಾಮಾಜಿಕ ತಾಣದಲ್ಲಿ ಭಾರ

|
Google Oneindia Kannada News

ಗುಜರಾತ್ ಗಲಭೆಯನ್ನು ವರದಿ ಮಾಡಿದ ವಿಚಾರದಲ್ಲಿ ರಿಪಬ್ಲಿಕ್ ಟಿವಿ ಎಡಿಟರ್-ಇನ್-ಚೀಫ್ ಅರ್ನಬ್ ಗೋಸ್ವಾಮಿ ಹಸಿಹಸಿ ಸುಳ್ಳು ಹೇಳಿದ್ದಾರೆನ್ನುವ ಇಂಡಿಯಾ ಟುಡೇ ಟಿವಿಯ ಕನ್ಸಲ್ಟಿಂಗ್ ಎಡಿಟರ್ ರಾಜ್ದೀಪ್ ಸರ್ದೇಸಾಯಿ ಹೇಳಿಕೆ ಸಾಮಾಜಿಕ ತಾಣದಲ್ಲಿ ಭಾರೀ ಚಟುವಟಿಕೆ ನಡೆಸುತ್ತಿದೆ.

ರಿಪಬ್ಲಿಕ್ ಟಿವಿ ಅಸ್ತಿತ್ವಕ್ಕೆ ಬಂದ ನಂತರ ತನ್ನ ಸ್ಪಷ್ಟ ಬಿಜೆಪಿ ಪರ ನಿಲುವಿನಿಂದ ಮತ್ತು ಸದಾ ಒಂದಲ್ಲೊಂದು ಸುದ್ದಿ ಮಾಡುತ್ತಲೇ ಇರುವ ಅರ್ನಬ್ ನೇತೃತ್ವದ ರಿಪಬ್ಲಿಕ್ ಟಿವಿ, ಟಿಆರ್ಪಿ ಸಮರದಲ್ಲಿ ಮೊದಲ ಸ್ಥಾನಕ್ಕೆ ಟೈಮ್ಸ್ ನೌ ಜೊತೆಗಿನ ಸಮರದಲ್ಲಿ ಮೇಲುಗೈ ಸಾಧಿಸಿದ್ದೇ ಹೆಚ್ಚು.

ಅರ್ನಬ್ ಗೋಸ್ವಾಮಿ ಹಸಿ ಸುಳ್ಳುಗಾರ ಎಂದ ರಾಜ್ದೀಪ್ಅರ್ನಬ್ ಗೋಸ್ವಾಮಿ ಹಸಿ ಸುಳ್ಳುಗಾರ ಎಂದ ರಾಜ್ದೀಪ್

ತನ್ನ ನೇರ, ನಿಷ್ಠುರ ಮತ್ತು ಇತರರಿಗೆ ಹೆಚ್ಚು ಮಾತನಾಡಲು ಅವಕಾಶ ನೀಡದ ನಡೆಯಿಂದ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದ ಅರ್ನಬ್ ಗೋಸ್ವಾಮಿ ಮಾಡುವ ತಪ್ಪಿಗಾಗಿ ಕಾಯುತ್ತಿದ್ದವರಿಗೆ, ಅರ್ನಬ್ ಗುಜರಾತ್ ಗಲಭೆ ವಿಚಾರದಲ್ಲಿ ಮಾಡಿದ ಭಾಷಣವನ್ನು ಇಟ್ಟುಕೊಂಡು, ತನ್ನ ಹಳೆಯ ಸಹದ್ಯೋಗಿಯ ವಿರುದ್ದ ರಾಜದೀಪ್ ಸರ್ದೇಸಾಯಿ ಠೊಂಕ ಕಟ್ಟಿ ನಿಂತಿದ್ದಾರೆ.

Recommended Video

Vikky Goswami husband of Mamta Kulkarni is a DON | OneIndia kannada

ಭಾರತೀಯ ಸುದ್ದಿವಾಹಿನಿ ಲೋಕದ 'ಶೋಮ್ಯಾನ್' ಅರ್ನಬ್, 2002ರಲ್ಲಿನ ಗುಜರಾತ್ ಗಲಭೆಯನ್ನು ಉಲ್ಲೇಖಿಸುತ್ತಾ ಮಾಡಿದ ಭಾಷಣವೊಂದರಲ್ಲಿ, ಗಲಭೆಯನ್ನು ವರದಿ ಮಾಡುತ್ತಿದ್ದ ವೇಳೆ, ಸಿಎಂ ನಿವಾಸದ ಪಕ್ಕ ನನ್ನ ಕಾರಿನ ಮೇಲೆ ದಾಳಿ ನಡೆಸಲಾಯಿತು ಎಂದು ಹೇಳಿದ್ದರು.

ಈ ವಿಡಿಯೋ ಶೇರ್ ಮಾಡಿ ಟ್ವೀಟ್ ಮಾಡಿದ ರಾಜದೀಪ್, "ವಾವ್! ಗುಜರಾತ್ ಗಲಭೆಯಲ್ಲಿ ಸಿಎಂ ನಿವಾಸದ ಪಕ್ಕ ನನ್ನ ಗೆಳೆಯ ಅರ್ನಬ್ ಗೋಸ್ವಾಮಿಯ ಕಾರಿನ ಮೇಲೆ ದಾಳಿ ನಡೆಸಲಾಯಿತು. ಸತ್ಯ, ಅವರು ಅಹಮದಾಬಾದ್ ಗಲಭೆಯನ್ನು ಕವರ್ ಮಾಡಿರಲಿಲ್ಲ," ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದರು.

ಅರ್ನಬ್ ತಪ್ಪೋ, ರಾಜದೀಪ್ ಸರೀನೋ, ಟ್ವಿಟ್ಟರ್ ನಲ್ಲಿ (#ArnabDidIt) ಅರ್ನಬ್ ಗೋಸ್ವಾಮಿಯನ್ನು ಟ್ವಿಟ್ಟಿಗರು ಸಮರ್ಥಿಸಿಕೊಂಡರು ಜೊತೆಗೆ ಕಿಚಾಯಿಸಿದರು. , ಮುಂದೆ ಓದಿ..

ಅರ್ನಬ್, ರಾಜದೀಪ್ ಎನ್ಡಿಟಿವಿಯಲ್ಲಿ ಕೆಲಸ ಮಾಡುತ್ತಿದ್ದರು

ಅರ್ನಬ್, ರಾಜದೀಪ್ ಎನ್ಡಿಟಿವಿಯಲ್ಲಿ ಕೆಲಸ ಮಾಡುತ್ತಿದ್ದರು

"ಇಂಡಿಯಾ ಟಿವಿ ವರದಿ ಪ್ರಕಾರ", ಹದಿನೈದು ವರ್ಷದ ಹಿಂದೆ (2002, ಗೋಧ್ರಾ ಹತ್ಯಾಕಾಂಡ) ಅರ್ನಬ್, ರಾಜದೀಪ್ ಮತ್ತಿತರು ಎನ್ಡಿಟಿವಿಯಲ್ಲಿ ಕೆಲಸ ಮಾಡುತ್ತಿದ್ದರು. ಗುಜರಾತ್ ಗಲಭೆಯನ್ನು ವರದಿ ಮಾಡುತ್ತಿರುವಾಗ,ಸಿಎಂ ಕಚೇರಿಯ ಬಳಿ ದಾಳಿ ನಡೆದಿತ್ತು ಎಂದು ಏನು ಅರ್ನಬ್ ಹೇಳುತ್ತಾರೋ, ಅದು ಸುಳ್ಳು. ಆ ಸಮಯದಲ್ಲಿ ಅರ್ನಬ್ ಅಲ್ಲಿರಲಿಲ್ಲ, ಬದಲಿಗೆ ರಾಜದೀಪ್ ಅಲ್ಲಿದ್ದರು ಎಂದು ಇಂಡಿಯಾ ಟಿವಿ ತನ್ನ ವರದಿಯಲ್ಲಿ ಹೇಳಿದೆ.

ಅರ್ನಬ್ ಗೋಸ್ವಾಮಿಯನ್ನು ಕಡೆಗಣಿಸುವಂತಿಲ್ಲ

ಅರ್ನಬ್ ಗೋಸ್ವಾಮಿಯ ಈ ವಿಚಾರವನ್ನು ಇಟ್ಟುಕೊಂಡು ನೀವು ತಮಾಷೆ ಮಾಡಬಹುದು, ಆದರೆ ಆತನನ್ನು ಎಂದಿಗೂ ಕಡೆಗಣಿಸುವಂತಿಲ್ಲ. ಸತ್ಯ ಏನು ಎನ್ನುವುದನ್ನು ಹೊರಗೆಳೆದ ವ್ಯಕ್ತಿ ಆತ..

ಅರ್ನಬ್ ಅಂದರೆ ಟಿಆರ್ಪಿ, ಟಿಆರ್ಪಿ ಅಂದರೆ ಅರ್ನಬ್

ಅರ್ನಬ್ ಅಂದರೆ ಟಿಆರ್ಪಿ, ಟಿಆರ್ಪಿ ಅಂದರೆ ಅರ್ನಬ್

ಅರ್ನಬ್ ಅಂದರೆ ಟಿಆರ್ಪಿ, ಟಿಆರ್ಪಿ ಅಂದರೆ ಅರ್ನಬ್. ಹಾಗಿರುವಾಗ, ನಿಮಗೆ ಟಿಆರ್ಪಿ ಬೇಕಾದರೆ ಅರ್ನಬ್ ವಿಚಾರವನ್ನು ಬಿಡಲು ಸಾಧ್ಯವಿಲ್ಲ. ಹಾಗಾಗಿ, ಪ್ರೈಂ ಟೈಂನಲ್ಲಿ ಅರ್ನಬ್ ವಿಚಾರ ಚಾಲ್ತಿಯಲ್ಲಿದೆ.

ಕ್ವಿಟ್ ಇಂಡಿಯಾ ಚಳುವಳಿಯ ವೇಳೆ, ಬಾಪು ಜೊತೆ ಅರ್ನಬ್

ಕ್ವಿಟ್ ಇಂಡಿಯಾ ಚಳುವಳಿಯ ವೇಳೆ, ಬಾಪು ಜೊತೆ ಅರ್ನಬ್

ಮೊಘಲರ ವಿರುದ್ದ ಕ್ವಿಟ್ ಇಂಡಿಯಾ ಚಳುವಳಿಯ ವೇಳೆ, ಬಾಪು ಜೊತೆ ಅರ್ನಬ್ ಎನ್ನುವ ಫೋಟೋಶಾಪ್ ಮಾಡಿದ ಚಿತ್ರದೊಂದಿಗಿನ ಟ್ವೀಟ್. ನಿಮಗೆ ಹದಿನೈದು ಲಕ್ಷ ರೂಪಾಯಿ ನೀಡಿದ್ದು ಯಾರು ಎಂದು ಅರ್ನಬ್ ಗೋಸ್ವಾಮಿಯನ್ನು ಕಿಚಾಯಿಸುವ ಟ್ವೀಟ್.

ಅಲೆಕ್ಸಾಂಡರ್ ಸಂಶೋಧನೆಯನ್ನು ತಡೆದಿದ್ದೇ ಅರ್ನಬ್

ಅಲೆಕ್ಸಾಂಡರ್ ಸಂಶೋಧನೆಯನ್ನು ತಡೆದಿದ್ದೇ ಅರ್ನಬ್

WTC ಕೇಂದ್ರದಲ್ಲಿ ನಡೆಯುವ ದಾಳಿಯನ್ನು ತಡೆದು, 35,647 ಜನರನ್ನು ರಕ್ಷಿಸಿದ ಅರ್ನಬ್. ಅಯ್ಯೋ.. ಅಲೆಕ್ಸಾಂಡರ್ ಸಂಶೋಧನೆಯನ್ನು ತಡೆದಿದ್ದೇ ಅರ್ನಬ್ ಎಂದು ಯಾರೂ ಹೇಳಿಲ್ಲವೇ ಎನ್ನುವ ಮತ್ತೊಂದು ಕಾಲೆಳೆಯುವ ಟ್ವೀಟ್.

ಪತ್ರಿಕೋದ್ಯಮದ ಶೈಲಿಯನ್ನೇ ಬದಲಿಸಿದ ವ್ಯಕ್ತಿ ಅರ್ನಬ್

ಪತ್ರಿಕೋದ್ಯಮದ ಶೈಲಿಯನ್ನೇ ಬದಲಿಸಿದ ವ್ಯಕ್ತಿ ಅರ್ನಬ್

ಪತ್ರಿಕೋದ್ಯಮದ ಶೈಲಿಯನ್ನೇ ಬದಲಿಸಿದ ವ್ಯಕ್ತಿ ಅರ್ನಬ್ ಮತ್ತು ಇವರ ಸಹದ್ಯೋಗಿಗಳು ಕೆಲಸಕ್ಕಾಗಿ ದೊಡ್ದ ಮಾದ್ಯಮ ಸಂಸ್ಥೆಯ ಹಿಂದೆ ಬಿದ್ದಿದ್ದರು. ಎಲ್ಲರನ್ನೂ ಟ್ರೋಲ್ ಮಾಡುವ ಅರ್ನಬ್, ಈಗ ಅವರೇ ಟ್ರೋಲ್ ಆಗುತ್ತಿದ್ದಾರೆ.

English summary
Twitter users are having the time of their lives mocking and supporting Republic TV Editor-in-Chief Arnab Goswami after his former colleague Rajdeep Sardesai exposed a lie he was spreading about covering Gujarat riots of 2002.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X